ಜೀಲ್ಲಾ ಸುದ್ದಿಗಳು
ಹುಕ್ಕೇರಿ ವರಧಿ :ಮಹಾಮಾರಿ ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಲಾಕ್ ಡೌನ ಮಾಡಲಾಗಿದೆ. ಬಡವರು ಕೆಲಸವಿಲ್ಲದೆ ಜೀವನ ನಡೆಸುವದು ಕಷ್ಟಕರವಾಗಿದೆ.ಇತಂಹ ಪರಿಸ್ಥಿತಿಯನ್ನು ಅರಿತು ಪಿ ಕೆ ಪಿ ಎಸ್ ಸಂಘದ ಅಧ್ಯಕ್ಷ ಹನುಮಂತರಾವ್ ಇನಾಮದಾರ ಸರ್ಕಾರ್, ಉಪಾಧ್ಯಕ್ಷ ರವೀಂದ್ರ ಕೋಳಿ ಮತ್ತು ಆಡಳಿತ ಮಂಡಳಿ ವತಿಯಿಂದ ಆಹಾರ ಧಾನ್ಯ ಕಿಟ್ ವಿತರಣೆ ಮಾಡಲು ಮುಂದಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರ್ಜುನವಾಡ ಗ್ರಾಮದಲ್ಲಿ ಬಡಜನರಿಗಾಗಿ ವಿತರಿಸಲಾದ ಆಹಾರಧಾನ್ಯ ಹಾಗೂ ದಿನಬಳಕೆ ಅವಶ್ಯಕ ವಸ್ತುಗಳ ಕಿಟ್ ಗಳನ್ನು ತಯಾರಿಸಲಾಯಿತು.
ಗ್ರಾಮದಲ್ಲಿರುವ BPL ಕಾರ್ಡ ಹೊಂದಿದೆ ಜನರನ್ನು ಗುರುತಿಸಿ ಸಾಮಾಜಿಕ ಅಂತರದ ಮೂಲಕ ಕಾಯ್ದರಿಸಿ ಬಡವರಿಗೆ ಆಹಾರ ಧಾನ್ಯ ವಿತರಿಸಲಾಯಿತು.
ದಿನ ಬಳಕೆ ವಸ್ತುಗಳಾದ ಅಕ್ಕಿ,ಸಕ್ಕರೆ, ಗೋಧಿ ಟ್ಯೂಥಪೆಸ್ಟ್, ಸಾಬುನು , ಮಸಾಲಿ ಪಾಕೇಟ್, ಸೇರಿದ ಕಿಟ ಸಾಮಗ್ರಿ ವಿತರಿಸಲಾಯಿತು. ಗ್ರಾಮದ ವಿವಿಧ ಸಂಘಟನೆಗಳು ಧನಸಹಾಯ ಹಸ್ತ ತೋರಿದರು.ಈ ಸಂದರ್ಭದಲ್ಲಿ ಹನುಮಂತರಾವ ಇನಾಮದಾರಸರ್ಕಾರ್ 12900:00 ರೂ ಸಹಾಯ ಮಾಡುವುದರ ಮೂಲಕ ಮಾನವೀಯತೆ ಮೆರೆದರು.
ವಿತರಣೆ ಸಂದರ್ಭದಲ್ಲಿ ಪಿಕೆಪಿ ಎಸ್ ಅದ್ಯಕ್ಷ ಹನುಮಂತರಾವ ಇನಾಮದಾರಸರ್ಕಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಬಾಲಚಂದ್ರ ಇನಾಮದಾರಸರ್ಕಾರ್,ಮಾಂತೇಶ ರಾಮನಕಟ್ಟಿ, ಬಸಗೌಡ ಪಾಟೀಲ, ಆರೋಗ್ಯ ಅಧಿಕಾರಿ ಡಾ. ಅನುಶಾ ಟಿ, ಸೇರಿದಂತೆ ಪಿಕೆಪಿ ಎಸ್ ಸದಸ್ಯರು ಮತ್ತು ಶಿಬ್ಬಂದಿ ಉಪಸ್ಥಿತರಿದ್ದರು.
Be the first to comment