ಕ್ರೈಮ್-ಪೋಕಸ್
ಧಾರವಾಡ: ಬೆಳಗಾವಿ ನ್ಯೂಸ್ ಚಾನೆಲ್ ವರದಿಗಾರರು ತಮ್ಮ ಕಂಪನಿಯು ಅಕ್ರಮ ವೈವಾಟು ಮಾಡುತ್ತಿದೆ ಎಂದು ಬೆದರಿಕೆ ಹಾಕಿ ಹಣ ಬೇಡಿಕೆ ಇಟ್ಟಿದ ಇಬ್ಬರು ನಕಲಿ ಪತ್ರಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದು ವಿಚಾರಣೆಯನ್ನು ಧಾರವಾಡದಲ್ಲಿ ಮಾಡುತ್ತಿದ್ದಾರೆ.
ಬೇಲೂರು ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ಅನ್ವರ್ ಕೆ.ಜಮಾದಾರ ಹಾಗೂ ನಿಝಾಮ್ ಅಬ್ದುಲ್ ಸಾಬ್ ಪಟೇಲ್ ಬೆಳಗಾವಿ ಜಿಲ್ಲೆಯ ನ್ಯೂಸ್ ಚಾನೆಲ್ ವರದಿಗಾರರು ಎಂದು ಹೇಳಿಕೊಂಡಿದ್ದರು. ಈ ಮೂಲಕ ಬೇಲೂರು ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿರುವ ಬಿಎಂಎನ್ ಅಗ್ರೋ ಫುಡ್ಸ್ ಸಂಸ್ಥೆಗೆ ಭೇಟಿ ನೀಡಿ, 25 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು.
ಬಿಎಂಎನ್ ಆಗ್ರೋ ಫುಡ್ಸ್ ಸಂಸ್ಥೆ
ಈ ಸಂಬಂಧ ಬಿಎಂಎನ್ ಅಗ್ರೋ ಫುಡ್ಸ್ ಸಂಸ್ಥೆಯ ಮಾಲೀಕರು ಗರಗ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳು ಕೆಎ-22, ಸಿ-3636 ಸಂಖ್ಯೆಯ ಕಾರಿನಲ್ಲಿ ಅನುಮತಿಯಿಲ್ಲದೇ ಬೆಳಗಾವಿ ಧಾರವಾಡದವರೆಗೆ ಪ್ರಯಾಣ ಮಾಡಿದ್ದರು ಎನ್ನಲಾಗಿದೆ.
Be the first to comment