ಜೀಲ್ಲಾ ಸುದ್ದಿಗಳು
ಹರಿಹರ:-ಚೀನಾದಲ್ಲಿ ಜನ್ಮ ತಾಳಿ ಇಡೀ ವಿಶ್ವಾದ್ಯಂತ ತನ್ನ ವಂಶಾಭಿವೃದ್ಧಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಕರೋನಾ ವೈರಸ್ ನಿಯಂತ್ರಣಕ್ಕಾಗಿ ಭಾರತ ಸರ್ಕಾರವು ಇಡೀ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದೆ .
- ಲಾಕ್ ಡೌನ್ ಘೋಷಣೆಯ ನಡುವೆಯೂ ದೃಶ್ಯ ಮಾಧ್ಯಮ ವರದಿಗಾರರು ಕರೋನಾ ವೈರಸ್ ಜಾಗೃತಿಗೆ ಕುರಿತಂತೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ .
ಜನರಲ್ಲಿ ಕರುಣಾ ನಿಯಂತ್ರಣಕ್ಕಾಗಿ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಅರಿವು ಮೂಡಿಸುತ್ತಿರುವ ದೃಶ್ಯ ಮಾಧ್ಯಮದ ವರದಿಗಾರರ ನೆರವಿಗೆ ಹರಿಹರದ ಸಮಾಜ ಸೇವಕರಾದ ಹಾಗೂ 1999 ರಲ್ಲಿ ಪತ್ರಿಕಾ ಮಾಧ್ಯಮ ಏಜೆನ್ಸಿ ಪಡೆದಿದ್ದ ಹಾಗೂ ಪತ್ರಕರ್ತರ ನೋವನ್ನು ಏನೆಂದು ಸ್ವತಃ ಅರಿತುಕೊಂಡಿದ್ದ ಸಿ ಎನ್ ಮಂಜುನಾಥ್ ಇವರು ಹರಿಹರದ ದೃಶ್ಯ ಮಾಧ್ಯಮ ವರದಿಗಾರರ ನೆರವಿಗೆ ಸ್ಪಂದಿಸಿ, ಸಂಕಷ್ಟದ ಸಮಯದಲ್ಲಿ ಮಾನವೀಯತೆ ಮುಖ್ಯ ನಾವು ನಿಮ್ಮೊಂದಿಗೆ ಇದ್ದೇವೆ .ನೀವು ಸಹ ಆರೋಗ್ಯ ಸೇವಕರು’ ಆಶಾ ಕಾರ್ಯಕರ್ತರ,ಪೌರ ಕಾರ್ಮಿಕರಂತೆ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಜನಸಾಮಾನ್ಯರಲ್ಲಿ ಕರೋನಾ ವೈರಸ್ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜನರಲ್ಲಿ ದೃಶ್ಯ ಮಾಧ್ಯಮದ ವರದಿಯ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ ನಿಮ್ಮ ಸೇವೆಯೂ ಇಂಥ ಸಂದರ್ಭದಲ್ಲಿ ಅತ್ಯವಶ್ಯಕ ಈ ಸಂದರ್ಭದಲ್ಲಿ ನಾವು ನಿಮ್ಮೊಂದಿಗೆ ಇದ್ದು ನಮ್ಮ ಕೈಲಾದ ಸೇವೆ ಮಾಡುವುದು ನಮ್ಮಗಳ ಭಾಗ್ಯ ಇಂಥ ಸಂಕಷ್ಟದ ಸಮಯದಲ್ಲಿ ನಿಮಗೆ ನಾವು ಇಂದು ಆಹಾರದ ಕಿಟ್ಟನ್ನು ನೀಡಲು ಸಂತೋಷ ಪಡುತ್ತೇವೆ ಎಂದು ತಮ್ಮ ತಮ್ಮ ಮನದಾಳದ ಮಾತುಗಳಿಂದ ದೃಶ್ಯ ಮಾಧ್ಯಮದ ವರದಿಗಾರರಿಗೆ ಸ್ಫೂರ್ತಿ ತುಂಬಿದರು .ಹರಿಹರದಲ್ಲಿ ಪ್ರಪ್ರಥಮ ಬಾರಿಗೆ ದೃಶ್ಯ ಮಾಧ್ಯಮ ವರದಿಗಾರರ ಸಂಕಷ್ಟಕ್ಕೆ ಸ್ಪಂದಿಸಿ ತಮ್ಮ ಕೈಲಾದ ಅಗತ್ಯ ಸೇವೆಯನ್ನು ನೀಡಿದ ಸಿಎನ್ ಮಂಜುನಾಥ್ ಇವರಿಗೆ ನಮ್ಮ ಪತ್ರಿಕೆ ಮತ್ತು ದೃಶ್ಯ ಮಾಧ್ಯಮ ವರದಿಗಾರರ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ .
Be the first to comment