ಕರೋನಾ ವೈರಸ್ ಹಿನ್ನೆಲೆಯಲ್ಲಿ ರಂಜಾನ್ ಹಾಗೂ ಬಸವನ ಜಯಂತಿ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಿಬೇಕು.: ಕಿತ್ತೂರು ಸಿ. ಪಿ .ಐ ಶ್ರೀಕಾಂತ್ ತೋಟಗಿ ಮನವಿ.

ವರದಿ:- ಬಸವರಾಜ ಬೆಳಗಾವಿ

ಜೀಲ್ಲಾ ಸುದ್ದಿಗಳು

ಎಂಕೆ ಹುಬ್ಬಳ್ಳಿ ಉಪ ಪೊಲೀಸ್ ಠಾಣೆಯ ಆವರಣದಲ್ಲಿ ನಡೆದ ಶಾಂತಿ ಸಭೆಯ ನೇತೃತ್ವವನ್ನು ವಹಿಸಿ ಮಾತನಾಡಿದ ಕಿತ್ತೂರು ಸಿ ಪಿ ಐ ಶ್ರೀಕಾಂತ್ ತೋಟಗಿಯವರು ಮಾತನಾಡಿ

ಕರೋನಾ ವೈರಸ್ ನಿಂದ ಸಾಕಷ್ಟು ಅವಾಂತರವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಹಿತದೃಷ್ಟಿಯಿಂದ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈ ಗೊಂಡಿದ್ದು ಇರುತ್ತದೆ. ಆದ್ದರಿಂದ ಈ ಬಾರಿ ರಂಜಾನ್ ಹಾಗೂ ಬಸವನ ಜಯಂತಿ ಕಾರ್ಯಕ್ರಮಗಳನ್ನು ಸರ್ಕಾರದ ಆದೇಶದಂತೆ ಧ್ವನಿವರ್ಧಕಗಳನ್ನು ಬಳಸದೇ ತುಂಬಾನೇ ಸರಳವಾಗಿ ಆಚರಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಿತ್ತೂರು psi ಕುಮಾರ ಹಿತ್ತಲಮನಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಮುಗುಟ್ ಸಾಬ್, ಪುಟ್ಟು ಪಟ್ಟಣ ಶೆಟ್ಟಿ, ಸಮುದಾಯಗಳ ಹಿರಿಯರು, ಹಾಗೂ ಎಂಕೆ ಪೊಲೀಸ್ ಸಿಬ್ಬಂದಿಗಳಾದ ಕಾಜಗರ್, ಕಲ್ಲಪ್ಪ ಮುಗದಮ್ಮ ರವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*