ಬೆಳ್ತಂಗಡಿ: ಹಿಂದೂ ಧರ್ಮದಲ್ಲಿ ಕಲ್ಲು, ಮಣ್ಣು, ನೀರು, ಪಶು-ಪಕ್ಷಿಗಳಲ್ಲಿ ದೈವತ್ವವನ್ನು ಕಾಣುವ ನಂಬಿಕೆ ತಲತಲಾಂತರಗಳಿಂದ ಬಂದಿರುವಂತದ್ದು. ಅಂತಹದರಲ್ಲಿ ಮೀನುಗಳನ್ನು ದೇವರ ಮೀನುಗಳೆಂದು ಆರಾಧಿಸಲ್ಪಡುವ, ಇತಿಹಾಸ ಪ್ರಸಿದ್ಧ ಮತ್ಸ್ಯ ಕ್ಷೇತ್ರ ಶಿಶಿಲೇಶ್ವರ ದೇವಸ್ಥಾನದಲ್ಲಿ ಮೀನುಗಳನ್ನು ಕಳ್ಳರು ಕಳ್ಳತನ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ದೇವರ ಮೀನುಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರ ಪೈಕಿ ಅರಸಿನಮಕ್ಕಿ ಮಸೀದಿಯ ಧರ್ಮಗುರು ಕೂಡ ಸೇರಿದ್ದು, ಒಟ್ಟು 7 ಜನ ಕಳ್ಳರನ್ನು ಇಲ್ಲಿನ ಸ್ಥಳೀಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ಶಿಶಿಲೇಶ್ವರ ದೇವಾಲಯದ ದೇವರ ಕೆರೆಯಲ್ಲಿದ್ದ ಮೀನುಗಳನ್ನು ರಾತ್ರಿ ವೇಳೆ ಕಳ್ಳರು ಕದ್ದು ಕೊಂಡೊಯ್ಯುತ್ತಿದ್ದರು. ಈ ಬಗ್ಗೆ ಸ್ಥಳೀಯ ಹಿಂದೂ ಜಾಗರಣ ವೇದಿಕೆ ಸಂಘಟನೆ ಕಾರ್ಯಕರ್ತರು ನಿನ್ನೆ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಲು ಕಾದು ಕುಳಿತಿದ್ದರು.
ಅದರಂತೆ ರಾತ್ರಿ ವೇಳೆ ಕಳ್ಳರು ಮೀನು ಕಳ್ಳತನಕ್ಕೆ ಬಂದಿದ್ದು, ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ನಂತರ ಅರಸಿನಮಕ್ಕಿ ಮಸೀದಿಯ ಧರ್ಮಗುರು ಸಹಿತ 7 ಮಂದಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.
Be the first to comment