ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಕರೋನ ಲಾಕ್ ಡೌನ್ ನಿಂದಾಗಿ ರಾಜ್ಯದಲ್ಲಿ ಮಧ್ಯಪಾನ ನಿಷೇದವಿದ್ದು ಎಲ್ಲಿಯೂ ಮಧ್ಯ ಸಿಗುತ್ತಿಲ್ಲ ಇದನ್ನೆ ಬಂಡವಾಳ ಮಾಡಿಕೊಂಡ ‘ ಕಳ್ಳಬಟ್ಟಿ’ ತಯಾರಕರು ತಾಲ್ಲೂಕಿನ ಹಲವಾರು ತಾಂಡಾಗಳಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಸರಾಯಿ ತಯಾರಸಿ ಮಾರಾಟ ಮಾಡುತ್ತಿದ್ದಾರೆ ಇದನ್ನು ಅರಿತ ಅಬಕಾರಿ ನಿರೀಕ್ಷಕರು ಖಚಿತ ಮಾಹಿತಿ ಮೆರಗೆ ಮುದ್ದೇಬಿಹಾಳ ತಾಲ್ಲೂಕಿನ ರೂಡಗಿ ತಾಂಡಾದಲ್ಲಿ O 6 ಚಾಲ್ತಿಯಲ್ಲಿರುವ ಕಳ್ಳಬಟ್ಟಿ ಸರಾಯಿ ತಯಾರು ಮಾಡುವ ಘಟಕಗಳು ಪತ್ತೆ ಹಚ್ಚಿ ಕಳ್ಳಬಟ್ಟಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸಿಟ್ಟಿದ್ದ ೧೨೫ ಪ್ಲಾಸ್ಟಿಕ್ ಕೂಡ ಗಳಲ್ಲಿ ಸುಮಾರು ೧೨೫೦ ಲಿಟರ್ ನಷ್ಟು ರಸಾಯನ ಮತ್ತು ೩೦ ಕಳ್ಳಬಟ್ಟಿ ಸರಾಯಿಯನ್ನು ಗುಡ್ಡದ ಪ್ರದೇಶದಲ್ಲಿ ಬಚ್ಚಿಟ್ಟಿದ್ದ ಕಳ್ಳಬಟ್ಟಿ ಯನ್ನು ನಾಶ ಪಡಿಸಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲೆಯಾಗಿರುವುದಿಲ್ಲ
ಈ ಹಿಂದೆಯೂ ಮುದ್ದೇಬಿಹಾಳ ತಾಲ್ಲೂಕಿನ ತಾಂಡಾಗಳಾದ ಹುಲ್ಲೂರು, ಹಗರಗುಂಡ, ಕಾಳಗಿ, ಕೋಳೂರ, ಗೆದ್ದಲಮರಿ, ಬಂಡೆಪ್ಪನ ಸಾಲವಾಡಗಿ ನೇಬಗೇರಿ ,ಮುದ್ನಾಳ ೧೨೩ ತಾಂಡಾಗಳಲ್ಲಿ ಸಂಹ್ರಹಿದ್ದ ಕಳ್ಳಬಟ್ಟಿ ಸರಾಯಿಯನ್ನು ನಾಶ ಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು ಇದಕ್ಕೆ ಸಂಬಂಧಿಸಿದ ಆರೋಪಿಗಳ ಬಂಧನವಾಗಬೇಕಿದೆ ಅಂದಾಗ ಮಾತ್ರ ಅಕ್ರಮ ಕಳ್ಳಬಟ್ಟಿ ತಯಾರಿಕೆಗೆ ಕಡಿವಾಣ ಹಾಕಬಹುದೆಂಬುದು ಜನರ ಅಂಬೋಣವಾಗಿದೆ
ಅಕ್ರಮ ಕಳ್ಳಬಟ್ಟಿ ನಾಶದ ದಾಳಿಯಲ್ಲಿ ಅಬಕಾರಿ ನಿರೀಕ್ಷಕರ ಅಧಿಕಾರಿಗಳಾದ ಎಸ ಎಸ್ ಹಂದ್ರಾಳ, ಅಬಕಾರಿ ರಕ್ಷಕರಾದ ಎಸ್ ಬಿ ಹಾದಿಮನಿ, ಎಸ್ ಡಿ ಜೋಷಿ, ಪ್ರವೀಣ ಪಾಟೀಲ್, ಸಿದ್ರಾಮ ಕುರಬಟಹಳ್ಳಿ ಬಸವರಾಜ ಶಾಕಪೂರ ಇದ್ದರು.
Be the first to comment