ವಿಜಯಪುರ ಜಿಪಂ ಅಧ್ಯಕ್ಷ ನೇದಲಗಿ ರಾಜಿನಾಮೆ ಅಂಗೀಕರಿಸಿದ ಸರಕಾರ: ಹಂಗಾಮಿ ಅಧ್ಯಕ್ಷರಾಗಿ ಪ್ರಭುಗೌಡ ದೇಸಾಯಿ ಅಧಿಕಾರ ಸ್ವೀಕಾರ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ರಾಜ್ಯ ಸುದ್ದಿಗಳು



ವಿಜಯಪುರ:

ವಿಜಯಪುರ ಜಿಲ್ಲಾ ಪಂಚಾಯತ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಅವರು ಮೇ.29 ರಂದು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು ಜೂ.15 ಸಂಜೆ ರಾಜ್ಯ ಸರಕಾರ ನಾಜಿನಾಮೆಯನ್ನು ಅಂಗೀಕರಿಸಿ ಅಧಿಕೃತ ಜ್ಞಾಪನ ಪತ್ರ ಹೊರಡಿಸಿದೆ.



ಕರ್ನಾಟಕ ಗ್ರಾಮ ಸ್ವರಾಜ ಮತ್ತು ಪಂಚಾಯತ ರಾಜ್ ಅಧಿನಿಯಮ 1993 ಪ್ರಕರಣ 179(1)ರ ಪ್ರಕಾರ ರಾಜಿನಾಮೆ ನೀಡಿದ 15 ದಿನಗಳ ೊಳಗೆ ರಾಜಿನಾಮೆಯನ್ನು ಹಂಪಡೆಯಬೇಕು. ಆದರೆ ಶಿವಯೋಗೆಪ್ಪ ಅವರು ರಾಜಿನಾಮೆಯನ್ನು ಹಿಂಪಡೆಯದಕಾರಣ ನಿಯಮಾವಳಿ ಪ್ರಕಾರ ಸರಕಾರ ರಾಜಿನಾಮೆಯನ್ನು ಅಂಗೀಕರಿಸಿದೆ. ಅದರಂತೆ ಕರ್ನಾಟಕ ಗ್ರಾಮ ಸ್ವರಾಜ ಮತ್ತು ಪಂಚಾಯತ ರಾಜ್ ಅಧಿನಿಯಮ 1993ರ ಪ್ರಕರಣ 194(ಎ)ರನ್ವಯ ಜಿಲ್ಲಾ ಪಂಚಾಯತ ಅಧ್ಯಕ್ಷರ ಅಧಿಕಾರ ಮತ್ತು ಕರ್ತವ್ಯಗಳನ್ನು ಉಪಾಧ್ಯಕ್ಷರು ಮುಂದುವರೆಸಿಕೊಂಡು ಹೋಗಬಹುದಾಗಿದೆ ಎಂದು ರಾಜ್ಯ ಸರಕಾರದ ಆದೇಶ ಹೊರಡಿಸಿದೆ.

ಅಂಗಾಮಿ ಅಧ್ಯಕ್ಷರಾಗಿ ಪ್ರಭುಗೌಡ ದೇಸಾಯಿ(ಮಡಿಕೇಶ್ವರ) ಅಧಿಕಾರ ಸ್ವೀಕಾರ:

ಈಗಾಗಲೇ ವಿಜಯಪುರ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾಗಿ ಪ್ರಭುಗೌಡ ದೇಸಾಯಿ(ಮಡಿಕೇಶ್ವರ) ಅವರಿದ್ದು ಸದ್ಯಕ್ಕೆ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸುತ್ತಿದ್ದಾರೆ. ಒಟ್ಟಿನಲ್ಲಿ ವಿಜಯಪುರ ಜಿಲ್ಲಾ ಪಂಚಾಯತಿಯಲ್ಲಿ ಅಧಿಕಾರವು ದೇಸಾಯಿ ಅವರಿಗೆ ವರಿಸುತ್ತಿರುವುದು ಇದೇ ಮೊದಲಲ್ಲಾ. ಇವರ ಪಾಲಿಗೆ ಅದೃಷ್ಠದ ಲಕ್ಷ್ಮಿ ಮನೆ ಮಗಳಾಗಿದ್ದಾಳೆ ಎನ್ನುವ ಮಾತು ಕೇಳಿಬರುತ್ತಿವೆ. ಮಂಗಳವಾರ ದೇಸಾಯಿ ಅವರು ವಿಜಯಪುರ ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.



 

Be the first to comment

Leave a Reply

Your email address will not be published.


*