ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಮನೆ ಮನೆಗೆ ತೆರಳಿ ಪೌಷ್ಟಿಕ ಆಹಾರಯುಕ್ತ ಚಾಕಲೇಟ್ ವಿತರಣೆ”

ವರದಿ:- ಕಲ್ಲಪ್ಪ ಪಾಮನಾಯಕ

ಜೀಲ್ಲಾ ಸುದ್ದಿಗಳು

ಚಿಕ್ಕೋಡಿ:-ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಅಗ್ರೋ ಕ್ರಾಪ್ ಕಂಪನಿ ವತಿಯಿಂದ ನೀಡಿದ ಪೌಷ್ಟಿಕ ಆಹಾರದ ಚಾಕಲೇಟ್ ಗಳನ್ನು ಚಿಕ್ಕೋಡಿಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಮನೆ ಮನೆಗಳಿಗೆ ತೆರಳಿ ವಿತರಿಸಿ, ಮಕ್ಕಳ ಆರೋಗ್ಯ ಕಾಪಾಡುವಂತೆ ಮನವಿ ಮಾಡಿದರು ಹಾಗೂ ಪೌಷ್ಟಿಕ ಆಹಾರದ ಚಾಕಲೇಟ್ ಸೇವಿಸುವುದರಿಂದ ಅಪೌಷ್ಟಿಕತೆ ತಡೆಯಬಹುದು ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಾಗಿ ಮಕ್ಕಳು ಸದೃಢವಾಗಿ ಬೆಳೆಯುತ್ತಾರೆ ಎಂದು ಮಾರ್ಗದರ್ಶನ ಮಾಡಿದರು.

Be the first to comment

Leave a Reply

Your email address will not be published.


*