ಸುರಪುರ ನಗರದ ವಾರ್ಡ್ ಗಳು ಕಂಟೇನ್ಮೆಂಟ್ ಜೋನ್ ಘೋಷಣೆ:ಪೌರಾಯುಕ್ತ ಜೀವನ ಕಟ್ಟಿಮನಿ

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್ ಸುರಪುರ

ಇಡೀ ದೇಶದಲ್ಲಿ ಕೊರೊನಾ ವೈರಸ್ ತಾಂಡವಾಡುತ್ತಿದ್ದು ಇದನ್ನು ತಡೆಗಟ್ಟಲು ಮೇ 3 ರವರೆಗೆ ಲಾಕ್ ಡೌನ್ ಜಾರಿಯಲ್ಲಿದ್ದು ನಮ್ಮ ಯಾದಗಿರಿ ಜಿಲ್ಲೆಯಲ್ಲಿಯೇ ಇದುವರೆಗೂ ಸೊಂಕಿತರ ಪ್ರಕರಣ ಕಂಡು ಬಂದಿಲ್ಲ ಪಕ್ಕದ ಕಲಬುರಗಿ ಜಿಲ್ಲೆಯಲ್ಲಿ ಕೊರಾನಾದಿಂದ 3 ಸಾವು ಹಾಗೂ ಸೊಂಕಿತರ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹಾಗೂ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳು ಸುರಪುರ ನಗರಸಭೆಯ 31 ವಾರ್ಡ್ ಗಳನ್ನು ಕಂಟೇನ್ಮೆಂಟ್ ಜೋನ್ (ಧಾರಕ ಪ್ರದೇಶ)ಎಂದು ಘೋಷಿಸಿದ್ದರು.
ಅವರ ಆದೇಶದ ಮೇರೆಗೆ ಈ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೌರಾಯುಕ್ತ ಜೀವನಕುಮಾರ ಕಟ್ಟೀಮನಿ ತಿಳಿಸಿದರು.

ಗ್ರಾಹಕರ ಮನೆಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ವಾಹನಕ್ಕೆ ಚಾಲನೆ ನೀಡಿ ,ಪ್ರಾಯೋಗಿಕವಾಗಿ ಪ್ರಥಮ ಹಂತವಾಗಿ ಕುಂಬಾರಪೇಟ , ವೆಂಕಾಟಪುರ,ಸತ್ಯಂಪೇಟ,ದೀವಳಗುಡ್ಡ,ಧೂಳಪೇಟ,ಮಹಿಬೂಬ ಸುಭಾನಿ ವಾರ್ಡ್ ಗಳಲ್ಲಿ ಇಂದಿನಿಂದ ಈ ಪ್ರದೇಶಗಳಲ್ಲಿ ಲಾಕ್ ಡೌನ್ ಕಠಿಣ ಕ್ರಮ ಕೈಗೊಳ್ಳಲಾಗಿದ್ದು ನಂತರ ಹಂತ ಹಂತವಾಗಿ ಉಳಿದ ವಾರ್ಡ್ ಗಳಲ್ಲಿ ಕಂಟೇನ್ಮೆಂಟ್ ಆರಂಭಿಸಲಾಗುವುದು ಎಂದರು.

ಅಗತ್ಯ ವಸ್ತುಗಳನ್ನು ನಿಮ್ಮ ಮನೆಗೆ ತಲುಪಿಸಲು ಸ್ವಯಂ ಸೇವಕರಾದ ಶಂಕರ-9886176193,
ಪ್ರಶಾಂತ-9972782227 ಬಲಭೀಮ-9731909670 ರಮೇಶ 9535106343 ಹಾಗೂ ಕಛೇರಿಯ ಸಿಬ್ಬಂದಿಗಳಾದ
ಅನಂತ 9036541509 ಬುಕಾರಿ 9448765251 ಬಾಬು 9449725766 ಈ ನಂ.ಗಳಿಗೆ ಪೋನ್ ಕರೆ ಮಾಡಿ 100 ರೂ.ತರಕಾರಿ 500 ರೂ.ಕಿರಾಣಿ ಸಾಮಾನುಗಳವರೆಗೆ ಬೆಳ್ಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಬಂದು ತಲುಪಿಸಲು 4 ವಾಹನ ಗಳಿದ್ದು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ . ಇವರು ನಿಮ್ಮ ಮನೆಯವರೆಗೆ ಬಂದಾಗ ಗ್ರಾಹಕರು ಸಹಕರಿಸಬೇಕೆಂದು ಮನವಿ ಮಾಡಿದರು.

ಕಂಟೇನ್ಮೇಂಟ್ ಜೋನ್ ಗಳ ಪ್ರದೇಶಗಳಿಗೆ ಹೋಗುವ ರಸ್ತೆಗಳಿಗೆ ಜಾಲಿ ಮುಳ್ಳು ಹಚ್ಚಿ ಬಂದ್ ಮಾಡಲಾಗಿದೆ. ಅನಗತ್ಯವಾಗಿ ಓಡಾಡುವಂತಿಲ್ಲ ಸದಾ ಪೊಲೀಸರ ಕಣ್ಣಾಗಾವಲು ಇರುತ್ತದೆ.ಕೇವಲ ತುರ್ತು ಆರೋಗ್ಯ ಸೇವೆಗೆ ಮಾತ್ರ ಅವಕಾಶವಿರುತ್ತದೆ.
ಕೊರೊನಾ ವೈರಸ್ ಹೋಗಲಾಡಿಸಲು ಉಳಿದಿರುವ ಮಾರ್ಗವೆಂದರೆ ಮನೆಯಿಂದ ಹೊರಗಡೆ ತಾವು ಬರದೇ ಮನೆಯಲ್ಲಿದ್ದವರನ್ನು ಹೊರಗಡೆ ಕಳುಹಿಸಬಾರದೆಂದು ಕಳಕಳಿಯಿಂದ ಮನವಿ ಮಾಡಿದರು.
ಒಂದು ವೇಳೆ
ಆದೇಶ ಉಲ್ಲಂಘನೆ ಮಾಡಿ ಯಾವುದಾರೂ ನೆಪವೊಡ್ಡಿ ಹೊರಗಡೆ ಬಂದರೆ ಪ್ರಕರಣ ದಾಖಲಾಗುತ್ತದೆ ಎಂದು ತಿಳಿಸಿದರು.

Be the first to comment

Leave a Reply

Your email address will not be published.


*