ಗ್ರಾಮ ಪಂಚಾಯತ್ ನೇಮಕದಲ್ಲಿ ಅಕ್ರಮ..?

ಜೀಲ್ಲಾ ಸುದ್ದಿಗಳು

ಸದಸ್ಯರ ಗಮನಕ್ಕಿಲ್ಲದೇ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ನೇಮಕ ಮಾಡಿರುವುದು‌ ಅಪರಾಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಗೆ ಒಳಪಡಿಸಿಬೇಕು  ಭೀಮು ಕೋಲಿ

ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲ್ಲೂಕಿನ ಪಸಪೂಲ್ ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ನಡೆದ ನೇಮಕಾತಿಯಲ್ಲಿ ಅವ್ಯವಹಾರದ ಶಂಕೆ ವ್ಯಕ್ತವಾಗಿದೆ…ಗ್ರಾಮ ಪಂಚಾಯಿತಿಯಲ್ಲಿ ಖಾಲಿಯಿದ್ದ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ 2016ರಲ್ಲಿ ಬಸವರಾಜ್ ಎಂಬುವವರು ಸ್ವಹಿತಾಸಕ್ತಿಯಿಂದ ಅರ್ಜಿ ಸಲ್ಲಿಸಿದ್ದರು ಈ ಅರ್ಜಿ ಆಧರಿಸಿ ಗ್ರಾಮೀಣಾಭಿವೃದ್ಧಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಪಂಚಾಯಿತಿಯ ಯಾವೊಬ್ಬ ಸದಸ್ಯರ ಗಮನಕ್ಕೆ ತಾರದೆ ಕಳೆದ ಎರಡು ಸಾವಿರದ ಹದಿನಾರು ರ ಅಕ್ಟೋಬರ್ ರಂದು ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಅಪ್ಪಣೆ ಮೇರೆಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಪಿಡಿಒ ರವರು ಉತ್ತರ ನೀಡಿರುತ್ತಾರೆ.ಗ್ರಾಮ ಪಂಚಾಯಿತಿನಲ್ಲಿ ಯಾವುದೇ ಹುದ್ದೆ ಭರ್ತಿ ಮಾಡಬೇಕಾದರೆ ಕಡ್ಡಾಯವಾಗಿ ಜಿಲ್ಲಾ ಪಂಚಾಯತ್ ಸಿಇಒ ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮವಿದೆ. ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಯಾದಗೀರಿ ಇವರು ಸದರಿ ದೂರಿನ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ಚಂದ್ರಶೇಖರ್ ಪವರ್ ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಖಾತ್ರಿ ತಾಲ್ಲೂಕು ಪಂಚಾಯ್ತಿ ಯಾದಗಿರಿ ಇವರನ್ನು ನೇಮಿಸಿರುತ್ತಾರೆ ಸದರಿ ಪರಿಶೀಲನಾಧಿಕಾರಿಗಳು ಪುಷ್ ಪುಲ್ ಗ್ರಾಮ ಪಂಚಾಯತ್ ನಲ್ಲಿ ಕಂಪ್ಯೂಟರ್ ಕ್ಲರ್ಕ್ ಆಪರೇಟರ್ ಹುದ್ದೆಗೆ ಬಸವರಾಜ್ ತಂದೆ ಚನ್ನಪ್ಪ ಸಾ: ಪಸ್ಪೂಲ್ ಎಂಬುವರು ದಿನಾಂಕ :08/10/2016 ರಲ್ಲಿ ಸ್ವಇಚ್ಛೆಯಿಂದ ಸ್ವವಿವರಗಳೊಂದಿಗೆ ಗ್ರಾಮ ಪಂಚಾಯಿತಿಯಲ್ಲಿ ತನ್ನನ್ನು ಕಂಪ್ಯೂಟರ್ ಆಪರೇಟರ್ ಹುದ್ದೆಗೆ ನೇಮಕ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿರುತ್ತಾರೆ. ಸದರಿ ಅರ್ಜಿಗೆ ವಿಷಯ ನಿರ್ವಾಹಕರ ಸಹಿ ಮತ್ತು ಕಛೇರಿಯ ಮೊಹರು ಇರುವುದಿಲ್ಲ. ವಿಶೇಷ ಸಭೆಯಲ್ಲಿ ಅಧ್ಯಕ್ಷರ ಅಪ್ಪಣೆ ಮೇರೆಗೆ ವಿಷಯಗಳ ಚರ್ಚೆ ಅಡಿಯಲ್ಲಿ ದಿನಾಂಕ:16/06/2016 ರಂದು ಬಸರಾಜ/ಚನ್ನಪ್ಪ ಇವರನ್ನು ಸರ್ಕಾರದ ಆದೇಶದ ಪ್ರಕಾರ ನೇಮಕ ಮಾಡಿಕೊಳ್ಳಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು ಎಂದು ನಮೂದಿಸಿರುತ್ತಾರೆ. ಅದೇ ತಿಂಗಳ ದಿನಾಂಕ:28/06/2016 ರಂದು ನಡೆದ ವಿಶೇಷ ಸಭೆಯಲ್ಲಿ ಅಧ್ಯಕ್ಷರ ಅಪ್ಪಣೆ ಮೇರೆಗೆ ವಿಷಯಗಳ ಚರ್ಚೆಯಲ್ಲಿ ಬಸವರಾಜ ಚನ್ನಪ್ಪ ಇವರನ್ನು ಕಂಪ್ಯೂಟರ್ ಆಪರೇಟರ್ ಹುದ್ದೆಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಸಭೆಯ ನಡಾವಳಿಗಳಲ್ಲಿ ಬರೆದಿರುತ್ತಾರೆ. ಇದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಸದರಿ ನಡವಳಿಗಳಲ್ಲಿ ಹಾಳೆಗಳನ್ನು ಕತ್ತರಿಸಿ ಬೇರೆ ಹಾಳೆ ಅಂಟಿಸಿ ನಡುವಳಿಗಳನ್ನು ಬರೆದಿರುವುದು ಕಂಡುಬಂದಿದೆ ಹಾಗೂ ನಡಾವಳಿಗಳಲ್ಲಿ ದಿನಾಂಕವನ್ನು ಸಂಪೂರ್ಣವಾಗಿ ತಿದ್ದುಪಡಿ ಮಾಡಲಾಗಿದೆ ಈ ನಡುವಳಿಗಳಿಗೆ ನಿವೃತ್ತ ಅಭಿವೃದ್ಧಿ ಅಧಿಕಾರಿ ದೇವೇಂದ್ರಪ್ಪ ರವರು ಸಹಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಭೀಮು ಕೋಲಿ ಆರೋಪಿಸಿದ್ದಾರೆ.ಗ್ರಾ ಪಂ ಕಂಪ್ಯೂಟರ್ ಆಪರೇಟರ್ ನೇಮಕ ಮಾಡಿಕೊಂಡು ಅನುಮೋದನೆಗಾಗಿ ತಾಲ್ಲೂಕು ಪಂಚಾಯಿತಿಗೆ ಕಳಿಸಿರುವ ಪ್ರಸ್ತಾವನೆಗಳು ಎರಡು ಇವೆ ಈ ಒಂದು ಪ್ರಸ್ತಾವನೆಗೆ ನಿವೃತ್ತ ಪಿಡಿಒ ದೇವೇಂದ್ರಪ್ಪ ರವರು ಸಹಿ ಮಾಡಿದ್ದು, ಇನ್ನೊಂದು ಪ್ರಸ್ತುತ ಪಿಡಿಓ ಮಲ್ಲಣ್ಣರವರು ಸಹಿ ಮಾಡಿರುವ ಪ್ರಸ್ತಾವನೆಗಳು ದೊರೆತಿವೆ ಸದರಿ ಎರಡು ಪ್ರಸ್ತಾವನೆಗಳಿಗೆ ದಿನಾಂಕವೇ ಇರುವುದಿಲ್ಲ ಹಾಗೆಯೇ ಸೇವಾ ದೃಢೀಕರಣ ಪತ್ರ, ಚೆಕ್ ಲಿಸ್ಟ್ ಪತ್ರಕ್ಕೆ ದಿನಾಂಕ ತಿದ್ದುಪಡಿ ಮಾಡಿ, ದಿನಾಂಕ ಮುಂದಿರುವುದಿಲ್ಲ ಇದರಲ್ಲಿಯೂ ಸಹ ಸಾಮಾನ್ಯ ಸಭೆಯ ದಿನಾಂಕ ತಿದ್ದುಪಡಿಯಾಗಿದೆ. ಗ್ರಾಮ ಪಂಚಾಯತ್ ನಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲು ಸಿಇಒ ಜಿಲ್ಲಾ ಪಂಚಾಯಿತಿ ಯಾದಗಿರಿ ರವರಿಂದ ಅನುಮೋದನೆ ಪಡೆಯುವುದು ಅವಶ್ಯವಿರುತ್ತದೆ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ಪಸ್ ಪೂಲ್ ಇವರು ಜಿಲ್ಲಾ ಪಂಚಾಯತ್ ಅನುಮೋದನೆ ಪಡೆದಿಲ್ಲವೆಂದು ತನಿಖಾ ವರದಿಯಿಂದ ಕಂಡುಬಂದಿದೆ. ಕಂಪ್ಯೂಟರ್ ಆಪರೇಟರ್ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ, ಪತ್ರಿಕಾ ಪ್ರಕಟಣೆ ಮಾಡಿರುವ ಕುರಿತು ಯಾವುದೇ ದಾಖಲೆ ಸಲ್ಲಿಸದೇ ಇರುವುದು ತನಿಖಾ ವರದಿಯಿಂದ ಕಂಡುಬಂದಿರುತ್ತದೆ.ಸದರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಸಾಮಾನ್ಯ ಸಭೆಯಲ್ಲಿ ವಿಷಯ ಚರ್ಚಿಸದೇ ನಿಯಮ ಉಲ್ಲಂಘಿಸಿರುವುದು ಸ್ಪಷ್ಟವಾಗಿ ಕಂಡು ಬಂದಿರುತ್ತದೆ. ಸದರಿ ನೇಮಕಾತಿ ಮಾಡಿರುವ ಕುರಿತು ತನಿಖಾ ವರದಿ ಸಾಮಾನ್ಯಸಭೆ ನಡಾವಳಿಗಳು, ಗ್ರಾಮ ಪಂಚಾಯಿತಿ ಎರಡೂ ಪ್ರಸ್ತಾವನೆಗಳು ಮತ್ತು ಸರ್ಕಾರದ ಆದೇಶವನ್ನು ಉಲ್ಲೇಖಿಸಲಾಗಿದೆ. ಕಂಪ್ಯೂಟರ್ ಆಪರೇಟರ್ ಹುದ್ದೆಗೆ ನೇಮಕ ಮಾಡಿರುವುದು ಕರ್ನಾಟಕ ಗ್ರಾಮ ಸ್ವರಾಜ್ ಅಧಿನಿಯಮ ಪ್ರಕರಣ 112 &113 ರಲ್ಲಿ ತಿಳಿಸಿರುವಂತೆ ಹಾಗೂ ಸರ್ಕಾರದ ಆದೇಶವು ದಿನಾಂಕ:10/09/2014 ರಲ್ಲಿ ತಿಳಿಸಿರುವಂತೆ ಇಂಥ ನೇಮಕಾತಿಗಳು ಅಸಿಂಧು ವಾಗಿರುತ್ತವೆಂದು ಭೀಮು ಕೋಲಿ ಹೇಳಿದ್ದಾರೆ. ಕಂಪ್ಯೂಟರ್ ಆಪರೇಟರ್ ಬಸವರಾಜ ತಂದೆ ಚನ್ನಪ್ಪ ಎಂಬುವರ ಆಮಿಷಕ್ಕೆ ಒಳಗಾಗಿ ಅಕ್ರಮವಾಗಿ ಆತನನ್ನು ರಕ್ಷಿಸುವ ಸಲುವಾಗಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಅವರುಗಳ ಅಧಿಕಾರ ವ್ಯಾಪ್ತಿ ಮೀರಿ ಸುಳ್ಳು ಹಾಗೂ ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರ ಎಸಗಿ ಇಲಾಖೆಯ ಗೌರವಕ್ಕೆ ಧಕ್ಕೆ ಬರುವ ರೀತಿ ನಡೆದುಕೊಂಡಿರುವುದು ಇವರುಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶ ಮಾಡಲು ಹಾಗೂ ಸದರಿ ಬಸವರಾಜ ಚನ್ನಪ್ಪ ಎಂಬುವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಿ ಸದರಿ ವ್ಯಕ್ತಿಗೆ ನೇಮಕವಾದ ದಿನಾಂಕದಿಂದ ಸರ್ಕಾರದ ವತಿಯಿಂದ ನೀಡಲಾದ ವೇತನವನ್ನು ಇಲಾಖೆ ರಾಜಸ್ವ ಹಿತದೃಷ್ಟಿಯಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರುಗಳಿಂದ ಸಂದಾಯವಾದ ವೇತನವನ್ನು ಮರುಭರಣ ಮಾಡಿಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

Be the first to comment

Leave a Reply

Your email address will not be published.


*