ಅಂಬಿಗ ನ್ಯೂಸ್ ಸುರಪುರ:-ದೇಶದಲ್ಲಿ ಲಾಕ್‌ಡೌನ್ ಜಾರಿಯಾದ ಬಳಿಕ ಬಡವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆ ಅನೇಕ ಸಂಘ-ಸಂಸ್ಥೆಗಳು ಇಂಥವರ ನೆರವಿಗೆ ಧಾವಿಸಿದ್ದು, ಊಟ ದಿನಸಿ ಕಿಟ್ ವಿತರಿಸುವ ಕಾರ್ಯ ಮಾಡುತ್ತಿವೆ.
ಯಾದಗಿರಿ/ಸುರಪುರ: ತಾಲೂಕಿನ ಹುಣಸಗಿಯಲ್ಲಿ 3,000 ಕುಟುಂಬಗಳಿಗೆ ಶಾಸಕ ರಾಜುಗೌಡ ದಿನಸಿ ಕಿಟ್ ಹಾಗೂ 5 ಸಾವಿರ ಜನರಿಗೆ ಆಹಾರ ವಿತರಣೆ ಮಾಡಿದರು.
ತಾಲೂಕಿನಲ್ಲಿರುವ ಬಡ, ನಿರ್ಗತಿಕ ಹಾಗೂ ಬೇರೆ ರಾಜ್ಯಗಳಿಂದ ಬಂದು ಲಾಕ್‌ಡೌನ್ ಘೋಷಣೆಯಿಂದ ಇಲ್ಲೇ ಉಳಿದುಕೊಂಡಿರುವ ಸುಮಾರು 3 ಸಾವಿರ ಕುಟುಂಬಗಳಿಗೆ ಟೀಂ ರಾಜುಗೌಡ ಸೇವಾ ಸಮಿತಿಯ ವತಿಯಿಂದ ಶಾಸಕ ನರಸಿಂಹ ನಾಯಕ ರಾಜುಗೌಡ ಹುಣಸಗಿ ಪಟ್ಟಣದಲ್ಲಿ ದಿನಸಿ ಕಿಟ್‌ಗಳನ್ನು ವಿತರಿಸಿದರು.
ಅಕ್ಕಿ, ಗೋಧಿ, ಜೋಳ ಮತ್ತಿತರೆ ದವಸ ಧಾನ್ಯಗಳನ್ನೊಳಗೊಂಡ ಸಾಮಗ್ರಿಗಳ ಕಿಟ್‌ಗಳನ್ನು ಹುಣಸಗಿಯ ಕಲ್ಯಾಣ ಮಂಟಪವೊಂದರಲ್ಲಿ ಸಂಗ್ರಹಿಸಿ ಜನರಿಗೆ ವಿತರಿಸಿದರು.
ಸುರಪುರದಲ್ಲಿ 3 ಸಾವಿರ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಶಾಸಕ ರಾಜುಗೌಡಬಳಿಕ ಮಾತನಾಡಿದ ಅವರು, ತಾಲೂಕಿನ ಪ್ರತಿ ಗ್ರಾಮದಲ್ಲಿನ ಬಡ ಜನರು ಹಸಿವಿನಿಂದ ಇರಬಾರದೆಂದು ದಿನಸಿ ಕಿಟ್ ವಿತರಿಸಲಾಗುತ್ತಿದೆ. ಅಲ್ಲದೆ ಸುರಪುರ, ಹುಣಸಗಿ ಮತ್ತಿತರ ಕಡೆಗಳಲ್ಲಿ ನಿತ್ಯವೂ 5 ಸಾವಿರಕ್ಕೂ ಹೆಚ್ಚಿನ ಜನರಿಗೆ ಆಹಾರ ನೀಡಲಾಗುತ್ತಿದೆ ಎಂದರು.
ಏಕಕಾಲಕ್ಕೆ ಮೂರು ಸಾವಿರ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ವಿತರಿಸುವ ಮೂಲಕ ತಾಲೂಕಿನ ಜನರಿಂದ ಮೆಚ್ಚುಗೆ ಗಳಿಸಿದ್ದಾರೆ.
Be the first to comment