ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥಿಗೊಳಿಸಿ-ಯುವಕರಿಂದ ಒತ್ತಾಯ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ,ಪಟ್ಟಣದಲ್ಲಿ ಕೆಲವೆಡೆಗಳಲ್ಲಿ ಶುದ್ಧ ಕುಡಿಯೋ ನೀರಿನ ಘಟಕಗಳು ನಿವ೯ಹಣೆ ಕಾಣದೇ ಆರೇಳು ತಿಂಗಳಿಂದ ಸ್ಥಗಿತಗೊಂಡಿವೆ,ಅವುಗಳನ್ನು ಶೀಘ್ರವೇ ದುರಸ್ಥಿಗೊಳಿಸುವಂತೆ ಪಟ್ಟಣಪಂಚಾಯ್ತಿ ಅಧಿಕಾರಿಗಳಿಗೆ ಈ ಮೂಲಕ ಯುವಕರು ಒತ್ತಾಯಿಸಿದ್ದಾರೆ. ವಾಲ್ಮೀಕಿ ಯುವಮುಖಂಡ ಕೊಂಡಯ್ಯನವರ ರಾಘವೇಂದ್ರ ಮಾತನಾಡಿ ಪಟ್ಟಣದ ಶ್ರೀ ಪೇಟೆಬಸವೇಶ್ವರ ದೇವಸ್ತಾನದ ಹತ್ತಿರ ಇರೋ ಶುದ್ಧಕಡಿಯೋನೀರಿನ ಘಟಕವು ಪ್ರಾರಂಭಗೊಂಡು ಕೆಲವೇ ತಿಂಗಳುಗಳ ಕಾಲ ಕಾಯ೯ನಿವ೯ಹಿಸಿದೆ,ಪದೇ ಪದೇ ಕೆಟ್ಟುನಿಲ್ಲುತ್ತಿದೆ.ಅದು ಕಳೆದ ಐದಾರು ತಿಂಗಳಿಂದ ಸ್ಥಗಿತಗೊಂಡಿದೆ,ಜನರು ಅನಿವಾಯ೯ವಾಗಿ ಬಹುದೂರದಲ್ಲಿರುವ ನೀರಿನ ಘಟಕಕ್ಕೆ ತೆರಳಬೇಕಿದೆ.

ಕಾರಣ ಪಟ್ಟಣಪಂಚಾಯ್ತಿ ಅಧಿಕಾರಿಗಳು ಶೀಘ್ರವಾಗಿ ದುರಸ್ಥಿಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ. ಕನ್ನಡ ಸೇನೆ ಅಧ್ಯಕ್ಷ ಗುನ್ನಿರಾಘವೇಂದ್ರ ಮಾತನಾಡಿ ಪಟ್ಟಣದಲ್ಲಿ ಕೆಲ ಶುದ್ಧಕುಡಿಯೋ ನೀರಿನಘಟಕಗಳು ಪದೇ ಪದೇ ಕೆಟ್ಟು ನಿಲ್ಲುತ್ತಿದ್ದು,ಘಟಕಗಳಲ್ಲಿ ಕಳಪೆ ಮಿಷನ್ ಗಳನ್ನು ಅಳವಡಿಸಲಾಗಿದೆ ಭಾರೀ ಅವ್ಯವಹಾರ ಜರುಗಿದೆ ಎಂಬ ಆರೋಪ ಕೇಳುತ್ತಿದೆ.ಕೆಲ ಘಟಕಗಳು ಆರೇಳು ತಿಂಗಳಿಂದ ಸ್ಥಗಿತಗೊಂಡಿದ್ದು ಬೀಗ ಹಾಕಲಾಗಿದೆ,ಇದು ಕಳಪೆ ಮಿಷನ್ ಗಳನ್ನು ಅಳವಡಿಸಲಾಗಿದೆ ಎಂಬ ಆರೋಪಕ್ಕೆ ಪುಷ್ಠಿ ನೀಡುತ್ತಿದೆ.ಪ್ರಾರಂಭಗೊಂಡು ಕೆಲ ತಿಂಗಳಲ್ಲೇ ರಿಪೇರಿಗೆ ಬಂದಿವೆ.ಸ್ಥಗಿತಗೊಂಡು ಐದಾರುತಿಂಗಳು ಕಳೆದರೂ ದುರಸ್ಥಿಗೊಳಿಸಿಲ್ಲ,ನಿವ೯ಹಣೆಕೂಡ ಕಳಪೆಯಿಂದ ಕೂಡಿದೆ ಎಂದು ಅವರು ಆರೋಪಿಸಿದ್ದಾರೆ.ಪಪಂ ಅಧಿಕಾರಿ ಈವರೆಗೂ ಸ್ಥಳಕ್ಕೆ ಬಂದು ಪರಿಶೀಲಿಸಿಲ್ಲ ನಿಲ೯ಕ್ಷ್ಯತೋರಿದ್ದಾರೆ.ಇಲ್ಲಿ ಘಟಕ ಇದ್ದರೂ ಇಲ್ಲದಂತಾಗಿ ಬೀಗಹಾಕಲಾಗಿದ.ಕುಡಿಯೋ ನೀರಿಗಾಗಿ ಬಹುದೂರದ ಘಟಕಗಳಿಗೆ ತೆರಳಬೇಕಾಗಿದೆ.ವೃದ್ಧರಿಗೆ, ಮಹಿಳೆಯರಿಗೆ ತುಂಬಾ ತೊಂದರೆಯಾಗುತ್ತಿದೆ, ಶೀಘ್ರವೇ ಪಟ್ಟಣಪಂಚಾಯ್ತಿ ಅಧಿಕಾರಿಗಳು ಹಾಗು ಆಡಳಿತಾಧಿಕಾರಿಗಳು ಸ್ಥಗಿತಗೊಂಡಿರುವ ಘಟಕಗಳನ್ನು ಖುದ್ದು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಗುನ್ನಿ ರಾಘವೇಂದ್ರ ಈ ಮೂಲಕ ಒತ್ತಾಯಿಸಿದ್ದಾರೆ.ಕಾಲಚೆಟ್ಟಿ ನಾಗರಾಜ ಸೇರಿದಂತೆ ಇತರರು ಇದ್ದರು.

Be the first to comment

Leave a Reply

Your email address will not be published.


*