ಕೃಷಿ ಪರಿಕರಣ ಮಾರಾಟ ಮಳಿಗೆಗಳ ಮೇಲೆ ದಾಳಿ ನ್ಯೂನತೆ ಕಂಡುಬಂದ 64 ಮಳಿಗೆಗಳಿಗೆ ನೋಟಿಸ್

ವರದಿ:-ಶರಣಪ್ಪ ಹೆಳವರ ಬಾಗಲಕೋಟ

 ರೈತ ಧ್ವನಿ

ಬಾಗಲಕೋಟೆ: ಜಿಲ್ಲೆಯಲ್ಲಿ ಸಂಶಯಾಸ್ಪದ ರಸಗೊಬ್ಬರ ಮಾರಾಟ ಜಾಲ ಪತ್ತೆಗಾಗಿ ಬೆಳಗಾವಿ ವಲಯದ ಜಾಗೃತ ಕೋಶದ ಜಂಟಿ ಕೃಷಿ ನಿರ್ದೇಶಕರ ನೇತೃತ್ವದ 10 ತಂಡಗಳು ಜಿಲ್ಲೆಯಾದ್ಯಂತ 90 ಕೃಷಿ ಪರಿಕರ ಮಾರಾಟಕ ಮಳಿಗೆಗಳ ಮೇಲೆ ದಾಳಿ ಶುಕ್ರವಾರ ದಾಳಿ ನಡೆಸಿತು.

42 ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಪರಿವೀಕ್ಷಕರು ಮತ್ತು ಜಾಗೃತ ದಳದ 3 ಜಾಗೃತ ಕೋಶದ ಅಧಿಕಾರಿಗಳನ್ನು ಒಳಗೊಂಡ 10 ತಂಡಗಳನ್ನು ರಚಿಸಿ, ಜಿಲ್ಲೆಯಾದ್ಯಂತ ಅಂದಾಜು 90 ಕೃಷಿ ಪರಿಕರ ಮಾರಾಟ ಮಳಿಗೆಗಳ ಮೇಲೆ ಒಂದೇ ಬಾರಿ ದಾಳಿ ಮಾಡಲಾಯಿತು. ಪರಿಶೀಲನೆ ವೇಳೆ ನ್ಯೂನತೆಗಳು ಹಾಗೂ ಕಾನೂನು ಉಲ್ಲಂಘನೆ ಮಾಡಿದ 64 ಮಳಿಗೆಗಳ ಮೇಲೆ ಕಾರಣ ಕೇಳುವ ನೋಟಿಸ್‍ಗಳನ್ನು ನೀಡಲಾಯಿತು. ನ್ಯೂನತೆಗಳನ್ನು ತಿದ್ದಿಕೊಳ್ಳಲು ಸಮಯ ನೀಡಿ ಮತ್ತು ಕಾನೂನು ಉಲ್ಲಂಘನೆ ಮುಂದುವರೆದರೆ ಪರಿಕರ ಮಾರಾಟ ಪರಿವಾನಿಗೆ ರದ್ದುಗೊಳಿಸಲಾಗುವುದೆಂದು ಎಂದು ಎಚ್ಚರಿಕೆ ನೀಡಲಾಯಿತು.
ಎಲ್ಲ ಪರಿಕರಗಳ ಗರಿಷ್ಠ ಮಾರಾಟ ಬೆಲೆಯನ್ನು ಸೂಚನಾ ಫಲಕದಲ್ಲಿ ನಮೂದಿಸಬೇಕು, ಕಡ್ಡಾಯವಾಗಿ ಪರಿಕರಗಳ ವಹಿವಾಟದ ರಸೀದಿಯನ್ನು ರೈತರಿಗೆ ನೀಡಬೇಕು ಎಂದು ಎಚ್ಚರಿಸಿದರು. ಪರವಾನಿಗೆ ಇಲ್ಲದೇ ಅಕ್ರಮವಾಗಿ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ದಾಸ್ತಾನು ಮತ್ತು ಮಾರಾಟ ಮಾಡುವದು ಹಾಗೂ ಪರಿವಾನಿಗೆ ಇದ್ದರೂ, ಸಂಸ್ಥೆಗಳ ಮೂಲ ಪ್ರಮಾಣ ಪತ್ರಗಳನ್ನು ಹೊಂದಿಲ್ಲದ ಪರಿಕರಗಳನ್ನು ಮಾರುವುದು ಅಪರಾಧವಾಗಿದ್ದು ಅಂತಹವರ ವಿರುದ್ಧ ಬೀಜ ಅಧಿನಿಯಮ, ರಸಗೊಬ್ಬರ ನಿಯಂತ್ರಣ ಕಾಯ್ದೆ, ಕೀಟನಾಶಕ ಕಾಯ್ದೆ ಮತ್ತು ಅವಶ್ಯಕ ವಸ್ತುಗಳ ಕಾಯ್ದೆಯಡಿ ಮೊಕದ್ದಮೆ ಹೂಡಲಾಗುವುದೆಂದರು.
ಜಂಟಿ ಕೃಷಿ ನಿರ್ದೇಶಕಿ ಡಾ|| ಚೇತನಾ ಪಾಟೀಲ ಹಾಗೂ ಬೆಳಗಾವಿ ವಲಯದ ಜಾಗೃತ ಕೋಶದ ಜಂಟಿ ಕೃಷಿ ನಿರ್ದೇಶಕ ಡಾ|| ಎಸ್.ಎಸ್.ಪಾಟೀಲ ನೇತೃತ್ವದ ತಂಡದಲ್ಲಿ ಜಿಲ್ಲೆಯ ಉಪ ಕೃಷಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರ, ಸಹಾಯಕ ಕೃಷಿ ನಿರ್ದೇಶಕರು (ಜಾರಿ ದಳ) ಹಾಗೂ ಕೃಷಿ ಅಧಿಕಾರಿಗಳು ಇದ್ದರು.

Be the first to comment

Leave a Reply

Your email address will not be published.


*