Journalists are born not made ಎನ್ನುವ ಮಾತು ಇಂಗ್ಲೀಷ್ ಜಗತ್ತಿನಲ್ಲಿ ಚಾಲನೆಯಲ್ಲಿತ್ತು,ಒಬ್ಬ ವ್ಯಕ್ತಿಯನ್ನು ಪತ್ರಕರ್ತನನ್ನಾಗಿ ಸೃಷ್ಟಿಸಲಾಗದು ಆತ ಹುಟ್ಟುತ್ತಲೇ ಪತ್ರಕರ್ತ ಎಂದು! ಈ ಮಾತನ್ನು ಈ ಲೇಖನದ ಆರಂಭದಲ್ಲಿ ಏಕೆ ಸ್ಮರಿಸಿಕೊಳ್ಳಲಾಯಿತು ಎಂದರೆ ಇತ್ತೀಚೆಗೆ ಪತ್ರ ಕತೃತ್ವ ಕೆಲಸ ಒಂದು ಉದ್ಯಮವಾಗಿ ಮಾರ್ಪಟ್ಟು ಪತ್ರಿಕೋದ್ಯಮವಾಗಿ ಬದಲಾಗಿ ಪತ್ರಕರ್ತರನ್ನು ಸೃಷ್ಟಿಸುವ ವಿದ್ಯಾಲಯಗಳು ತೆರೆದುಕೊಂಡವು,ಮತ್ತು ಪತ್ರಕರ್ತನನ್ನು ಸೃಷ್ಟಿಸುವ ಕಾರ್ಯಗಳು ಪ್ರಾರಂಭಗೊಂಡವು.ಯಾವಾಗ ಪತ್ರಕರ್ತ ಸೃಷ್ಟಿಗೊಳ್ಳತೊಡದನೋ ಆಗ ಸ್ಪರ್ಧೆ ಏರ್ಪಟ್ಟಿತು.ಸದ್ಯ ಈ ಉದ್ಯಮವೀಗ ಇತೀಚಿಗೆ,ಪೈಪೋಟಿಯ,ಕಾಲೆಳೆಯುವಿಕೆಯ ಕ್ಷೇತ್ರವಾಗಿ ಬದಲಾಗಿದೆ.
ಈ ಆಧುನಿಕ ಪತ್ರಿಕೋದ್ಯಮ ದಯೆ,ಧರ್ಮ ಮಾನವೀಯತೆಗಳನ್ನು ಮರೆತಿರುವಂತೆ ಕಾಣಿಸುತ್ತಿದೆ.ಇದನ್ನೆಲ್ಲಾ ಏಕೆ ಬರೆಯಲಾಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮುನ್ನ ಪತ್ರಿಕೋದ್ಯಮ ಎಂದರೆ ಏನು?ಪತ್ರಿಕಾ ಧರ್ಮ ಎಂದರೆ ಏನು ಎನ್ನುವುದನ್ನು ಸಂಕ್ಷಿಪ್ತವಾಗಿ ವಿವರಿಸಬೇಕಾಗುತ್ತದೆ.
ನಿಮಗೆ ಗೊತ್ತಿರುವಂತೆ ಪತ್ರಿಕೋದ್ಯಮವನ್ನು ಸಂವಿಧಾನದ ನಾಲ್ಕನೆಯ ಅಂಗ ಎನ್ನಲಾಗುತ್ತದೆ;ಅದು ನಿಜವೂ ಕೂಡಾ.ಆದರೆ ಸಂವಿಧಾನದಲ್ಲಿ ಆ ಕುರಿತು ಅಧಿಕೃತ ಟಿಪ್ಪಣಿಗಳಿಲ್ಲ.ಸಂವಿಧಾನದ 19(1)ರ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಧಿಯಂತೆ ಪತ್ರಿಕೋದ್ಯಮ ಕಾರ್ಯನಿರ್ವಹಿಸುತ್ತಿದೆ,ಆ ಸ್ವಾತಂತ್ರ್ಯ ಭಾರತದ ಎಲ್ಲಾ ಪ್ರಜೆಗಳಿಗೂ ಇದೆ.ಈ ವಿಧಿ ಸಮರ್ಪಕವಾಗಿ ಬಳಕೆಯಾಗುತ್ತಿರುವುದು ಪತ್ರಿಕಾರಂಗದ ಮುಖಾಂತರ.ಆ ಮೂಲಕ ಜನರಿಗೆ ನ್ಯಾಯ ಒದಗಿಸುತ್ತಿದೆ.ಇಲ್ಲೊಂದು ಮುಖ್ಯವಾದ ಅಂಶವಿದೆ:ಒಬ್ಬ ಪತ್ರಕರ್ತ ಕೆಟ್ಟ ದೃಷ್ಟಿಕೋನದವನಾದರೂ ಮತ್ತು ಉತ್ತಮ ದೃಷ್ಟಿಕೋನದವನಾದರೂ ಹಾನಿಯಾಗುವುದು ಸಮಾಜಕ್ಕೆ,ಪೂರಕವಾಗಿ ಪ್ರಜೆಗಳಿಗೆ!ಈ ಅಪಾಯದ ವಿದ್ಯಾಮಾನಗಳನ್ನು ನಾವೀಗ ನೋಡುತ್ತಿದ್ದೇವೆ.
ಪತ್ರಿಕಾಧರ್ಮದ ನಿಯಮಗಳನ್ನು ಮೀರಿರುವ ಕೆಲವು ಮಾಧ್ಯಮಗಳು ಆಳರಸರ ಸ್ವತ್ತೆಂಬಂತೆ ವರ್ತಿಸುತ್ತಿವೆ;ಒಂದೊಂದು ಚಾನೆಲ್,ಒಂದೊಂದು ಪತ್ರಿಕೆಯೂ ರಾಜಕೀಯ ಪಕ್ಷಗಳ ಮುಖವಾಣಿಗಳಂತೆ ಬದಲಾಗಿವೆ,ಈ ಕೃತ್ಯದ ಹಿಂದೆ ಇರುವುದು ಪತ್ರಿಕಾ ಉದ್ಯಮ ಎನ್ನುವ ಸ್ವಾರ್ಥ,ಸೃಷ್ಟಿಸಲಾದ ಪತ್ರಕರ್ತರ ಲಾಲಸೆ,ವೈಯುಕ್ತಿಕ ಹಿತಾಸಕ್ತಿ ಅಡಗಿದೆ.ಈ ಹಿನ್ನೆಲೆಯಲ್ಲಿ ನೋಡಿದಾಗ ನಿಜಕ್ಕೂ ಪತ್ರಿಕಾರಂಗ ನಾಶವಾಗಿ ಹೋಗಿದೆ ಎನ್ನಿಸುತ್ತಿದೆ.
ಪತ್ರಿಕೆಯ ಮಾಲೀಕರು,ಮತ್ತದರ ಮುಖ್ಯಸ್ಥರ ವೈಯುಕ್ತಿಕ ಲೋಭಗಳೇನೆ ಇರಲಿ ವರದಿಗಾರನ ಬದುಕಂತೂ ಹೇಯವಾಗಿದೆ.ಮಾಧ್ಯಮ ಬದಲಾದ ಕಾಲಮಾನಕ್ಕೆ ತಕ್ಕಂತೆ ಕೇವಲ ಮುದ್ರಿತ,ಶ್ರವಣ,ದೃಶ್ಯ ಮಾಧ್ಯಮವಾಗಿ ಉಳಿದಿಲ್ಲ.ಈಗ ಎಲೆಕ್ಟಾçನಿಕ್ ಮತ್ತು ವೆಬ್ ಪೋರ್ಟಲ್‌ಗಳು ವ್ಯಾಪಕ ಪ್ರಚಾರವನ್ನು ಪಡೆಯುತ್ತಿವೆ,ಘಟನೆ ನಡೆದ ಕೇವಲ ಒಂದು ನಿಮಿಷದಲ್ಲಿ ಅದು ಜಗತ್ತಿನಾಧ್ಯಂತ ಪ್ರಸಾರವಾಗುತ್ತದೆ ,ಕಾರಣ:ಇದು ಮೊಬೈಲ್ ಮತ್ತು ಲಾಪ್‌ಟಾಪ್ ಯುಗ!ಈಗಾಗಿ ವರದಿಗಾರನ ಪಾಡು ಭೀಕರವಾಗಿದೆ,ಆತ ತನ್ನ ಸರ್ವೇಂದ್ರೀಯಗಳನ್ನು ಸದಾ ತೆರೆದಿಟ್ಟುಕೊಳ್ಳಬೇಕಾದ ಸ್ಥಿತಿ ಇದೆ.
ಜಗತ್ತು ದುಷ್ಟ ಚೀನಾ ಸೃಷ್ಟಿಸಿದ ಮಾಹಾ ಮಾರಿ ಕರೋನಾ ವೈರಾಣುವಿನಿಂದ ನಲುಗುತ್ತಿದೆ,ಲಕ್ಷಾಂತರ ಸಾವುಗಳ ಜತೆಗೆ ಕೋಟಿಗಳ ಲೆಖ್ಖದಲ್ಲಿ ಸೋಂಕಿತರಿದ್ದಾರೆ.ಈ ಸಾವು ಮತ್ತು ಸೋಂಕಿತರ ನಡುವೆ ನಲುಗುತ್ತಿರುವವರು ಆರೋಗ್ಯ ಸಿಬ್ಬಂದಿ,ಪೋಲಿಸರು ಮತ್ತು ಪತ್ರಕರ್ತರು.ಆರೋಗ್ಯ ಸಿಬ್ಬಂದಿ ಮತ್ತು ಪೋಲಿಸ್ ಸಿಬ್ಬಂದಿಗಳಿಗೆ ಉದ್ಯೋಗ ಭದ್ರತೆ ಮತ್ತು ಸರ್ಕಾರಿ ಸವಲತ್ತುಗಳಿವೆ,ಪತ್ರಕರ್ತರು ಮತ್ತು ವರದಿಗಾರರಿಗೇನಿದೆ.?ಸರ್ಕಾರ ಪತ್ರಿಕಾರಂಗವನ್ನು ಗೌರವಿಸುತ್ತಿರುವುದು ನಿಜವಾದರೂ ಅವರಿಗೆ ಯಾವುದೇ ಭದ್ರತೆಗಳಿಲ್ಲ;
ಆರೋಗ್ಯ,ಜೀವ,ಜೀವನವನ್ನು ಯಾವತ್ತಿಗೂ ಪಣವಾಗಿಟ್ಟುಕೊಂಡು ಹೋರಾಡಬೇಕಿರುವ ಸ್ಥಿತಿ ಇದೆ!ದೊಡ್ಡ ಮಟ್ಟದ ಚಾನೆಲ್ಲುಗಳು ಮತ್ತು ಹೆಸರಾಂತ ಪತ್ರಿಕೆಗಳ ಹೊರತು ದುಭಾರಿ ಸಂಭಾವನೆ ಪಡೆಯುವ ಒಬ್ಬೇ ಒಬ್ಬ ಪತ್ರಕರ್ತನಿಲ್ಲ.ಬದುಕು ಯಾವತ್ತಿಗೂ ಅರೆಹೊಟ್ಟೆ!
ಈಗ ಅಸಲು ವಿಷಯಕ್ಕೆ ಬರೋಣ;ಯಾರೋ ಒಬ್ಬ ದಾನಿ ಸಂಕಷ್ಟದಲ್ಲಿರುವ ಹತ್ತು ಜನರನ್ನು(ಉದಾಹರಣೆಗೆ)ಕರೆದು ಏನೋ ನೆರವು ನೀಡಲಿದ್ದಾನೆ ಎಂದು ಭಾವಿಸಿ.ನಿಮ್ಮ ಕಲ್ಪನೆಯಲ್ಲಿ ಹಸಿದ ಹತ್ತು ಜನರ ತಂಡ ಮತ್ತು ದಾನಿಯ ನೆರವು ಬರಲಿ.ಈ ಹತ್ತು ಜನಗಳ ಪೈಕಿ ಎಂಟು ಜನ ಸಂಘಟಿತರಾಗಿ ಜತೆಗಿರುವ ಇನ್ನೂ ಎರಡು ಜನರನ್ನು ದಾನಿಗಳು ನೀಡಿದ ದಾನ ನಿಮಗೆ ಲಭಿಸುವುದಿಲ್ಲ,ಏಕೆಂದರೆ ನೀವು ನಮ್ಮ ತಂಡದಲ್ಲಿ ಇಲ್ಲಾ ಎಂದು ಆಚೆ ಕಳುಹಿಸಿದರೆ,(ಇಲ್ಲಿ ಇನ್ನೊಂದು ವಿಷಯ ದೃಢೀಕರಿಸುತ್ತೇನೆ;ಈ ಹತ್ತೂ ಜನ ಒಂದೇ ವೃತ್ತಿಗೆ ಸಂಬಂಧಿಸಿದವರು)ಅವರ ಮನಸ್ಥಿತಿ ಹೇಗಾಗಬೇಕು?ತುತ್ತು ಅನ್ನವನ್ನೂ ಹಸಿದವನು ಬಂದಾಗ ಹಂಚಿಕೊಂಡು ತಿನ್ನು ಎಂದು ಬೋಧಿಸಿದ ಭವ್ಯ ಪರಂಪರೆ ಇರುವ ದೇಶ ನಮ್ಮದು;ಈ ಕಡು ಲೋಭಿಗಳು ಹೀಗೆ ವರ್ತಿಸಿರುವುದನ್ನು ನೀವು ಏನೆಂದು ಕರೆಯುತ್ತೀರಿ?ನಾನಂತೂ ಇವರನ್ನು ಹೃದಯಹೀನರು,ಪತ್ರಿಕಾಧರ್ಮದ ಓನಾಮವೂ ತಿಳಿಯದ ಕೇವಲ ರೋಲ್‌ಕಾಲಿಗಾಗಿ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ಕ್ರಿಮಿನಲ್ಸ್ಗಳೆಂದು ಕರೆಯುತ್ತೇನೆ!ಹೌದು,ಈ ಪ್ಯಾರಾಗ್ರಾಫ್‌ನಲ್ಲಿ ನನ್ನ ಉದಾಹರಣೆ ಮೀರಿ ಪತ್ರಿಕೋದ್ಯಮದ ಪದ ಬಂತು,ಈ ಘಟನೆ ನಡೆದಿದ್ದು ರಾಜ್ಯದ ಯಾವುದೋ ಜಿಲ್ಲೆಯ ಪತ್ರಕರ್ತರ ಸಂಘ ಎನ್ನುವ ದುಷ್ಟಕೂಟದ ಮುಖಂಡರಿಂದ ನಡೆದ ಮತಿಹೀನ ಕೃತ್ಯವಿದು.
ಅವರ ಪ್ರಕಾರ ಪತ್ರಕರ್ತರ ಸಂಘದಲ್ಲಿರುವವರು ಮಾತ್ರವೇ ಪತ್ರಕರ್ತರಂತೆ!ಈ ಮೂಢರಿಗೆ ಅರಿವಾಗಲಿ ಎನ್ನುವ ಕಾರಣಕ್ಕೆ ಮೇಲಿನ ಪ್ಯಾರಾಗ್ರಾಫ್‌ಗಳನ್ನು ಬರೆದೆ;
ಪತ್ರಕರ್ತರನ್ನು ಸೃಷ್ಟಿಸಲಾಗದು,ಆತ ಹುಟ್ಟುತ್ತಲೇ ಪತ್ರಕರ್ತ ಎಂದು!
ವಿದ್ಯಾಲಯಗಳ ಬೋಧನೆ ಪ್ರಾಕ್ಟಿಕಲ್ ಪತ್ರಿಕೋದ್ಯಮದಲ್ಲಿ ಉಪಯೋಗಕ್ಕೆ ಬರದು,ಅಸಲು ಆ ಕೋರ್ಸು ಆರಂಭವಾದದ್ದೇ ಇತ್ತೀಚೆಗೆ,ಇರಲಿ ಬಿಡಿ.
ಸದ್ಯ ಕರೋನಾ ಸಂಕಷ್ಟದಲ್ಲಿ ಭಾರತೀಯ ಪ್ರಜೆ ಅನುಭವಿಸುತ್ತಿರುವ ಒತ್ತಡದ ಹತ್ತರಷ್ಟು ಹೆಚ್ಚು ಪತ್ರಕರ್ತರು ಅನುಭವಿಸುತ್ತಿದ್ದಾರೆ.ಜನಜೀವನ ಸ್ತಗಿತವಾಗಿರುವುದರ ಹಿನ್ನೆಲೆಯಲ್ಲಿ ಏನನ್ನೂ ಬರೆಯಲಿಕ್ಕೆ ಸಾಧ್ಯವಾಗುತ್ತಿಲ್ಲ.ಅವರಿಗೆ ಇರುವ ಆದಾಯದ ಮೂಲಗಳೂ ನಿಂತು ಹೋಗಿವೆ.ಈ ಪರಿಸ್ಥಿತಿಯನ್ನು ಅರಿತುಕೊಂಡಿರುವ ಕೆಲ ದಾನಿಗಳು ಪತ್ರಕರ್ತರ ನೆರವಿಗೆ ಧಾವಿಸಿದ್ದಾರೆ.
ದಾನಿಗಳಿಗೇನು ಗೊತ್ತು?ಪತ್ರಕರ್ತರ ಸಂಘ ಎನ್ನುವ ವಿಷಕೂಪದ ಮರ್ಮ?
ಅವರು ಪೆನ್ನನ್ನು ಮತ್ತು ಪತ್ರಕರ್ತರು ಬರೆಯುವ ಲೇಖನ,ವರದಿ,ಸುದ್ದಿ ಇತ್ಯಾದಿಗಳನ್ನು ಗುರಿತಿಸಿರುತ್ತಾರೆಯೇ ಹೊರತು ಸಂಘ,ಅದಕ್ಕೊಬ್ಬ ಮೂಢ ಅಧ್ಯಕ್ಷ,ಆತನ ಹೃದಯಹೀನ ನಡೆಯನ್ನು ಹೇಗೆ ಗುರುತಿಸಿರುತ್ತಾರೆ?
ನಡೆದಿದ್ದು ಇಷ್ಟು:ಕರೋನಾ ಸಂದಿಗ್ಧತೆಯ ಈ ಸಂಕೀರ್ಣಕಾಲದಲ್ಲಿ ಜಿಲ್ಲೆಯ ಕೆಲ ಹೃದಯವಂತ ದಾನಿಗಳು ಇಂತಿಷ್ಟು ಅಕ್ಕಿ,ಗೋಧಿ ಮತ್ತು ಇತರೆ ದಿನಸಿ ಸಾಮಾನುಗಳನ್ನು ಹಂಚಿರಿ ಎಂದು ಪತ್ರಕರ್ತರ ತಂಡ ಮುಖ್ಯಸ್ಥನೊಬ್ಬನಿಗೆ ನೀಡಿದ್ದಾರೆ.ಆತ ಪ್ರಿಂಟ್ ಮೀಡಿಯಾ,ಯೂಟ್ಯೂಬ್ ಚಾನೆಲ್ ಮತ್ತು ವೆಬ್ ಪೋರ್ಟಲ್‌ಗಳನ್ನು ವಿಭಾಗಿಸಿ ಪತ್ರಕರ್ತರ ಸಂಘದ ವ್ಯಾಪ್ತಿಗೆ ನೀವು ಬರುವುದಿಲ್ಲ ಎಂದು ಅವಮಾನಿಸಿದ್ದಾನೆ,ಜತೆಗೆ ಬಂದವರಿಗೆ ದಾನದ ಸರಕುಗಳನ್ನು ನೀಡಿ ಆತನ ಪಕ್ಕವೇ ಇರುವ ವ್ಯಕ್ತಿಗೆ ನಿರಾಕರಿಸಿದ್ದಾನೆ.ಆ ಮೂಲಕ ಪತ್ರಕರ್ತರ ವರ್ಗೀಕರಣಕ್ಕೆ ಮುಂದಾಗಿದ್ದಾನೆ.ಇದು ಎಷ್ಟೊ ಸರಿ ?
ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಿರುವಂತೆ ಪತ್ರಿಕಾರಂಗ ಎನ್ನುವುದು ಹಲವಾರು ಕಾರಣಕ್ಕೆ ಹೊಟ್ಟೆಕಿಚ್ಚಿನ ಕ್ಷೇತ್ರವಾಗಿ ಬಲಾಗಿದೆ.ಒಂದೇ ವೃತ್ತಿಯವರಾದರೂ ಪರಸ್ಪರ ಕಾಲು ಎಳೆಯುವಿಕೆ,ತುಳಿಯುವಿಕೆ,ಎತ್ತಿಕಟ್ಟುವಿಕೆಗೆ ಮುಂದಾಗಿದ್ದಾರೆ.ಈ ಕಾರಣಕ್ಕೆ ಪತ್ರಕರ್ತರ ಮಾನ ಪ್ರಾಣಗಳಿಗೆ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಅಂದಹಾಗೆ ರಾಜ್ಯಾದ್ಯಂತ ಹಲವಾರು ಪತ್ರಕರ್ತರ ಸಂಘಗಳಿವೆ,ಯಾವುಗಳು ಅಧಿಕೃತ.?
ಅದರಿಂದ ಪತ್ರಕರ್ತರಿಗಾಗುವ ಪ್ರಯೋಜನೆಗಳೇನು.?ಇತ್ತೀಚೆಗೆ ಮೊನ್ನೆ ಪೇಸ್‌ಬುಕ್ ಇನ್ಸ್ಟಾಲ್ ಮಾಡುವಾಗ ನನಗೊಂದು ಪೋಸ್ಟ್ ಕಾಣಿಸಿತು;ಅದರಲ್ಲಿ ಹೀಗೆ ಬರೆದಿತ್ತು:ಪತ್ರಕರ್ತರ ಸಂಘ ನೋಂದಣಿ ಮಾಡುತ್ತಿದ್ದೇವೆ,ನೋಂದಣಿಗಾಗಿ ಸಂಪರ್ಕಿಸಿ ಎಂದು!
ನಾನು ಕಾಲ್ ಮಾಡಿದೆ,ಮೂರು ಸಾವಿರ ಹಣದ ಪ್ರಸ್ತಾಪ ಮಾಡಿದರು!
ಆರು ಕೋಟಿ ಇರುವ ಈ ರಾಜ್ಯದಲ್ಲಿ ಎರಡು ಲಕ್ಷ ಜನ ಹೆಸರು ನೋದಾಯಿಸಿಕೊಂಡರೆ.?ಲೆಕ್ಕಾಚಾರ ನೀವೇ ಮಾಡಿ!
ಉಳಿದಂತೆ ರಾಜ್ಯದಲ್ಲಿ ಆರ್‌ಎನ್‌ಐ ನೋಂದಣಿ ಪಡೆದ ಎಷ್ಟು ಪತ್ರಿಕೆಗಳು ಕ್ರಮಬದ್ಧವಾಗಿ ಪ್ರಕಟಿತಗೊಳ್ಳುತ್ತಿವೆ.?ಎಷ್ಟು ಪತ್ರಿಕೆಗಳು ವಾರ್ತಾ ಇಲಾಖೆಯ ಮಾಧ್ಯಮ ಮಾನ್ಯತಾ ಪಟ್ಟಿಗೆ ಸೇರಿವೆ.?
ಎಷ್ಟು ಜನ ಪತ್ರಕರ್ತರು ಸರ್ಕಾರದ ಮಾಧ್ಯಮ ಮಾನ್ಯತಾ ಕಾರ್ಡನ್ನು ಹೊಂದಿದ್ದಾರೆ.?
ಇದರಲ್ಲಿ ಎಷ್ಟು ಜನ ಬರೆಯುತ್ತಾರೆ,ಮತ್ತು ಎಷ್ಟು ಜನ ಕ್ರಮಬದ್ಧವಾಗಿ ಸುದ್ಧಿ ಬಿತ್ತರಿಸುತ್ತಾರೆ.?
ಈ ಮೇಲಿನ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು.?
ಸ್ವಾಮಿ ಸಂಘ ಕಟ್ಟಿದ ಮಾತ್ರಕ್ಕೆ ನೀವು ಪತ್ರಕರ್ತರಲ್ಲ,ಸಂಘದ ಹೊರಗಿರುವವರು ನಕಲಿ ಪತ್ರಕರ್ತರು ಅಲ್ಲಾ .ಮುಖ್ಯವಾಗಿ ಸಕ್ರಿಯತೆ ಇರಬೇಕು;ಬರೆಯುತ್ತಿರಬೇಕು.
ಇನ್ನಾದರೂ ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಕೆಲವು ಸದಸ್ಯರು ದೈವಾಂಶಸಂಭೂತರು ಮಾನವೀಯತೆಯನ್ನು ಬೆಳಸಿಕೊಳ್ಳಿ.
ಪೆನ್ನನ್ನು ನಂಬಿದವರ ಕುಲದ ಹೆಸರು ಪತ್ರಕರ್ತರು ಅಂತಾರೆ!
Be the first to comment