ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು– ಪಾವ೯ತಿ ಸೋನಾರೆ

ವರದಿ:- ಚಂದ್ರಕಾಂತ ಹಳ್ಳಿಖೇಡಕರ್ ಬೀದರ್.

ಜೀಲ್ಲಾ ಸುದ್ದಿಗಳು

ಬೀದರ್, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ್ ವತಿಯಿಂದ ವಿಶ್ವ ಮಾನವ, ಸಮಾನತೆಯ ಹರಿಕಾರ, ಕ್ರಾಂತಿಯೋಗಿ ಬಸವಣ್ಣನವರ ಜಯಂತೋತ್ಸವವನ್ನು ಅತ್ಯಂತ ಸರಳವಾಗಿ ಮನೆ ಅಂಗಳದಲ್ಲಿ , ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವದರೊಂದಿಗೆ ಆಚರಿಸಲಾಯಿತು.

ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಪಾರ್ವತಿ ಸೋನಾರೆ ಯವರು ಮಾತನಾಡಿ, ಸಮಾನತೆಯ ಹರಿಕಾರರಾದ ಬಸವಣ್ಣನವರ ವಚನಗಳು ಜಗತ್ತಿಗೆ ಮಾನವೀಯತೆಯ ಮೌಲ್ಯಗಳನ್ನು ಸಾರುತ್ತವೆ. ಪ್ರತಿಯೊಬ್ಬರೂ ವಚನಗಳ ಸಾರವನ್ನು ಅರಿಯಬೇಕಲ್ಲದೆ ಜೀವನದಲ್ಲಿ
ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ವಚನಗಳನ್ನು ಕಲಿಸುವುದು ತುಂಬಾ ಅವಶ್ಯಕತೆ ಇದೆ. ಇವತ್ತು ಜಗತ್ತಿನಾದ್ಯಂತ ಕಂಟಕವಾಗಿ ಕಾಡುತ್ತಿರುವ ಕರೋನಾ ವೈರಸ್ಸಿನ ಅಟ್ಟಹಾಸ ನೋಡಿದರೆ ಬಸವಣ್ಣನವರ ವಚನ ಒಲೆ ಹತ್ತಿ ಉರಿದೊಡೆ ನೀಲಬಹುದಲ್ಲದೆ ಧರೆ ಹತ್ತಿ ಉರಿದೊಡೆ ಈ ನಿಲಲುಬಾರದು.

“ತಾಯಿ ಮೊಲೆಹಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆ ಕೂಡಲಸಂಗಮದೇವ” ಎಂಬ ವಚನವು ಪ್ರಸ್ತುತವೆನಿಸುತ್ತದೆ.

ಸ್ತ್ರೀ ಸಮಾನತೆಗಾಗಿ ಧ್ವನಿ ಎತ್ತಿದ ಕ್ರಾಂತಿಕಾರಿ ಬಸವಣ್ಣನವರು ಮನುಷ್ಯ ಮನುಷ್ಯರನ್ನು ಪ್ರೀತಿಸುವುದನ್ನು ಕಲಿಸಿಕೊಟ್ಟ ಬಸವಣ್ಣನವರ ತತ್ವಾದರ್ಶಗಳನ್ನು ಕಾರ್ಯರೂಪಕ್ಕೆ ತರಬೇಕು.
ಕೇವಲ ಭಾಷಣಕ್ಕೆ ಸೀಮಿತವಾಗಬಾರದು ಎಂದರು.

ಅದೇ ರೀತಿಯಾಗಿ ಬೀದರ ತಾಲೂಕಿನ ಅಧ್ಯಕ್ಷರಾದ ಅರವಿಂದ್ ಕುಲಕರ್ಣಿಯವರು ಮಾತನಾಡಿ ಜಗತ್ಮತಿನ ಜೀವರಾಶಿಗಳನ್ನೆಲ್ಲ ಪ್ರೀತಿಸಿದ ಶ್ರೇಷ್ಠ ಮಾಹಾ ಮಾನವ ಬಸವಣ್ಣನವರು ಈ ಸಮಾಜ ದಲ್ಲಿರುವ ಕೆಟ್ಟಪದ್ದತಿಗಳ ವಿರುದ್ಧ ಹೋರಾಡಿದರು.

“ಕಳಬೇಡ ಕೊಲಬೇಡ ಹುಸಿಯನುಡಿಯಲು ಬೇಡ” ಎಂಬ ಒಂದೇ ಒಂದು ವಚನದ ಸಾರವನ್ನು ಅರಿತರೆ ಸಾಕು ಮನುಷ್ಯ ಮಾಹಾ ಮಾನವ ನಾಗುತ್ತಾನೆ ಎಂದರು.

ಅದೇ ರೀತಿಯಾಗಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಓಂಕಾರ ಪಾಟೀಲ್ ಅವರು ಮಾತನಾಡಿ, ಬಸವಣ್ಣನವರು ಜಗತ್ತಿನ ಶ್ರೇಷ್ಠ ಸಮಾನತೆಯ ಹರಿಕಾರರು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮಕ್ಕಳಿಗೆ ವಚನಗಳನ್ನು ಕಲಿಸಬೇಕು ಎಂದರು.

ಡಾ ಗ್ರಂಥಿಕಾ ಅವರು ವಚನ ಗಾಯನ ಮಾಡಿದರು. ಕು ಸಾಹಿತ್ಯ ಮಾಳಕೋಟೆ ವಚನಗಳ ವಾಚನ ಮಾಡಿದಳು. ಕು. ಸಾಯಿಕಿರಣ ಮಾಳಕೋಟೆ ಸ್ವಾಗತಿಸಿದರೆ, ಶ್ರೀಮತಿ ಚಂದ್ರಾವತಿ ಗಂಟೆ ವಂದನಾರ್ಪಣೆ ಮಾಡಿದರು.

Be the first to comment

Leave a Reply

Your email address will not be published.


*