ಜೀಲ್ಲಾ ಸುದ್ದಿಗಳು
ಬಾಗಲಕೋಟೆ:ಪ್ರೀತಿಗೆ ಬಡತನವಿಲ್ಲ ಎಂಬ ಮಾತಿಗೆ ದ್ಯೋತಕವೆಂಬಂತೆ ಅಲೆಮಾರಿ ಹೆಳವರ ಕುಟುಂಬವೊಂದು ಅಮ್ಮ- ಮಗ ಇಬ್ಬರು ಬದುಕಿನ ಅರಮನೆಯನ್ನು ಅರಸಿಕೊಂಡು ಮರಳಿ ತಮ್ಮ ಸ್ವಂತ ಊರಿಗೆ ಹೋಗುತ್ತಿದ್ದಾರೆ.
ಬೀದಿ ಬೀದಿಗಳಲ್ಲಿ ಟೆಂಟ್ ಹಾಕಿಕೊಂಡು ಒಕ್ಕಲು ಮನೆತನದ ವಂಶಾವಳಿ ಹೇಳುತ್ತ ಜೀವನ ಸಾಗಿಸುತ್ತಿರುವ ಈ ಹೆಳವರು ಇಂದು ಕೋವಿಡ್-19 ಪರಿಣಾಮವಾಗಿ ಲಾಕ್ ಡೌನ್ ದಿಂದಾಗಿ ಹೊರಗು ಬರದೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾದ್ಯವಾಗದೆ ಗ್ರಾಮದಲ್ಲೂ ಇರದೆ ಇಂದು ಬಾಗಲಕೋಟೆಯಿಂದ ಮರಳಿ ಸ್ವಂತ ಊರಾದ ಬೆಳಗಾವಿ ಜಿಲ್ಲೆಯ ಜೋಕಾನಟ್ಟಿ ಗ್ರಾಮದ ತಮ್ಮ ಅರಮನೆಗೆ ಹೋಗುತ್ತಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಲವು ಸಮುದಾಯದವರಿಗೆ ನೆರವು ನೀಡಿದ್ದು ನಮ್ಮಂಥ ಅಲೆಮಾರಿ ಸಮುದಾಯದವರಿಗೆ ಯಾವ ನೆರವು ನೀಡದೆ ಬೀದಿಯಲ್ಲೆ ಇರುವಂತೆ ಮಾಡಿದ್ದು ನಮ್ಮ ದುರದೃಷ್ಟ ಎಂದು ಶ್ರೀಮತಿ ಸಿದ್ದವ್ವ ಹೆಳವರ ತಮ್ಮ ಅಳಲನ್ನು ತೋಡಿಕೊಂಡರು.
Be the first to comment