ಜೀಲ್ಲಾ ಸುದ್ದಿಗಳು
ಬೀದರ ಮೇ 14 (ಅಂಬಿಗ ನ್ಯೂಸ್ ): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಕಾರ್ಮಿಕರು, ರೈತರು ಹಾಗೂ ಮಧ್ಯಮ ವರ್ಗದವರನ್ನು ಅಭಿವೃದ್ಧಿಯ ಆಧಾರ ಸ್ತಂಭ ಎಂದು ಪರಿಗಣಿಸಿದೆ ಎನ್ನುವುದಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೀಡಿದ ಪ್ಯಾಕೇಜ್ ಸಾಕ್ಷಿ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಮತ್ತು ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಹೇಳಿದ್ದಾರೆ.
ರೈತರು, ವಲಸೆ ಕಾರ್ಮಿಕರು, ಬೀದಿ ಬದಿಯ ವ್ಯಾಪಾರಸ್ಥರು ಊಟ, ವಸತಿ ಮತ್ತು ಉದ್ಯೋಗವನ್ನು ಗಮದಲ್ಲಿಟ್ಟುಕೊಂಡು ಪ್ಯಾಕೇಜ್ ರೂಪಿಸಿರುವುದು ನೀಜಕ್ಕೂ ಅಭಿನಂದನೀಯ. ಪ್ರಧಾನಿ ಮೋದಿಯವರು ಎಲ್ಲ ಶ್ರಮೀಕರಿಗೆ ಕೈ ಹಿಡಿದಿದ್ದು ಸಂತಸ ತಂದಿದೆ ಎಂದು ಅವರು ಸಚಿವರಾದ ಚವ್ಹಾಣ್ ಅವರು ತಿಳಿಸಿದ್ದಾರೆ.
ಕಿಸಾನ್ ಕ್ರೆಡಿಟ್ ಮೂಲಕ 2 ಲಕ್ಷ ಕೋಟಿಯನ್ನು 2.5 ಲಕ್ಷ ಕೋಟಿ ರೈತರಿಗೆ ಮೀನುಗಾರರಿಗೆ ಹಾಗೂ ಪಶುಪಾಲಕರಿಗೆ ನೀಡಲಾಗುತ್ತಿದೆ. ನರ್ಬಾರ್ಡ್ ಯೋಜನೆ ಅಡಿಯಲ್ಲಿ 29,500 ಕೋಟಿ ರೂ.ಸಾಲ ನಬಾರ್ಡ್ ಮೂಲಕ ರೈತರಿಗೆ 2 ತಿಂಗಳಲ್ಲಿ ನೀಡಲಾಗಿದೆ. ಲಾಕ್ಡೌನ್ ಸಮಯದಲ್ಲಿ 25 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ ಆಗಿದೆ. ಸಣ್ಣ ರೈತರಿಗೆ ಮೇ 31ರವರೆಗಿನ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ್ದು ರೈತರನ್ನು ಲಾಕ್ಡೌನ್ ಸಂಕಷ್ಟದಿಂದ ಪಾರು ಮಾಡಿದಂತಾಗಿದೆ.
ಆಯಾ ಜಿಲ್ಲೆಗಳಲ್ಲಿ ಕೆಲಸ ಮಾಡುವವರಿಗೆ ನರೇಗಾ ದಿನಗೂಲಿಯನ್ನು 182 ರೂ. ದಿಂದ 202 ರೂ.ವರೆಗೆ ಮಾಡಲಾಗಿದೆ. ಇದರಿಂದ ಸ್ಥಳೀಯವಾಗಿ ಜನ ಹೆಚ್ಚು ಉದ್ಯೋಗದಲ್ಲಿ ತೊಡಗಿಸಿಕೊಳ್ಳಬಹುದು ಎಂದು ಸಚಿವರು ಹೇಳಿದ್ದಾರೆ.
10 ಜನಕ್ಕಿಂತ ಹೆಚ್ಚು ಜನರು ಕೆಲಸ ಮಾಡುವ ಸಂಸ್ಥೆಗಳು ಇ.ಎಸ್.ಐ ಮಾಡಲು ಅನುಮತಿ ನೀಡಿರುವುದು ಅವರ ಆರೋಗ್ಯದ ದೃಷ್ಟಿಯಿಂದ ಉತ್ತಮ ನಿರ್ಧಾರವಾಗಿದೆ. ಕೇಂದ್ರದಿಂದ ದೇಶದ ಎಲ್ಲ ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯ ನೀಡಲು ನಿರ್ಧಾರ ಮಾಡಿದ್ದು, ಪಡಿತರ ಕಾರ್ಡ್ ಇಲ್ಲದವರಿಗೂ ಆಹಾರ ಧಾನ್ಯ ನೀಡುತ್ತಿರುವುದು ಸ್ವಾಗತಾರ್ಹ. ಇದನ್ನು ರಾಜ್ಯ ಸರ್ಕಾರದ ಮೂಲಕ ವಿತರಣೆ ಮಾಡಲು ನಿರ್ಧರಿದಲಾಗಿದೆ.
ವಲಸೆ ಕಾರ್ಮಿಕರನ್ನು ರಾಜ್ಯ ಸರ್ಕಾರದಿಂದ ಗುರುತಿಸಿ ಸೌಲಭ್ಯ ನೀಡಲು ಕೇಂದ್ರ ಸರ್ಕಾರವು ನಿರ್ಧರಿಸಿದೆ. ಇದರಿಂದ 8 ಕೋಟಿ ವಲಸೆ ಕಾರ್ಮಿಕರಿಗೆ ಅನುಕೂಲವಾಗಲಿದೆ.
ಕೇಂದ್ರ ಒಂದು ದೇಶ ಒಂದು ರೇಷನ್ ಕಾರ್ಡ್ ಯೋಜನೆ ತರುತ್ತಿರುವುದು ಕೇಂದ್ರ ಸರ್ಕಾರದ ಅತ್ಯುತ್ತಮ ಕ್ರಮ ಎಂದು ಸಚಿವರು ಹೇಳಿದ್ದಾರೆ. ಇದರಿಂದ ದೇಶದ 67 ಕೋಟಿ ಜನರಿಗೆ ಅನುಕೂಲವಾಗಲಿದೆ. ಇದರಿಂದ ದೇಶದ ಮೂಲೆ ಮೂಲೆಯಲ್ಲಿ ಜನ ಪಡಿತರ ಪಡೆಯ ಬಹುದಾಗಿದೆ.
Be the first to comment