ಜೀಲ್ಲಾ ಸುದ್ದಿಗಳು
ಕಂದಾಯ ಇಲಾಖೆಯ ನೌಕರರ ಮೇಲೆ ಪೋಲಿಸ್ ಇಲಾಖೆ ದರ್ಪ
ವಿಲೇಜ್ ಅಕೌಂಟೆಂಟ್ ಎಂದು ಐಡಿ ತೋರಿಸಿದರು ಲಾಠಿಯಿಂದ ಮನಸೋ ಇಚ್ಛೆ ಏಟು
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಗ್ರಾಮ ಲೆಕ್ಕಾಧಿಕಾರಿಗಳ ಸಂಘದಿಂದ ಆಗ್ರಹ
ಅಂಬಿಗ ನ್ಯೂಸ್ ಸುರಪುರ
ತಾಲ್ಲೂಕಿನ ಕಂದಾಯ ಇಲಾಖೆಯ ನೌಕರರ ಮೇಲೆ ಪೋಲಿಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಲಾಟಿಯಿಂದ ಹೊಡೆದು ಅವಾಚ್ಛ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ತಪ್ಪಿತಸ್ಥ ಪೋಲಿಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿಗಳ ಮೋರೆಹೊದ ಗ್ರಾಮ ಲೆಕ್ಕಿಗರು.
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಈಗಾಗಲೆ 02 ಕೊರೊನಾ ಪಾಸಿಟಿವ್ ಸೊಂಕು ಪ್ರಕರಣ ದಾಖಲಾಗಿದ್ದು ಅಧಿಕಾರಿಗಳು ಜನತೆಯನ್ನು ನಿಯಂತ್ರಿಸಲು ಹಗಲಿರುಳೆನ್ನೆದೆ ಕಾರ್ಯನಿರ್ವಹಿಸುತ್ತಿದ್ದಾರೆ.
ಸುರಪುರ ಪಟ್ಟಣವನ್ನು ಸಂಪೂರ್ಣ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಲಾಗಿದೆ, ಅನಾವಶ್ಯಕವಾಗಿ ಹೊರಗಡೆ ಬರುವ ಜನತೆಗೆ ಪೋಲಿಸರು ಲಾಠಿ ರುಚಿ ತೋರಿಸಿಯೂ ಆಗಿದೆ.
ಆದರೆ ಲಾಠಿ ಬಿಸುವ ಮೊದಲು ವಿಚಾರಿಸುವುದನ್ನೆ ಮರೆತ ಪೊಲೀಸ್ ಸಿಬ್ಬಂದಿಗಳು
ಕೊರೊನಾ ವಾರಿಯರ್ಸ್ ವ್ಯಾಪ್ತಿಗೆ ಬರುವ ಕಂದಾಯ ಇಲಾಖೆಯ ನೌಕರರು ಕರ್ತವ್ಯ ನಿಮಿತ್ತ ನಗರದ ಗಾಂಧಿ ವೃತ್ತದಲ್ಲಿ ಬೈಕ್ ಮೆಲೆ ತೆರಳುತ್ತಿರುವಾಗ ಅವರನ್ನು ಅಡ್ಡ ಗಟ್ಟಿ ಪೊಲೀಸರು ಅವಾಚ್ಛ ಶಬ್ದಗಳಿಂದ ನಿಂದಿಸಿ ಗುರುತಿನ ಚೀಟಿ ತೊರಿಸಿದರೂ ಕೂಡ ಅವರ ಮೆಲೆ ಹಲ್ಲೆ ಮಾಡಲಾಗಿದೆ.
ವಿಲೇಜ್ ಅಕೌಂಟೆಂಟ್ ಕುಮಾರ ಪ್ರತಾಪ್ ತುರ್ತು ಸೇವೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಬೈಕ್ ಮೇಲೆ ಎಮರ್ಜೆನ್ಸಿ ಎಂದು ಸ್ಟಿಕ್ಕರ್ ಅಂಟಿಸಿದರೂ ಅದೆಲ್ಲವನ್ನೂ ಗಾಳಿಗೆ ತೂರಿ ಅಡ್ಡಗಟ್ಟಿದ ಪಿಎಸ್ಐ ಚೇತನ್ ಹಾಗೂ ಪಿಸಿ ನಿಂಗಣ್ಣ ಜಮಾದಾರ covid19 ಕೆಲಸಕ್ಕೆ ಅಡ್ಡಿ ಪಡಿಸಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ಪೊಲೀಸ್ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಂದರೂ ಸಹ ತಪ್ಪಿತಸ್ಥ ಪೇದೆ ಮತ್ತು ಅಧಿಕಾರಿಯ ಮೇಲೆ ಯಾವುದೇ ಕ್ರಮ ಜರುಗಿಸದೆ ಇರುವುದನ್ನು ಗಮನಿಸಿದರೆ ಹಿರಿಯ ಅಧಿಕಾರಿಗಳ ಕುಮಕ್ಕಿನಿಂದ ಈ ರೀತಿ ದಪ೯ ಮೆರೆಯುತ್ತಿದ್ದಾರೆ ಎಂದು ಸಾವ೯ಜನಿಕರು ಮಾತನಾಡುತ್ತಿದ್ದಾರೆ.
Covid19 ಕರ್ತವ್ಯ ನಿರತ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಥಳಿಸುವುದು ,ನಿಂಧಿಸುವುದು, ದಂಡ ವಸೂಲಿ ಮಾಡುವ ಅನೇಕ ವಿಚಾರಗಳು ನಮ್ಮ ಗಮನಕ್ಕೆ ಬಂದಿವೆ.
ಸರ್ಕಾರ ಕೊರೊನಾ ವಿರುದ್ಧ ಹೋರಾಡುತ್ತಿರುವ ಎಲ್ಲಾ ಇಲಾಖೆಗಳಿಗೆ ಸರ್ಕಾರ ವಿಮೆ ಯನ್ನು ಘೋಷಿಸಿದೆ, ಆದರೆ ಕಂದಾಯ ಇಲಾಖೆಯವರು ಕೂಡಾ ಕೊರೊನಾ ವಾರಿಯರ್ಸ್ ಗಳ ಹಾಗೆ ಮನೆ, ಮಠ, ಮತ್ತು ಹೆಂಡತಿ, ಮಕ್ಕಳನ್ನು ಬಿಟ್ಟು ಜೀವದ ಹಂಗು ತೊರೆದು ತಮ್ಮ ಕೆಲಸಗಳಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಹಾಗಾಗಿ ಪೋಲಿಸ್ ಇಲಾಖೆಯ ಈ ನಡೆಯನ್ನು ನಾವು ಖಂಡಿಸುತ್ತೇವೆ.
ಸಧ್ಯ ನಮ್ಮ ಕೆಲಸವನ್ನು ಸಾಮಾಜಿಕ ಹಿತದೃಷ್ಟಿಯಿಂದ ಮುಂದುವರೆಸುತ್ತೇವೆ.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ ಪೋಲಿಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದ್ದು.
ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿತನ ತೋರಿದರೆ ಮುಂದಿನ ದಿನಗಳಲ್ಲಿ ಇಡೀ ರಾಜ್ಯದಾದ್ಯಂತ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ಸೇರಿ ಪೋಲಿಸ್ ಇಲಾಖೆ ಮತ್ತು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುವುದು.
ಆದ್ದರಿಂದ ಸಧ್ಯ ಈಗಲಾದರು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಎಚ್ಚೆತ್ತು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಳ್ಳಬೆಕು ಇಲ್ಲದಿದ್ದರೆ ಗ್ರಾಮ ಲೆಕ್ಕಿಗರು ಕರ್ತವ್ಯಕ್ಕೆ ಹಾಜರಾಗುವುದಿಲ್ಲವೆಂದು ಎಚ್ಚರಿಸಿದ್ದಾರೆ.
➡️ ಸಿದ್ದಯ್ಯ ಸ್ವಾಮಿ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರು ಯಾದಗಿರಿ.
ಈಗಾಗಲೇ ನೊಂದ ಕಂದಾಯ ನೌಕರರ ಜೋತೆ 20 ಜನ ನೌಕರರು ಸೆರಿ ಯಾದಗಿರಿ ಎಸ್.ಪಿ ಹೃಷಿಕೇಶ್ ಭಗವಾನ್ ಸೋನಾವಾಣೆ ಹಾಗೂ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರಿಗೆ ಮತ್ತು ತಹಶೀಲ್ದಾರ್ ನಿಂಗಣ್ಣ ಬಿರಾದಾರ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
Be the first to comment