ಜೀಲ್ಲಾ ಸುದ್ದಿಗಳು
ಕೊರೊನಾಗೆ ಆಹ್ವಾನ ನೀಡುವಂತಿದೆ ಈ ಘಟನೆ
ಮಹಾರಾಷ್ಟ್ರದಿಂದ ಕರೆ ತಂದ ಕುಟುಂಬಕ್ಕೆ ಓಡಾಡಲು ಬಿಟ್ಟು ಕ್ವಾರಂಟೈನ್ ಸ್ಥಳ ನೀಡದೆ ನಡು ರಸ್ತೆಯಲ್ಲಿ ನಿಲ್ಲಿಸಿ ನಿರ್ಲಕ್ಷ್ಯ ವಹಿಸಿದ ತಾಲೂಕಾಡಳಿತ.
ಅಂಬಿಗ ನ್ಯೂಸ್ ಸುರಪುರ:
ತಾಲೂಕಿನ ಶಖಾಪುರ ಎಸ್.ಹೆಚ್ ಗ್ರಾಮದ ಅಂಬರೀಶ್ ಎಂಬ ದಂಪತಿ ಮತ್ತು ಅವರ ಇಬ್ಬರು ಮಕ್ಕಳನ್ನು ಮಹಾರಾಷ್ಟ್ರದಿಂದ ಕರೆ ತಂದು ತಾಲೂಕು ಆಡಳಿತ ಈ ದಂಪತಿಗೆ ಕ್ವಾರಂಟೈನ್ ಕಲ್ಪಿಸದೇ ಬೇಜವಾಬ್ದಾರಿತನ ತೋರಿರುವ ಆರೋಪ ಕೇಳಿ ಬಂದಿದೆ.
ಬೆಳಿಗ್ಗೆ ಮಹಾರಾಷ್ಟ್ರದಿಂದ ಬಂದ ಇವರನ್ನು ಗ್ರಾಮಕ್ಕೆ ಹೋಗಿ ಎಂದು ಕಳುಹಿಸಿಕೊಟ್ಟು ಶಾಲೆಯಲ್ಲಿ ಉಳಿದುಕೊಳ್ಳುವಂತೆ ತಿಳಿಸಿದ್ದಾರೆ. ಇವರೊಂದಿಗೆ ತಾಲೂಕಿನ ಯಾವುದೇ ಅಧಿಕಾರಿಗಳು ಜೊತೆ ಹೋಗದಿದ್ದರಿಂದ ಅವರು ಗ್ರಾಮದಲ್ಲಿ ಓಡಾಡಿದ್ದು, ಉಳಿದುಕೊಳ್ಳಲು ಮನೆಯೂ ಇಲ್ಲದೆ ಶಾಲೆಯಲ್ಲಿ ಇರುವುದಕ್ಕೆ ಗ್ರಾಮದ ಜನರು ವಿರೋಧಿಸಿ ಮರಳಿ ಕಳುಹಿಸಿದ್ದಾರೆ.
ತಹಶೀಲ್ದಾರರಾಗಲಿ, ಗ್ರಾಮ ಪಂಚಾಯಿತಿಯ ಅಧಿಕಾರಿಗಳಾಗಲಿ ಇವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸದೆ ಬೇಜವಾಬ್ದಾರಿತನ ತೋರಿದ್ಧಾರೆ ಎನ್ನಲಾಗಿದೆ. ಇದರಿಂದ ದಂಪತಿ ಹೊರಗಡೆ ಓಡಾಡಿಕೊಂಡಿದ್ದು, ರಾತ್ರಿಯಾಗುತ್ತಿದ್ದಂತೆ ಸುರಪುರಕ್ಕೆ ಬಂದು ತಹಶೀಲ್ದಾರ್ ಕಚೇರಿ ಸಮೀಪ ನಡು ರಸ್ತೆಯಲ್ಲಿ ನಿಂತಿದ್ದಾರೆ.
ತಹಶೀಲ್ದಾರ್ ಅವರು ನಮ್ಮಲ್ಲಿ ಎಲ್ಲಿಯೂ ಕೂಡ ಉಳಿಸಿಕೊಳ್ಳಲು ಜಾಗವಿಲ್ಲ. ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿ ಮತ್ತು ಬಿಲ್ ಕಲೆಕ್ಟರ್ ಸೇರಿ ಅವರಿಗೆ ಗ್ರಾಮದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಸಿಇಒ ತಿಳಿಸಿದ್ದಾರೆ ಎಂದು ಹೇಳುತ್ತಿದ್ದಾರೆ.
ಗ್ರಾಮಸ್ಥರು ನಮ್ಮದು ಚಿಕ್ಕ ಊರಾಗಿದ್ದು, ಶಾಲೆಯಲ್ಲಿ ಉಳಿದುಕೊಳ್ಳಲು ಒಪ್ಪುವುದಿಲ್ಲವೆಂದು ವಿರೋಧಿಸುತ್ತಿದ್ದಾರೆ. ಇದರ ಮಧ್ಯೆ ಹೈರಾಣಾಗಿರುವ ದಂಪತಿ ಮತ್ತು ಮಕ್ಕಳು ಇಡೀ ದಿನ ಊಟವಿಲ್ಲದೆ ಪರದಾಡಿದ್ದಾರೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ನೊಂದ ಈ ಕುಟುಂಬ ಕಣ್ಣೀರು ಹಾಕುವಂತಾಗಿದೆ.
Be the first to comment