ಜೀಲ್ಲಾ ಸುದ್ದಿಗಳು
- ಟೆಂಟ್ ಮತ್ತು ಡೆಕೋರೇಟರ್ ಸೌಂಡ್ ಸಿಸ್ಟಮ್ ಕಾರ್ಮಿಕರ ನೆರವಿಗೆ ಧಾವಿಸುವಂತೆ ಸರ್ಕಾರಕ್ಕೆ ಮನವಿ
- ಲಾಕ್ ಡೌನ ಹಿನ್ನಲೆ ಡೆಕೋರೇಟರ್ ಟೆಂಟ್ ಹೌಸ್ ಕಾರ್ಯಗಳು ಸಂಪೂರ್ಣ ಸ್ಥಗಿತ
ಹುಣಸಗಿ ತಾಲೂಕ ಟೆಂಟ್ ಹೌಸ್ ಮತ್ತು ಡೆಕೋರೇಟರ್ ಮತ್ತು ಸೌಂಡ್ ಸಿಸ್ಟಮ್ ಕ್ಷೇಮಾಭಿವೃದ್ಧಿ ಸಂಘದಿಂದ ತಹಶೀಲ್ದಾರ್ ವಿನಯ್ ಕುಮಾರ್ ಪಾಟೀಲ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಹೌದು ಕೊರೋನಾ ವೈರಸ್ ಪರಿಣಾಮದಿಂದಾಗಿ ಸುಮಾರು ಒಂದೂವರೆ ತಿಂಗಳಿನಿಂದ ಮದುವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಜಾತ್ರೆ ಹಾಗೂ ಉಪನಯನ, ಮುಂಜಿವೆ ಮತ್ತಿತರೆ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ ತಿಲಾಂಜಲಿ ನೀಡಿದೆ, ಈ ಹಿನ್ನೆಲೆಯಲ್ಲಿ ಹುಣಸಗಿ ತಾಲೂಕಿನಾದ್ಯಂತ ಸುಮಾರು 75 ಟೆಂಟ್ ಹೌಸ್ ಹಾಗೂ ಡೆಕೋರೇಟರ್ ಕೆಲಸಗಳಿಗೆ ಕಾರ್ಯ ಕೆಲಸಗಳಿಲ್ಲದೆ ಸ್ಥಬ್ದವಾಗಿರುವುದರಿಂದ 350ರಿಂದ 400 ಕಾರ್ಮಿಕರು ಕೆಲಸಕಾರ್ಯಗಳಿಲ್ಲದೆ ಮನೆಯಲ್ಲೇ ಕುಳಿತಿದ್ದಾರೆ ಇದರಿಂದಾಗಿ ತೀವ್ರ ಸಮಸ್ಯೆಯಾಗಿದೆ.
ಪ್ರತಿವರ್ಷ ಮಾರ್ಚ್ ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಡೆಕೋರೇಟರ್ ಹಾಗೂ ಟೆಂಟ್ ಹೌಸ್ ಗಳಿಗೆ ಪುರುಸೊತ್ತೇ ಇರುವುದಿಲ್ಲ, ಆದರೆ ಈ ವರ್ಷ ಕೊರೊನಾ ಲಾಕ್ ಡೌನ್ ಘೋಷಣೆಯಾದಾಗಿನಿಂದ ಯಾವುದೇ ಸರ್ಕಾರಿ ಕಾರ್ಯಕ್ರಮಗಳಾಗಲಿ ಖಾಸಗಿ ಕಾರ್ಯಕ್ರಮಗಳಾಗಲಿ ಮದುವೆ ಸಮಾರಂಭಗಳಾಗಲಿ ನಡೆಯಯದಿರುವುದರಿಂದ ಉದ್ಯಮ ಸಂಪೂರ್ಣ ನೆಲ ಕಚ್ಚಿದ್ದು ನಾವೆಲ್ಲಾ ತುಂಬಾ ತೊಂದರೆಗೆ ಸಿಲುಕಿದ್ದೇವೆ ಎಂದು ಟೆಂಟ್ ಹೌಸ್ ಮತ್ತು ಡೆಕೋರೇಟರ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶೇಖ್ ಅಹ್ಮದ್ ತಮ್ಮ ಅಳಲನ್ನು ಅಂಬಿಗ ನ್ಯೂಸ್ ವಾಹಿನಿಗೆ ತೋಡಿಕೊಂಡರು.
ನಮ್ಮ ವ್ಯಾಪಾರ ಇಡಿ ವರ್ಷದಲ್ಲಿ 3-4 ತಿಂಗಳು ಮಾತ್ರ ನಡೆಯುತ್ತದೆ ನಾವು ದುಡಿದ ದುಡಿಮೆಯಲ್ಲಿ
ಇಡೀ ವರ್ಷದಲ್ಲಿ ನಮ್ಮ ಕುಟುಂಬದ ಸಂಸಾರ ಜೀವನ ನಡೆಯುತ್ತದೆ.
ಆದರೆ ಕೊರೊನಾ ಎಂಬ ಮಹಾಮಾರಿ ಯಿಂದಾಗಿ ಟೆಂಟ್ ಮತ್ತು ಡೆಕೋರೇಟರ್ ಸೌಂಡ್ ಸಿಸ್ಟಮ್ ಅಂಗಡಿ ಮಾಲೀಕರು ಹಾಗೂ ಕಾರ್ಮಿಕರು ಸಂಪೂರ್ಣ ತೊಂದರೆಯಲ್ಲಿದ್ದಾರೆ.
ಮಾಲೀಕರು ಮುಂಬರುವ ಸೀಜನ್ ಸಲುವಾಗಿ ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ತೀವ್ರ ತೊಂದರೆಯಲ್ಲಿದ್ದಾರೆ, ಇದರಿಂದಾಗಿ ಇಡೀ ವರ್ಷ ಕಷ್ಟ ಎದುರಿಸಬೇಕಾಗುತ್ತದೆ ಎಂದು ಕಾರ್ಯದರ್ಶಿ ಡಿ. ಶಾಮಕುಮಾರ ಹೇಳಿದರು.
ನಮ್ಮ ಕಾರ್ಮಿಕರು ಹಾಗೂ ಅವರ ಕುಟುಂಬಗಳ ಊಟಕ್ಕೆ ತುಂಬಾ ತೊಂದರೆಯಾಗಿದ್ದು ಕಾರಣ ಮಾನ್ಯ ಮುಖ್ಯಮಂತ್ರಿಗಳು ಕಾರ್ಮಿಕರಿಗೆ ಹಾಗೂ ಸಣ್ಣ ಪ್ರಮಾಣದ ಅಂಗಡಿ ಮಾಲೀಕರಿಗೆ ಸರಕಾರದಿಂದ ಅನುದಾನ ನೀಡಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ,
ಹಾಗಾಗಿ ಅಂಗಡಿ ಮಾಲೀಕರ ಹಾಗೂ ಕಾರ್ಮಿಕರ ನೆರವಿಗೆ ಸರಕಾರ ಕೂಡಲೇ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ಡಿ. ಶ್ಯಾಮಸುಂದರ್,ಬಸವರಾಜ, ಮಲ್ಲು ಹೆಬ್ಬಾಳ, ವೆಂಕಟೇಶ್, ಜಮೀರ್, ಸಿಕಂದರ್, ಮೈಬೂಬ್, ಬುಡೇಸಾಬ್, ಸದ್ದಾಮ್, ಹುಸೇನ್ ಸಾಬ್, ಪರಶುರಾಮ್, ಸಂತೋಷ ರಾಠೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ:- ಆನಂದ ಹೊಸಗೌಡರ್ ಹುಣಸಗಿ
Be the first to comment