ಮುದ್ರಣ,ವಿದ್ಯುನ್ಮಾನ ಮಾಧ್ಯಮ ವರದಿಗಾರ ಪ್ರತಿನಿಧಿಗಳಿಗೆ ಕೊರೊನಾ ತಪಾಸಣಾ ಶಿಬಿರ

ವರದಿ:- ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್ ಸುರಪುರ

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಎಲ್ಲ ಪತ್ರಕರ್ತರಿಗೆ ಕರ್ನಾಟಕ ಸರ್ಕಾರದ ನಿರ್ದೇಶನದಂತೆ ಎಲ್ಲಾ ಜಿಲ್ಲೆ ತಾಲೂಕು ಹಾಗೂ ಗ್ರಾಮೀಣ ಮಟ್ಟದ ಪತ್ರಕರ್ತರು ಹಗಲಿರುಳು ತಮ್ಮ ಜೀವದ ಹಂಗನ್ನು ತೊರೆದುಕೊಂಡು ಗಲ್ಲಿ ಗಲ್ಲಿಗಳಲ್ಲಿನ ವ್ಯವಸ್ಥೆಗಳನ್ನು ಕುರಿತು ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದು ಅವರ ಆರೋಗ್ಯ ಸುರಕ್ಷತೆಗಾಗಿ ಕೊರೊನಾ ವೈರಸ್ ಮತ್ತು ಇತರೆ ಆರೋಗ್ಯ ಕ್ಷೇಮಕ್ಕಾಗಿ ನಗರದ ಎಲ್ಲಾ ಪತ್ರಕರ್ತರಿಗೆ ಆರೋಗ್ಯ ತಪಾಸಣೆ ಕಾರ್ಯ ಕೈಗೊಳ್ಳಲಾಯಿತು.

ರಾಜ್ಯ ಸರ್ಕಾರದ ಆದೇಶದ ಮೇರೆಗೆ ಇಂದು ತಾಲೂಕಿನ ಹಳೆ ಸರಕಾರಿ ದವಾಖಾನೆ ಯಲ್ಲಿ ಪತ್ರಕರ್ತರಿಗೆ ಕರೋನಾ ಗೆ ಸಂಬಂಧಿಸಿದ ತಪಾಸಣೆಯನ್ನು
ಮಾಡಲಾಯಿತು.

ಈ ಕುರಿತು ಮಾತನಾಡಿದ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ತಾಲೂಕು ಘಟಕದ ಅಧ್ಯಕ್ಷರಾದ ರಾಜು ಕುಂಬಾರ
ಕೋರೋನ ವಿರುದ್ಧ ದೇಶಾದ್ಯಂತ ಲಾಕ್‍ಡೌನ್ ಮಾಡಿರುವ ಸಂದರ್ಭದಲ್ಲಿ ನಾವೆಲ್ಲರೂ ಕೊರೊನಾ ಸಮಸ್ಯೆಯ ಗಂಭೀರತೆ ಅರಿಯಬೇಕಿದೆ, ಎಲ್ಲರೂ ಸ್ವಚ್ಛತೆ ಮತ್ತು ಸಾಮಾಜಿಕ ಅಂತರ ಕಾಪಾಡಬೇಕು, ಎಲ್ಲರೂ ಮನೆಯಲ್ಲೇ ಇರಬೇಕು ಈ ಕೋರೋನ ಸೋಂಕನ್ನು ತಡೆಯಲು ನಮ್ಮೆಲ್ಲ ಮಾಧ್ಯಮ ಮಿತ್ರರು ಕೂಡಾ , ಸಾರ್ವಜನಿಕವಾಗಿ ಅರ್ಥೈಸಿಕೊಳ್ಳುವದು ತುಂಬಾ ಅಗತ್ಯವಿದೆ‌ ಎಂದು ಹೇಳಿದರು .

ಸರ್ಕಾರದ ಆದೇಶ ಮೇರೆಗೆ ಎಲ್ಲ ಪತ್ರಕರ್ತ ಮಿತ್ರರು ಆಗಮಿಸಿ ತಾಲೂಕು ಆಸ್ಪತ್ರೆಯಲ್ಲಿ ತಮ್ಮ ಆರೋಗ್ಯ ತಪಾಸಣೆ ಯನ್ನು ಮಾಡಿಸಿಕೊಂಡು.

ತಾಲೂಕು ವೈದ್ಯಾಧಿಕಾರಿಗಳಾದ ರಾಜಾ ವೆಂಕಪ್ಪ ನಾಯಕ್,ತಾಲ್ಲೂಕು ದಂಡಾಧಿಕಾರಿಗಳಾದ ನಿಂಗಣ್ಣ ಬಿರಾದರ್ ಅವರ ನೇತೃತ್ವದಲ್ಲಿ ಪತ್ರಕರ್ತರಿಗೆ ತಪಾಸಣೆ ಮಾಡಲಾಯಿತು..

ವರದಿಗಾರೆಲ್ಲರಿಗೂ ಯಾವುದೇ ಕೊರೋನಾ ಸಂಬಂಧಿತ ಲಕ್ಷಣಗಳು ಕಂಡು ಬಂದಿಲ್ಲ ಹಾಗಾಗಿ ಎಲ್ಲರ ವರದಿಗಳು ನೆಗೆಟಿವ್ ಬಂದಿವೆ .

ಈ ಶಿಬಿರದಲ್ಲಿ RBSK ವೈದ್ಯಾಧಿಕಾರಿಗಳಾದ
ಡಾ: ಪ್ರಕಾಶ,
ಡಾ :ಪಾರ್ವತಿ,
ಡಾ: ಶ್ರೀ ಮತಿ ಮಲ್ಕಮ್ಮ S ಹಿರೇಮಠ ಸೇರಿದಂತೆ ತಾಲ್ಲೂಕಿನ ಎಲ್ಲಾ ಮುದ್ರಣ,ವಿದ್ಯುನ್ಮಾನ ಮಾಧ್ಯಮ ವರದಿಗಾರ ಪ್ರತಿನಿಧಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*