ಗೂಳೆ ಹೋದವರನ್ನು ಮರಳಿ ಕರೆತರುವೆ: ಶಾಸಕ ನಡಹಳ್ಳಿ: ಬಡ ಕಾರ್ಮಿಕರು ಭಯ ಪಡುವ ಅಗತ್ಯವಿಲ್ಲ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು



ಮುದ್ದೇಬಿಹಾಳ: 
ತಾಲೂಕಿನಿಂದ ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ಗೂಳೆ ಹೋದ ಜನರನ್ನು ಉಚಿತವಾಗಿ ಮರಳಿ ತಾಲೂಕಿಗೆ ತರಲು ಸಾರಿಗೆ ಸಚಿವ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಜೊತೆ ಚರ್ಚಿಸಿದ್ದ ಕೂಡಲೇ ಇದಕ್ಕೆ ಸ್ಪಂದನೆ ಸಿಗಲಿದೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಬಸ್‌ನಿಲ್ದಾಣಕ್ಕೆ ಬೇಟಿ ನೀಡಿ ಅಲ್ಲಿನ ಸ್ವಚ್ಛತಾ ಕಾರ್ಯ, ಸ್ಯಾನಿಟೈಜೇಶನ್, ಬೇರೆ ಜಿಲ್ಲೆ, ರಾಜ್ಯಗಳಿಂದ ಆಗಮಿಸಲಿರುವ ಕೂಲಿಕಾರ್ಮಿಕರಿಗೆ ಅಗತ್ಯ ಸೌಕರ್ಯಕ್ಕಾಗಿ ಕೊಠಡಿ ವ್ಯವಸ್ಥೆ ಪರಿಶೀಲಿಸಿದ ನಂತರ ನಿಲ್ದಾಣದಲ್ಲಿಯೇ ಪ್ರತಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ತಾಲೂಕಿನಿಂದ ಅಂದಾಜು ೧೦ ಸಾವಿರ ಬಡಜನರು ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ಗೂಳೆ ಹೋದ ಮಾಹಿತಿ ಲಭ್ಯವಿದ್ದು ತಾಲೂಕಿನ ೧೨೬ ಹಳ್ಳಿಗಳಲ್ಲಿನ ಕಾರ್ಯಕರ್ತರು ಹಾಗೂ ಮುಖಂಡರಿಂದ ಗೂಳೆ ಹೋಗ ಜನರ ವಿಳಾಶ ಮತ್ತು ದೂರವಾಣಿ ಸಂಖ್ಯೆಗಳ ಮಾಹಿತಿ ಪಡೆದುಕೊಂಡಿದ್ದೇನೆ. ಕೊರೊನಾ ಲಾಕ್‌ಡೌನ್‌ನಿಂದ ಅವರು ದುಡಿಯುತ್ತಿದ್ದ ಸ್ಥಳದಲ್ಲಿಯೇ ಲಾಕ್ ಆಗಿದ್ದು ರಾಜ್ಯ ಸರಕಾರದಿಂದ ಸ್ಪಂದನೆ ಸಿಗುತ್ತಿದ್ದಂತೆ ಅವರನ್ನು ಕೂಡಲೇ ತಾಲೂಕಿಗೆ ಕರೆತರಲಾಗುವುದು ಎಂದು ಅವರು ಹೇಳಿದರು.
ಇನ್ನೂ ೭೦ ಲಕ್ಷ ಸ್ವಂತ ಹಣ ಖರ್ಚು ಮಾಡಲಿದ್ದೇನೆ: ಶಸಕ ನಡಹಳ್ಳಿ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾಗೂ ನೆರೆ ರಾಜ್ಯಗಳಲ್ಲಿ ಇರವು ಕೂಲಿ ಕಾರ್ಮಿಕರನ್ನು ತಾಲೂಕಿಗೆ ಕರೆತಂದು ಅವರಿಗೆ ಆರೋಗ್ಯ ತಪಾಸಣೆ, ಕುಡಿವ ನೀರು, ಊಟ, ೧೫-೨೦ ದಿನಗಳಿಗಾಗುವಷ್ಟು ದವಸ ಧಾನ್ಯದ ಕಿಟ್ ಕೊಡಲಿದ್ದೇನೆ. ಇದಕ್ಕಾಗಿ ೭೦ ಲಕ್ಷ ರೂಪಾಯಿ ಸ್ವಂತದ ಹಣವನ್ನು ಖರ್ಚು ಮಾಡುತ್ತಿದ್ದೇನೆ. ನನ್ನ ಮತಕ್ಷೇತ್ರದ ಜನ ಮರಳಿ ಬಂದ ನಂತರ ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವುದು ಜನಪ್ರತಿನಿಯಾಗಿ ನನ್ನ ಜವಾಬ್ಧಾರಿಯಾಗಿದೆ. ಈಗಾಗಲೇ ವಿಜಯಪುರ ಜಿಲ್ಲಾಕಾರಿ, ಸಾರಿಗೆಸಂಸ್ಥೆಯ ಡಿಸಿ ಜೊತೆ ಚರ್ಚಿಸಿದ್ದೇನೆ. ಈ ಘಟಕದಲ್ಲಿ ೭೦-೮೦ ಬಸ್ಸುಗಳು ಸನ್ನದ್ದವಾಗಿದ್ದು ಸರ್ಕಾರದ ಅನುಮತಿ ಸಿಕ್ಕ ಕೂಡಲೇ ಕಾರ್ಯಾಚರಣೆಗಿಳಿಸಲು ತಿಳಿಸಿದ್ದೇನೆ. ತಾಲೂಕಾಡಳಿತಕ್ಕೂ ಎಲ್ಲ ತಯಾರಿಗೆ ಸೂಚಿಸಿ ತಂಡವನ್ನೂ ರಚಿಸಿದ್ದೇನೆ ಎಂದು ಶಾಸಕರು ತಿಳಿಸಿದರು.
ತಹಸೀಲ್ದಾರ್ ಜಿ.ಎಸ್.ಮಳಗಿ, ಸಿಪಿಐ ಆನಂದ ವಾಗಮೋಡೆ, ಪುರಸಭೆ ಮುಖ್ಯಾಕಾರಿ ಗೋಪಾಲ ಕಾಸೆ, ಘಟಕ ವ್ಯವಸ್ಥಾಪಕ ರಾಹುಲ್ ಹೊನಸೂರೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ತಾಲೂಕು ಬಿಜೆಪಿ ಅಧ್ಯಕ್ಷ ಡಾ| ಪರಶುರಾಮ ಪವಾರ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಕೋವಿಡ್-೧೯ ನಗರ ತಂಡದ ಮೇಲ್ವಿಚಾರಕ ಎಂ.ಎಸ್.ಗೌಡರ, ರಾಜಶೇಖರ ಹೊಳಿ ಮುಂತಾದವರು ಇದ್ದರು.

“ಗೂಳೆ ಜನರನ್ನು ಕರೆತರುವ ಆದೇಶ ಶೀಘ್ರದಲ್ಲಿಯೇ ಸಿಗಲಿದ್ದು ಅದರೊಳಗೆ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ಸಾನಿಟರಿಗೊಳಿಸುವ ಕಾರ್ಯ ನಡೆಯಲಿದೆ. ತಾಲೂಕಿಗೆ ಬರುವ ಗೂಳೆ ಜನರು ಯಾರೇ ಇದ್ದರೂ ಅವರನ್ನು ಕರೆತರಳಿದ್ದು ನನ್ನ ಮತಕ್ಷೇತ್ರದ ಮಣ್ಣಿನ ಮಕ್ಕಳು ಕಷ್ಟ ಎದುರಿಸಲು ಬಿಡುವುದಿಲ್ಲ.”
-ಎ.ಎಸ್.ಪಾಟೀಲ ನಡಹಳ್ಳಿ, ಶಾಸಕರು.



 

Be the first to comment

Leave a Reply

Your email address will not be published.


*