ಕೂಡ್ಲಿಗಿ ಎನ್,ಈ,ಕೆ,ಎಸ್,ಆರ್ಟಿಸಿ ಘಟಕ ಸಂಪೂಣ೯ ಸ್ಯಾನಿಟೇಷನ್‌

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಎನ್ಈಕೆಎಸ್ಆರ್ಟಿಸಿ ಘಟಕ, ಸಂಪೂಣ೯ ಸ್ಯಾನಿಟೇಷನ್‌ ಮಾಡಲಾಗಿದೆ ಎಂದು ಘಟಕದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಈ ಮೂಲಕ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಆಧ್ಯತೆ ನೀಡಲಾಗಿದೆ,ಕೊರೋನಾ ವಿರುದ್ಧ ಅಗತ್ಯ ಜಾಗೃತ ಕ್ರಮಗಳನ್ನು ಕೂಡ್ಲಿಗಿ ಘಟಕದಲ್ಲಿ ಕೈಗೊಳ್ಳಲಾಗಿದೆ.

ಸುರಕ್ಷತಾ ಪ್ರಯಾಣಕ್ಕೆ ಪ್ರಯಾಣಿಕರಿಗೆ ಸಹಕರಿಸಲಾಗಿದೆ ಮತ್ತು ಸಕಾ೯ರದ ನಿಯಮಾವಳಿಗಳನ್ನು ಪಾಲಿಸಲಾಗಿದೆ ಎಂದು ಘಟಕಾಧಿಕಾರಿಗಳು ತಿಳಿಸಿದ್ದಾರೆ.ಘಟಕದ ಅಧಿಕಾರಿವಗ೯,ಸಂಪೂಣ೯ ಸಿಬ್ಬಂದಿ,ಕಾಮಿ೯ಕರು,ಕುಶಲ ಕಮಿ೯ಯರು ಎಲ್ಲರೂ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ.ಬಸ್ ಡಿಪೋ,ಬಸ್ ನಿಲ್ದಾಣ,ಬಸ್ ನ ಪ್ರತಿಯೊಂದು ಭಾಗವನ್ನು ಪ್ರತಿಭಾರಿಯೂ ಸ್ಯಾನಿಟೇಷನ್‌ಗೆ ಒಳಪಡಿಸಲಾಗುತ್ತದೆ.ನಿಲ್ದಾಣ ಮತ್ತು ಸುತ್ತಲಿನ ವಾತಾವರಣವನ್ನು ನೈಮ೯ಲ್ಯಗೊಳಿಸಲಾಗಿದೆ, ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ,ಪ್ರಯಾಣಿಕರಿಗೆ ಪ್ರಾಥಮಿಕ ಸ್ಯಾನಿಟೇಷನ್‌,ಟೆಂಪರ್ಚೆರ್ ಪರೀಕ್ಷೆ,ಪ್ರಯಾಣಿಕರ ಪ್ರಯಾಣದ ವಿವಿರ,ವಿಳಾಸ, ಅವರ ಸಂಕ್ಷಿಪ್ತ ಮಾಹಿತಿ ಪಡೆಯಲಾಗುತ್ತದೆ,ಬಸ್ ನಲ್ಲಿ ಹತ್ತು ವಷ೯ಗಳಿಗಿಂತ ಕಡಿಮೆ ಹಾಗು ಅರವತ್ತು ವಯಸ್ಸಿನ ಮೇಲ್ಪಟ್ಟವರನ್ನು,ತೀರಾ ಅನಾರೋಗ್ಯ ಪೀಡಿತರನ್ನು ಬಸ್ ಪ್ರಯಾಣದಿಂದ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಪ್ರತಿ ಭಾರಿಯೂ ಬಸ್ ಒಳಗೆ ಸ್ಯಾನಿಟೇಷನ್‌ ಮಾಡಲಾಗುತ್ತದೆ, ಪ್ರಯಾಣಿಕರಲ್ಲಿ ಪರಸ್ಪರ ಅಗತ್ಯ ಅಂತರ ಕಾಯ್ದು ಕೊಳ್ಳಲಾಗಿದೆ,ಸುರಕ್ಷತಾ ನಿಯಮಗಳನ್ನು ಪಾಲಿಸಲು ಬಸ್ ನಿವಾ೯ಹಕ ಮತ್ತು ಚಾಲಕರಿಗೆ ಸೂಚಿಸಲಾಗಿದೆ.ಆದ್ದರಿಂದಾಗಿ ಪ್ರಯಾಣಿಕರು ಘಟಕದ ಸಿಬ್ಬಂದಿಯೊಂದಿಗೆ ಸ್ಪಂಧಿಸಬೇಕು ಮತ್ತು ಸುರಕ್ಷತೆಯ ಬಸ್ ಪ್ರಯಾಣಕ್ಕೆ ಮುಂದಾಗಬೇಕೆಂದು ಕೂಡ್ಲಿಗಿ ಘಟಕದ ಅಧಿಕಾರಿಗಳು ಈ ಮೂಲಕ ಸಾವ೯ಜನಿಕರಲ್ಲಿ ಕೋರಿದ್ದಾರೆ.

ವರದಿ:- ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Be the first to comment

Leave a Reply

Your email address will not be published.


*