ಗುವಿವಿಯಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ: 12ನೇದಿನಕ್ಕೆ ಧರಣಿ ಸತ್ಯಾಗ್ರಹ ವಿದ್ಯಾರ್ಥಿಗಳ ಜತೆ ವಿವಿ ಚಲ್ಲಾಟ: ಶಾಸಕ ಅಪ್ಪುಗೌಡ ಆಕ್ರೋಶ

 

ಸಂಶೋಧನಾ ವಿದ್ಯಾರ್ಥಿಗಳಾದ ಸರ್ದಾರ್ ರಾಯಪ್ಪ ಹಾಗೂ ಸಾಯಬಣ್ಣಾ ಗುಡುಬಾ ಅವರಿಗೆ ಪಿಎಚ್.ಡಿ ಅವಾರ್ಡ್ ಮಾಡುವಲ್ಲಿ
ಅನ್ಯಾಯ ಎಸಗಿ ಅವರ ಬದುಕಿನ ಜತೆ ಚಲ್ಲಾಟವಾಡುತ್ತಿರುವ ಗುವಿವಿ ವಿರುದ್ಧ ಶಾಸಕ ಅಪ್ಪುಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಕೋಲಿ ಸಮಾಜದ ಸಂಶೋಧನಾ ಅಧ್ಯಯನ ಮಾಡುತ್ತಿರುವ ಸರ್ದಾರ್ ರಾಯಪ್ಪ ಹಾಗೂ ಸಾಯಬಣ್ಣಾ ಈರಣ್ಣಾ ಗುಡುಬಾ ಅವರಿಗೆ ಪಿ ಎಚ್.ಡಿ ಅವಾರ್ಡ್ ಮಾಡುವಲ್ಲಿ ತಾರತಮ್ಯ, ಅನ್ಯಾಯ ಮೋಸವನ್ನು ಪ್ರತಿಭಟಿಸಿ, ಕೋಲಿ ಕ್ರಾಂತಿ ಸಂಘ ಮತ್ತು ಕರ್ನಾಟಕ ಕೋಲಿ ಸೈನ್ಯದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅನಿರ್ಧಿಷ್ಟ ಧರಣಿ ಸತ್ಯಾಗ್ರಹದಲ್ಲಿ ಅವರು ಭಾಗಿಯಾಗಿ ಮಾತನಾಡಿದರು.

ರಾಜಕೀಯವಾಗಿ , ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಕೋಲಿ ಸಮಾಜ ತೀರ ಸೋಚನಿಯ ಸ್ಥಿತಿಯಲ್ಲಿ ಇದೆ ಪೊಷಕರು ತಮ್ಮ ಮಕ್ಕಳಿಗೆ ಸಾಲ ಸೂಲ ಮಾಡಿ ಓದಿಸುತ್ತಾರೆ. ಬಡವರ ಮಕ್ಕಳು ಉನ್ನತ ಶಿಕ್ಷಣ ಪಡೆಯುವದೇ ದೊಡ್ಡ ಸಾಧನೆ. ಆದರೆ ಇವರಿಗೆ ಪಿಎಚ್.ಡಿ ಅವಾರ್ಡ್ ಮಾಡುವಲ್ಲಿ ಸ್ವಜನಪಕ್ಷಪಾತ, ಹಣ ಬಂಗಾರಕ್ಕಾಗಿ ಪಿಡಿಸುತ್ತಿರುವುದು ಖಂಡನೀಯವಾಗಿದೆ. ಎಂದು ಗುವಿವಿ ನಡೆ ಬಗ್ಗೆ ಶಾಸಕರು ಬೇಸರ ವ್ಯಕ್ತಪಡಿಸಿದರು.

ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಿ ಉದ್ದೇಶಪೂರ್ವಕವಾಗಿ ಅವರ ಪಿಎಚ್ ಡಿ ತಡೆ ಹಿಡಿದ ಸಹ ಮಾರ್ಗದರ್ಶಕರ ವಿರುದ್ಧ ಕ್ರಮಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.

ವಿದ್ಯಾರ್ಥಿಗಳು ಸುಮಾರು 12 ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹಕ್ಕೆ ಸೌಜನ್ಯಕ್ಕಾದರು ವಿವಿಯ ಮತ್ತು ಜಿಲ್ಲಾಧಿಕಾರಿಯ ಯಾವೊಬ್ಬ ಅಧಿಕಾರಿಗಳು ಬಾರದೆ ಇರುವುದು ದುರಂತದ ಸಂಗತಿ ಎಂದು ಕಿಡಿ ಕಾರಿದರು.
ಗುವಿವಿಯಲ್ಲಿ ಹಲವು ಸಂಶೋಧನಾ ವಿದ್ಯಾರ್ಥಿಗಳಿಗೆ ಹೊರಗಿನ ಕೆಲ ಶಕ್ತಿಗಳಿಂದ ವಿವಿಧ ರೀತಿಯಲ್ಲಿ ಕಿರುಕುಳ ತೊಂದರೆ ನೀಡಲಾಗುತ್ತಿದೆ ಎಂಬುವದು ಸಾಬೀತಾಗಿದೆ. ಇದರಿಂದ ವಿವಿ ಅಕ್ರಮ ಕುರಿತು ವಿಧಾನಸಭೆಯಲ್ಲಿ ಧ್ವನಿ ಎತ್ತುತ್ತೇನೆ ಎಂದು ಶಾಸಕರು ವಿವಿ ವಿರುದ್ಧ ಗುಡುಗಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀಮತಿ ಶೋಭಾ ಎಸ್ ಬಾಣಿ, ಶಿವಲಿಂಗಪ್ಪ ಕಿನ್ನೂರ, ಕೋಲಿ ಕ್ರಾಂತಿ ಸಂಘದ ಅಧ್ಯಕ್ಷ ದೇವಿಂದ್ರ ಚಿಗರಳ್ಳಿ,ಕರ್ನಾಟಕ ಕೋಲಿ ಸೈನ್ಯ ಅಧ್ಯಕ್ಷ ನಿಂಗಣ್ಣ ದೇವಣ್ಣಗಾವ್, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಬಿ.ಎಮ್ ರಾವೂರ, ಸಾಬಣ್ಣಾ ಜಾಲಗಾರ, ಸುಭಾಷ್ ಮುಕ್ಕಾ, ಚಂದ್ರಕಾಂತ ಗಂವಾರ್, ಲಕ್ಷ್ಮಿಪುತ್ರ ತಳವಾರ, ಸಿದ್ದು ಜಮದಾರ, ಸಿವು ಪಿರೊಜಾಬಾದ, ಬಕ್ಕಪ್ಪ ಬಿದರ್ ಇದ್ದರು.

Be the first to comment

Leave a Reply

Your email address will not be published.


*