-
ಅಂಬಿಗ ನ್ಯೂಸ್ ಕಲಬುರಗಿ
ಪ್ರವರ್ಗ-1ರ ಅಲೆಮಾರಿ ಜನಾಂಗದಲ್ಲಿ ಬರುವ ಹೆಳವ ಸಮಾಜದವರು ಕಡು ಬಡತನದಿಂದ ಕೂಡಿದ್ದು, ಆರ್ಥಿಕವಾಗಿ ರಾಜ್ಯದಲ್ಲಿಯೇ ಅತಿ ಹಿಂದುಳಿದ ಜನಾಂಗದವರಾದ ನಾವು ಕುಲ ಕಸಬು ಚಾಪೆ ಹೆಣೆಯುವುದು, ಬಾರಿಗೆ(ಪೊರಕೆ) ತಯಾರು ಮಾಡುವುದು ಮತ್ತು ಒಕ್ಕಲು ಮನೆಗಳಿಗೆ ಹೋಗಿ ಕುಲ ಕೊಂಡಾಡುವ ಕಾಯಕವನ್ನು ಮಾಡಿ, ಅವರು ಕೊಟ್ಟಷ್ಟು ದವಸ ದಾನ್ಯ ಗಳನ್ನು ತೆಗೆದುಕೊಂಡು ಊರಿಂದ ಊರಿಗೆ ಅಲೆಯುತ್ತಾ ಎಲ್ಲಿಯೂ ನೆಲೆಯಾಗಿ ನಿಲ್ಲದೆ ತಾತ್ಕಾಲಿಕ ಟೆಂಟ್ ಗಳೇ ಮನೆಯಾಗಿ ಮಾಡಿಕೊಂಡು ಮಕ್ಕಳು-ಮರಿಗಳೊಂದಿಗೆ ವಾಸವಾಗಿರುತ್ತಾ ಅಲೆಮಾರಿಯಾಗಿ ಬಹಳ ಕಷ್ಟಕರ ಜೀವನ ನಡೆಸಿಕೊಂಡು ಬರುತ್ತಿರುವ ಸಮಾಜ ನಮ್ಮದು,
ಪ್ರಸ್ತುತ ಮಾಹಾಮಾರಿ ಸಾಂಕ್ರಾಮಿಕ ರೋಗ ಕಿಲ್ಲರ್ ಕರೋನಾ ವೈರಸ ಹರಡುವುದನ್ನು ತಡೆಗಟ್ಟಲು ರಾಜ್ಯ ಸರಕಾರ ಲಾಕ್ ಡೌನ ಮಾಡಿದ್ದರಿಂದ ಅಲೆಮಾರಿ ಜನಾಂಗದ ಹೆಳವ ಸಮಾಜದವರಾದ ನಾವುಗಳು ಯಾವ ಕೆಲಸವೂ ಇಲ್ಲದೆ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಜೀವನವನ್ನು ಸಾಗಿಸುತ್ತಿದ್ದೆವೆ. ಮಾನ್ಯ ಮುಖ್ಯಮಂತ್ರಿಗಳು ಇತ್ತಿಚೆಗೆ ಅಂದರೆ ದಿನಾಂಕ 06.05.2020 ರಂದು ಕೋವಿಡ-19 ಪರಿಣಾಮವಾಗಿ ತೊಂದರೆಗೆ ಸಿಲುಕಿರುವ ಮತ್ತು ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಇನ್ನಿತರ ಸಮುದಾಯದವರಿಗೆ ನಿಡಿರುವಂತಹ ಸೌಲಭ್ಯಗಳನ್ನು ನಮ್ಮ ಹೆಳವ ಸಮುದಾಯಕ್ಕೂ ಕೂಡ ವಿಸ್ತರಣೆ ಮಾಡಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯ ನಿರ್ದೇಶಕರಾದ ಬಸವರಾಜ ಹೆಳವರ (ಯಾಳಗಿ) ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರಲ್ಲಿ ಪತ್ರದ ಮುಖಾಂತರ ಮನವಿ ಮಾಡಿದ್ದಾರೆ..
Be the first to comment