ಜೀಲ್ಲಾ ಸುದ್ದಿಗಳು
ಬಾಗಲಕೋಟ:- ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಲಾಕ್ ಡೌನ್‍ನಿಂದ ಜನ ಸಾಮಾನ್ಯರ ಜೀವನ ಸಂಕಷ್ಟಕ್ಕೆ ಸಿಲುಕಿದ್ದು ದಿನಗೂಲಿ ಕಾರ್ಮಿಕರು, ಬಡವರು ಹಿಂದುಳಿದ ಮತ್ತು ಮಧ್ಯಮ ವರ್ಗದವರು ತುಂಬಾ ಕಷ್ಟದಲ್ಲಿರುವುದನ್ನು ಮನಗಂಡ ಸರ್ಕಾರ ಲಾಕ್ ಡೌನ್ ನ ಕೆಲವು ನಿಯಮಗಳಲ್ಲಿ ಸಡಿಲಿಕೆ ಮಾಡಿ MGNREGA ಯೋಜನೆಯ ಕಾಮಗಾರಿಗೆ ಮರು ಚಾಲನೆ ನೀಡಲಾಯಿತು.
ಹುನಗುಂದ ತಾಲೂಕಿನ ಕೆಲೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕುಣಿಬೆಂಚಿ ಗ್ರಾಮದಲ್ಲಿ ಲಾಕ್ ಡೌನ್ ನ ನಿಯಮಗಳ ಸಡಿಲಿಕೆಯಿಂದ MGNREGA ಯೋಜನೆಯ ಗ್ರಾಮೀಣ ಕೂಲಿ ಸಂಘಟನೆ ವತಿಯಿಂದ ಪ್ರಾರಂಭಿಸಿರುವ ಕೆರೆ ಕಾಮಗಾರಿ ವೇಳೆಯಲ್ಲಿ ಪ್ರತಿಯೊಬ್ಬರು ಸ್ವಚ್ಚತೆ ಕಾಪಾಡಿಕೊಳ್ಳಬೇಕು, ಬಂದಿರುವ ಮಹಾ ಮಾರಿ ಕೊರೊನಾ ವೈರಾಣು ಓಡಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೆ ಮುಖ್ಯ ಅಸ್ತ್ರವಾಗಿದ್ದು ಸರ್ಕಾರದ ಆದೇಶಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿ ಕಾರ್ಮಿಕರಿಗೆ ಕೆಲೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀP.B.ಮುಳ್ಳೂರ ಮಾಸ್ಕ ವಿತರಿಸಿದರು.ಈ ವೇಳೆ ಸದಸ್ಯರಾದ ಕೋಣಪ್ಪ ಮಾದರ ಉಪಸ್ಥಿತರಿದ್ದರು.
Be the first to comment