*ಶ್ರೀ ನಿಜಶರಣ ಅಂಬಿಗರ ಚೌಡಯ್ಯರವರ ಜಯಂತ್ಯೋತ್ಸವ, ದಿ.25.02.2019 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗು ತುಮಕೂರು ಜಿಲ್ಲಾ ಗಂಗಾಮತಸ್ಥರ ಸಂಘದ ಸಹಯೋಗದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು

ತುಮಕೂರಿನ ಟೌನ್ ಹಾಲ್ ನಿಂದ ಎಂ.ಜಿ ರಸ್ತೆ ಬಾಲಭವನದವರೆಗೆ ಸುಮಾರು ಒಂದು ಕಿಲೊಮೀಟರ್ ಮೆರವಣಿಗೆಯಲ್ಲಿ ಸಾಗಿದ ಶ್ರೀ ಅಂಬಿಗರ ಚೌಡಯ್ಯ ಉತ್ಸವ ಇಡೀ ತುಮಕೂರು ಜಿಲ್ಲಾ ಸಮಾಜದ ಸಾಂಸ್ಕೃತಿಕ ಏಕತೆಗೆ ನಾಂದಿ ಹಾಡಿತು.

ತುಮಕೂರಿನ ಸ್ಥಳೀಯ ಶಾಸಕರಾದ ಶ್ರೀ ಜ್ಯೋತಿ ಗಣೇಶ್ ಅಧ್ಯಕ್ಷತೆವಹಿಸಿ ಮಾತನಾಡಿ ಸಮಾಜದ ಅಭಿವೃದ್ಧಿಗೆ ಸರ್ಕಾರದ ಎಲ್ಲಾ ನೆರವು ಕೊಡಿಸಲು ಬದ್ದ ಎಂದರು ಮತ್ತು ಶಾಸಕರ ನಿಧಿಯಿಂದ 5 ಲಕ್ಷ ರೂ. ವಿಶೇಷ ಅನುದಾನ ನೀಡುವುದಾಗಿ ಘೋಷಿಸಿದರು.

ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎ. ಹೆಚ್. ಪ್ರಶಾಂತ್ ರವರು ಮಾತನಾಡಿ 12 ನೇ ಶತಮಾನದ ವಚನಕಾರರಲ್ಲಿ ವಿಭಿನ್ನವಾಗಿ ಕಂಡ ಶ್ರೀ ಅಂಬಿಗರ ಚೌಡಯ್ಯರವರು ತಮ್ಮ ತೀಕ್ಷ್ಣ ಹಾಗು ಮೊನಚಾದ ಶಬ್ದಗಳಲ್ಲಿ ಸಮಾಜವನ್ನು ವೈಜ್ಞಾನಿಕವಾಗಿ ಹಾಗು ವೈಚಾರಿಕ ವಿಚಾರಗಳ ಮುಖಾಂತರ ಸಂದೇಶಗಳನ್ನು ವಚನಗಳ ಮೂಲಕ ವಿಶ್ವಕ್ಕೆ ಸಾರಿದ ಏಕೈಕ ವಿಶ್ವ ಮಾನವ ಶ್ರೀ ಅಂಬಿಗರ ಚೌಡಯ್ಯ ಎಂದು ಹೇಳಿದರು.
ಸಮಾಜವು ಈ ಜಯಂತಿಯನ್ನು ಸಮಾಜದ ಸಾಂಸ್ಕೃತಿಕ ಸಂಘಟನೆಗೆ ಹೆಚ್ಚು ಒತ್ತುಕೊಟ್ಟು ಅರ್ಥಪೂರ್ಣವಾಗಿ ಬಳಸಿಕೊಂಡಾಗ ಹಾಗು ಶ್ರೀ ಚೌಡಯ್ಯನವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ವಚನಕಾರರ ಜಯಂತಿಗಳು ಸಾರ್ಥಕವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ರೂವಾರಿಗಳಾದ ತುಮಕೂರು ಜಿಲ್ಲಾ ಗೌರವ ಅಧ್ಯಕ್ಷ ರಾದ ಶ್ರೀ M. T. ಸತ್ಯನಾರಾಯಣ್ ರವರು,
ಅಧ್ಯಕ್ಷರಾದ ಶ್ರೀ M. ನಾಗರಾಜ್,

ಕಾರ್ಯದರ್ಶಿಗಳಾದ ಶ್ರೀ ಡಿ. ಕೃಷ್ಣಯ್ಯ, ಶ್ರೀ ದಿವಾಕರ್ ಹಾಗು ಶ್ರೀ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರಾದ ಶ್ರೀ ಪಿ. ಕೆ. ಗುರುಮೂರ್ತಿ,
ಮತ್ತೋರ್ವ ಮಾಜಿ ನಿರ್ದೇಶಕರಾದ ಶ್ರೀ ಪರಮಾನಂದ ಸುಣಗಾರ್, ಶ್ರೀ ಕುಣಿಗಲ್ ದಯಾನಂದ್ ಗುರುಡಯ್ಯ ಮುಂತಾದ ಗಣ್ಯಮಾನ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತುಮಕೂರು ಜಿಲ್ಲಾ ಸಂಘದ ಅಭಿವೃದ್ಧಿಗೆ ಶ್ರೀ ಪಿ. ಕೆ. ಗುರುಮೂರ್ತಿಯವರು ವಹಿಸುತ್ತಿರುವ ಕಾಳಜಿಯ ಬಗ್ಗೆ ಸಂಘದ ಕಾರ್ಯದರ್ಶಿಗಳಾದ ಶ್ರೀ ಡಿ. ಕೃಷ್ಣಯ್ಯ ಸಭೆಯ ಗಮನ ಸೆಳೆದರು.

ಈ ಸಂದರ್ಭದಲ್ಲಿ ನೇತ್ರ ತಜ್ಞರಾದ ಡಾ. ವಿಶ್ವನಾಥ್ , ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶ್ರೀ ರವಿಕುಮಾರ್ ಮತ್ತು ಮಾಜಿ ಯೋ಼ಧರಾದ ಶ್ರೀ ಟಿ. ಕೆ. ಶಿವಶಂಕರ್ ರವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಸಮಾಜದ ಭಾಂದವರು ಹಾಗು ತಾಲ್ಲೂಕು ಸಂಘದ ಪದಾದಿಕಾರಿಗಳು ಜಯಂತ್ಯೋತ್ಸವದಲ್ಲಿ ವಿಶೇಷ ಆಸಕ್ತಿವಹಿಸಿ ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದಿತ್ತು.

 

Be the first to comment

Leave a Reply

Your email address will not be published.


*