ರಾಜನಕೊಳೂರ ತಾಂಡಾದಲ್ಲಿ ಅಕ್ರಮ ಕಳ್ಳಭಟ್ಟಿ ಅಡ್ಡೆ ಮೇಲೆ ಅಬಕಾರಿ ಇಲಾಖೆ ದಾಳಿ

ವರದಿ:ರಾಘವೇಂದ್ರ ಮಾಸ್ತರ ಸುರಪುರ

 ಕ್ರೈಮ್-ಪೋಕಸ್

ಅಂಬಿಗ ನ್ಯೂಸ್ ಸುರಪುರ ಮಾನ್ಯ ಅಬಕಾರಿ ಜಂಟಿ ಆಯುಕ್ತರು ಕಲಬುರ್ಗಿ ವಿಭಾಗ ರವರ ಆದೇಶದನ್ವಯ ಹಾಗೂ ಅಬಕಾರಿ ಉಪ ಆಯುಕ್ತರು ಯಾದಗಿರಿ ಜಿಲ್ಲೆರವರ ನಿರ್ದೇಶನದಲ್ಲಿ ಇಂದು ದಿನಾಂಕ 23-04-2020 ರಂದು ಸುರಪುರ ತಾಲ್ಲೂಕಿನ ರಾಜನ ಕೊಳೂರು ತಾಂಡಾದಲ್ಲಿ ತಾರಾಬಾಯಿ ಗಂ. ಶಂಕರ್ ಚವ್ಹಾಣ ಎಂಬುವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 02ಲೀಟರ್ ಕಳಭಟ್ಟಿ ಸರಾಯಿ ಹಾಗೂ 20ಲೀಟರ್ ಬೆಲ್ಲದ ಕೊಳೆಯನ್ನು ಜಪ್ತಿಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದೆ. ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ಶ್ರೀಶೈಲ್ ಒಡೆಯರ್, ಅಬಕಾರಿ ಉಪ ನಿರೀಕ್ಷಕರುಗಳಾದ ಶ್ರೀ ಸೋಮಪ್ಪ ನಾಯಕ, ಕು. ಪೂಜಾ ಖರ್ಗೆ, ಸಿಬ್ಬಂದಿಗಳಾದ ಲಕ್ಷ್ಮಣ, ಜಂಬುನಾಥ, ಮಹೇಂದ್ರ ಕುಮಾರ, ಸಂದೀಪ ನಾಯಕ, ಸಂಪತ್ ಕುಮಾರ, ಲಾಲಸಾಹೇಬ,ಯಮನಪ್ಪ, ಮರೆಪ್ಪ ತೇಲ್ಕರ್, ಪಿಡಿಒ ಬಾಲಕೃಷ್ಣ ಎ. ಶೆಳ್ಳಗಿ ಮತ್ತು ಪಂಪ್ ಆಪರೇಟರ್ ವೆಂಕಟೇಶ್ ರಾಠೋಡ್ ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*