P.M.&C.M.ಫಂಡ್ ಗೆ ನೀಡುವ ದೇಣಿಗೆ ಹಸಿದವರ ಹೊಟ್ಟೆ ತುಂಬಿಸುವುದೇ.?

ವರದಿ:- ಪ್ರಕಾಶ ಮಂದಾರ ಹರಿಹರ

ಅಂಕಣ

ಸಂಕಷ್ಟದ ಪರಿಸ್ಥಿತಿಯ ಸಂದರ್ಭದಲ್ಲಿ ಮಾನವೀಯತೆಯ ದೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾದ ಜನತೆಗೆ ಇರುವಂತಹ ಮಹಾನುಭಾವರು ತಮ್ಮ ಕೈಲಾದ ಸಹಾಯದ ಹಸ್ತವನ್ನು ದೇಣಿಗೆ ಹಾಗೂ ಇತರ ವಸ್ತುಗಳ ರೂಪದಲ್ಲಿ ಆಳುವಂಥ ಸರ್ಕಾರದ ನಿಧಿಗೆ ನೀಡುತ್ತಾರೆ.

ದೇಣಿಗೆ ನೀಡುವ ಮಹಾನುಭಾವರ ಉದ್ದೇಶ ಹಸಿದವರ ಹೊಟ್ಟೆ ತುಂಬಿಸುವುದು ಆಗಿರುತ್ತದೆ .ಆದರೆ ಅವರು ನೀಡುವಂಥ ದೇಣಿಗೆಯ ಹಣ ಅಥವಾ ವಸ್ತು ಹಸಿದವರ ಹೊಟ್ಟೆ ತುಂಬಿಸುತ್ತದೆಯೇ ಎಂದು ನೋಡಲು ಹೊರಟರೆ ಅದು ಸುಳ್ಳಿನ ಮಾತಾಗುತ್ತದೆ. ಮಹಾನುಭಾವರ ಕೋಟಿಗಟ್ಟಲೆ ಹಣ ಹಾಗೂ ವಸ್ತುಗಳು ಭ್ರಷ್ಟ ರಾಜಕಾರಣಿಗಳ ಪಾಲಾಗುತ್ತಿದೆ ಎಂಬುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ .ಕೋಟಿ ವಿದ್ಯೆಗಿಂತ ಮಾನವೀಯ ಮೌಲ್ಯಗಳನ್ನು ಹೊಂದಿರುವ ವಿದ್ಯೆ ಮೇಲು ಎಂಬ ಹಿರಿಯರ ಮಾತು ಸತ್ಯವಾದದ್ದು .ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡ ವ್ಯಕ್ತಿ ಯಾವುದೇ ರೀತಿಯ ಸಹ ಪ್ರಚಾರದ ಅಪೇಕ್ಷೆ ಇಲ್ಲದೆ ಸಂಕಷ್ಟದ ಪರಿಸ್ಥಿತಿಯ ಸಂದರ್ಭದಲ್ಲಿ ದೇಶದ ಜನತೆಗೆ ನಾವು ಸದಾ ನಿಮ್ಮೊಂದಿಗಿದ್ದೇವೆ ಎಂಬ ಸದುದ್ದೇಶದಿಂದ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಯವರ ನಿಧಿಗೆ ಕೋಟಿಗಟ್ಟಲೇ ಹಣವನ್ನು ದೇಣಿಗೆಯಾಗಿ ನೀಡುತ್ತಾರೆ, ನೀಡುತ್ತಾ ಬಂದಿದ್ದಾರೆ.

ಮಹಾನುಭಾವ ಅವರು ನೀಡುವಂಥ ದೇಣಿಗೆ ಮತ್ತೊಂದು ರೀತಿಯಲ್ಲಿ ಅನುಮಾನ ಹುಟ್ಟಿಸುತ್ತದೆ .ಕಾರಣ ಅವರು ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಯವರ ನಿಧಿಗೆ ನೀಡುವಂತೆ ಕೋಟಿಗಟ್ಟಲೆ ಹಣ ಆಳುವಂಥ ಸರ್ಕಾರದ ಮಂತ್ರಿ ಮಹಾನುಭಾವರಿಗೆ ಮೆಚ್ಚಿಸಿ ಮುಂದಿನ ದಿನದಲ್ಲಿ ಒಂದರಿಂದ ಎರಡು ಪಟ್ಟು ಸರ್ಕಾರದ ಕಡೆಯಿಂದ ತಮ್ಮ ಕೆಲಸ ಕಾರ್ಯಗಳನ್ನು ಸಾಧಿಸಿಕೊಳ್ಳುತ್ತಾರೆ ಎಂಬ ಅನುಮಾನ ಕಾಡತೊಡಗಿದೆ.

ಏಕೆಂದರೆ ದೇಣಿಗೆ ನೀಡುವಂಥ ಮಹಾನುಭಾವರು ನೇರವಾಗಿ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಇರುವಂಥ ಜನರ ಕಷ್ಟಕ್ಕೆ ಸ್ಪಂದಿಸಿ ಸಹಾಯ ಸಹಾಯ ಮಾಡಬಹುದು ಅಲ್ಲವೇ.? ಇವರಿಗೂ ತಿಳಿದಿರುತ್ತದೆ ನಾವು ನೀಡುವ ದೇಣಿಗೆ ಹಣ ಜನಸಾಮಾನ್ಯರಿಗೆ ತಲುಪದೆ ಭ್ರಷ್ಟ ರಾಜಕಾರಣಿಗಳ ಪಾಲಾಗುತ್ತಿದೆ ಎಂಬ ವಿಚಾರ. ಆದರೂ ಅವರು ಮತ್ತೆ ಮತ್ತೆ ಸರ್ಕಾರದ ನಿಧಿಗೆ ದೇಣಿಗೆಯನ್ನು ನೀಡುತ್ತಲೇ ಬರುತ್ತಿದ್ದಾರೆ .ಗೊತ್ತಿದ್ದು ಗೊತ್ತಿದ್ದು ಸರ್ಕಾರದ ನಿಧಿಗೆ ನೀಡುವ ಹಣ ಹಿಂದಿನ ಮರ್ಮ ಎಷ್ಟೋ ಜನರಿಗೆ ತಿಳಿದಿಲ್ಲ.

ಕೊರಾನಾ ಸಂಕಷ್ಟದ ಸಮಯದಲ್ಲಿ ದೇಶದ ಅತ್ಯುನ್ನತ ಗೌರವ ಸ್ಥಾನದಲ್ಲಿರುವ ಮಹಾನುಭಾವರೊಬ್ಬರು ಸರ್ಕಾರದ ನಿಧಿಗೆ ಕೋಟಿಗಟ್ಟಲೇ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ .ಈಗಾಗಲೇ ಹಲವು ಪತ್ರಿಕೆ ಮತ್ತು ದೃಶ್ಯ ಮಾಧ್ಯಮದಲ್ಲಿ ಅವರು ನೀಡಿದ ದೇಣಿಗೆಯ ವಿಚಾರ ರಾಜ್ಯದ ಪ್ರತಿ ಮನೆಯ ಸದಸ್ಯರಿಗೆ ತಿಳಿದಿದೆ.

ಇವರು ನೇರವಾಗಿ ಕೋಟಿಗಟ್ಟಲೆ ಹಣವನ್ನು ಸರ್ಕಾರದ ನಿಧಿಗೆ ನೀಡುವ ಬದಲು ತಮ್ಮ ಸಂಸ್ಥೆಯ ವ್ಯಾಪ್ತಿಯಲ್ಲಿ ಸಾಲ ಪಡೆದ ಸಂಘದ ಸದಸ್ಯರ ಸಾಲವನ್ನು ಕನಿಷ್ಠ ಹತ್ತು ಸಾವಿರದ ಒಳಗೆ ಇರುವ ಎಲ್ಲಾ ಸಾಲವನ್ನು ಮನ್ನಾ ಮಾಡಬಹುದಿತ್ತು.?ಈ ರೀತಿ ತಮ್ಮ ಸಂಸ್ಥೆಯ ಸದಸ್ಯರ ಹತ್ತು ಸಾವಿರದ ಒಳಗೆ ಸಾಲ ಮನ್ನಾ ಮಾಡಿದ್ದರೆ ಇಂದು ಅವರು ನೀಡಿದ್ದ ಕೋಟಿಗಟ್ಟಲೆ ಹಣ ಕೊರಾನಾ ಸಂಕಷ್ಟದ ಪರಿಸ್ಥಿತಿಯ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಸಹಾಯವಾಗುತ್ತಿತ್ತು.

ಆದರೆ ಅವರು ಆ ರೀತಿ ಮಾಡಲಿಲ್ಲ ಅಂದರೆ ಇವರ ನೆರವಾದ ಉದ್ದೇಶ ಜನರ ಕಷ್ಟಕ್ಕೆ ಸ್ಪಂದಿಸುವುದೇ.?ಅಥವಾ ಸರ್ಕಾರದ ಆಳುವಂಥ ಜನಪ್ರತಿನಿಧಿಯನ್ನು ಮೆಚ್ಚಿಸಲು .?ಎಂಬುದನ್ನು ಜನಸಾಮಾನ್ಯರೇ ಚರ್ಚೆ ಮಾಡಲಿ.

ಈಗಾಗಲೇ ರಾಜ್ಯದ ಜನತೆ ಸಂಕಷ್ಟದ ಪರಿಸ್ಥಿತಿಯ ಸಂದರ್ಭದಲ್ಲಿ ಜನತೆಗೆ ನೀಡುತ್ತಿರುವ ಕಿಟ್ಟುಗಳನ್ನು ಆಳುವಂತಹ ಸರ್ಕಾರದ ಸಚಿವರೊಬ್ಬರು ದಾಸ್ತಾನು ಮಾಡಿದ್ದಾರೆ ಎಂಬ ಆರೋಪವನ್ನು ವಿರೋಧ ಪಕ್ಷದವರು ಇಂದು ಪ್ರತಿಭಟನೆ ಮಾಡುವ ಮೂಲಕ ರಾಜ್ಯದ ಜನತೆಯ ಮುಂದೆ ಬಹಿರಂಗ ಪಡಿಸಿದ್ದಾರೆ ಇದು ಎಷ್ಟರ ಮಟ್ಟಿಗೆ ಸುಳ್ಳು ಸತ್ಯ ಎಂಬುದು ಮುಂದಿನ ದಿನದಲ್ಲಿ ಗೊತ್ತಾಗಬೇಕಾಗಿದೆ .

ಈ ಉದ್ದೇಶದಿಂದ ನಾನು ಇಂದು ಮಹಾನುಭಾವರ ದೇಣಿಗೆ ಭ್ರಷ್ಟರ ಪಾಲಾಗುತ್ತಿದೆ ಎಂಬ ವಿಚಾರವನ್ನು ರಾಜ್ಯದ ಜನತೆಯ ಮುಂದೆ ನಮ್ಮ ಪತ್ರಿಕೆಯು ವಿಚಾರ ಮಂಡಿಸಿದೆ.

ನಮ್ಮ ಸುದ್ದಿಯೂ ನೇರ, ನೈಜ್ಯ ,ನಿಖರವಾಗಿ ಜನಸಾಮಾನ್ಯರ ಮುಂದೆ ಪತ್ರಿಕಾ ಧರ್ಮದ ಎಲ್ಲ ನಿಯಮಗಳ ಅನುಸಾರವಾಗಿ ಸುದ್ದಿಯನ್ನು ಪ್ರಾಮಾಣಿಕವಾಗಿ ಪ್ರಚಾರ ಪಡಿಸುತ್ತಿದ್ದೇವೆ.

Be the first to comment

Leave a Reply

Your email address will not be published.


*