ಶಹಾಪುರ ಕ್ಕೆ 3 ಬಸ್ ಗಳಲ್ಲಿ ಬೆಳಿಗ್ಗೆ ಬಂದಿಳಿದ ನೂರು ಜನ ವಲಸೆ ಕಾರ್ಮಿಕರು

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್ ಯಾದಗಿರಿ

ಕೊರಾನ್ ವೈರಸ್ ಆತಂಕದಲ್ಲಿ ಹೊಟ್ಟೆಪಾಡಿಗಾಗಿ ಗೂಳೆ ಹೊಗಿದ್ದ ಮಾಹಾರಾಷ್ಟ್ರ ಬಾಂಬೆ ಪುನಾಃ ಸಾಂಗಲಿ ಸೇರಿದಂತೆ ನಾನಾ ರಾಜ್ಯಗಳಿಂದ ವಲಸೆ ಕಾರ್ಮಿಕರು ತಮ್ಮ ಸ್ವಾಗ್ರಾಮದತ್ತ ಮುಖ ಮಾಡಿದ್ದಾರೆ, ಸರ್ಕಾರ ಅನುಮಿತಿಯಿಂದ ನಾನಾ ಬಸ್ ಗಳಲ್ಲಿ ವಲಸೆ ಗೂಳೆ ಕಾರ್ಮಿಕರು ಬರುತ್ತಿದ್ದು ಇಂದು ಬೆಳಿಗ್ಗೆ ಮೂರು ಬಸ್ ಗಳಲ್ಲಿ ನೂರು ಜನ ವಲಸೆ ಕಾರ್ಮಿಕರು ಶಹಾಪುರ ನಗರದ ಹೊರಹೊಲಯದಲ್ಲಿರುವ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ವಸತಿ ನಿಲಯದ ಕ್ವಾರಂಟೀನ್ ಕೆಂದ್ರಕ್ಕೆ ಬಂದಿಳಿದಿದ್ದಾರೆ, ಬಂದ ಕಾರ್ಮಿಕರಿಗೆ ಶಹಾಪುರ ತಹಶೀಲ್ದಾರ್ ಜಗನ್ನಾಥ ರಡ್ಡಿ,
ಪಿ,ಐ ಹನುಮರಡ್ಡೆಪ್ಪ, ನಗರಸಭೆ ಪೌರಾಯುಕ್ತರಾದ ಬಸವರಾಜ ಶಿವಪೂಜೆ ತಾಲುಕಾ ವೈಧ್ಯಾಧಿಕಾರಿ ಡಾ,ರಮೇಶ ಗುತ್ತೆದಾರವರು ಕ್ವಾರಂಟೈನ್ ಕೆಂದ್ರದಲ್ಲಿ ದಾಖಲು ಮಾಡಿಕೊಳ್ಳುತ್ತಿದ್ದಾರೆ,
ವಲಸೆ ಕಾರ್ಮಿಕರು ಶಹಾಪುರ ಸುರುಪುರ ಯಾದಗಿರಿ ಜಿಲ್ಲೆಯ ನಾನಾ ಗ್ರಾಮಗಳ ನಿವಾಸಿಗಿದ್ದಾರೆ ಎಂದು ತಿಳಿದು ಬಂದಿದೆ.

ರಕ್ತ ಮಾದರಿ ಪರೀಕ್ಷೆ

ಇಂದು  ನಾನಾ ರಾಜ್ಯಗಳಿಂದ ನಗರಗಳಿಂದ ಬಂದಳಿಯುವ ಎಲ್ಲಾ ವಲಸೆ ಕಾರ್ಮಿಕರಿಗೆ ರಕ್ತ ಮಾದರಿ ಗಂಟಲು ಮಾದರಿ ಸೇರಿದಂತೆ ಅವರಿಗೆ ನಾನಾ ರೀತಿಯ ಆರೋಗ್ಯ ತಪಾಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ, ಎಂದು ವೈಧ್ಯಾಧಿಕಾರಿ ಡಾ,ರಮೇಶ ಗುತ್ತೆದಾರ ತಿಳಿಸಿದರು,ಈಗಾಗಲೆ ಬಂದಿರುವ ನೂರು ಜನರಿಗೆ ತಪಾಷಣೆ ನೆಡೆಸಲಾಗುತ್ತದೆ ಎಂದು ಅವರು ವಿವರ ನಿಡಿದರು,

Be the first to comment

Leave a Reply

Your email address will not be published.


*