ಮುದ್ದೇಬಿಹಾಳ:
ಮುದ್ದೇಬಿಹಾಳ ಪಟ್ಟಣದ ಮಾರುತಿ ನಗರದಲ್ಲಿನ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ವಸತಿ ಗೃಹವನ್ನು ಕೊರೊನಾ ರೋಗಿಗಳ ಕ್ವಾರೆಂಟೈನ್ ಕೇಂದ್ರವನ್ನಾಗಿಸಲು ಹೊರಟ ತಾಲೂಕಾ ಆಡಳಿತಕ್ಕೆ ಅಲ್ಲಿನ ನಿವಾಸಿಗರು ವಿರೋಧಿಸಿ ತಾತ್ಕಾಲಿಕ ಕ್ವಾರೆಂಟೈನ್ ಕೇಂದ್ರವನ್ನು ಪಟ್ಟಣದಿಂದ ತಾಲೂಕಿನ ಜಮ್ಮಲದಿನ್ನಿ ಗ್ರಾಮಕ್ಕೆ ಸಿಫ್ಟ್ ಆಗುವಂತೆ ಮಾಡಿದ್ದಾರೆ.
ಶನಿವಾರ ಬೆಳಿಗ್ಗೆ ತಾಲೂಕಿನ ಕೋವಿಡ್-19 ನಿಯಂತ್ರಣಾ ತಂಡದ ಅಧಿಕಾರಿಗಳು ವಸತಿ ಗೃಹವನ್ನು ವಿಕ್ಷಿಸಿ ಇದೇ ವಸತಿ ಗೃಹವನ್ನು ತಾತ್ಕಾಲಿಕ ಕ್ವಾರೆಂಟೈನ್ ಕೇಂದ್ರವನ್ನಾಗಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ವರದಿ ಸಲ್ಲಿಸಲು ನಿರ್ಧರಿಸಿದ್ದರು. ವಸತಿ ಗೃಹವನ್ನು ವಿಕ್ಷಣೆ ಮಾಡೆ ಹೊರ ಬರುತ್ತಿದ್ದಂತೆ ನಗರದ ನಿವಾಸಿಗರು ಅಧಿಕಾರಿಗಳನ್ನು ತಡೆದು ಮಾರುತಿ ನಗರದಲ್ಲಿ ಜನರು ಕೊರೊನಾದಿಂದ ಅತೀ ಹೆಚ್ಚು ಎಚ್ಚರಿಕೆಯಿಂದ ಇದ್ದು ಇದರ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಿದ್ದಾರೆ. ಆದರೆ ಈಗ ಇಲ್ಲಿನ ವಸತಿ ಗೃಹದಲ್ಲಿ ಕೊರೊನಾ ರೋಗಿಗಳ ಕ್ವಾರೆಂಟೈನ್ ಕೇಂದ್ರ ಮಾಡುವುದರಿಂದ ನಿವಾಸಿಗರಲ್ಲಿ ಆತಂಕ ಹೆಚ್ಚಾಗುತ್ತದೆ. ಅಲ್ಲದೇ ಈ ಪ್ರದೇಶದಲ್ಲಿ ಬಹುತೇಕರು ನಿವೃತ್ತಗೊಂಡ ಅಧಿಕಾರಿಗಳು ಹಾಗೂ ಚಿಕ್ಕ ಮಕ್ಕಳ ಸಂಖ್ಯೆ ಹೆಚ್ಚಾಗಿ. ಕೊರೊನಾ ವೈರಸ್ ಕೂಡಲಾ ಇದೇ ವಯಸ್ಸಿಗರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು ಮಾರತಿ ನಗರದಲ್ಲಿನ ಅಲ್ಪಸಂಖ್ಯಾತರ ವಸತಿ ಗೃಹದಲ್ಲಿ ಕೊರೊನಾ ಕ್ವಾರೆಂಟೈನ ಕೇಂದ್ರವನ್ನು ಪ್ರಾರಂಭಿಸುವುದರಿಂದ ವೃದ್ಧರಲ್ಲಿ ಇನ್ನಷ್ಟು ಆತಂಕ ಹೆಚ್ಚಾಗುತ್ತದೆ. ಆದ್ದರಿಂದ ಕೂಡಲೇ ಈ ಯೋಜನೆಯನ್ನು ಮೊಟಕುಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜನರ ಮಾತಿಗೆ ಕಿವಿಗೊಡದ ಅಧಿಕಾರಿಗಳು:
ಮಾರುತಿ ನಗರದ ನಿವಾಸಿಗರು ಅಧಿಕಾರಿಗಳಲ್ಲಿ ತಮ್ಮ ಬೇಡಿಕೆ ಇಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲಾ. ಜನರ ಮಾತನ್ನು ಕೇಳಿದ ತಾಲೂಕಾ ಕೋವಿಡ್-19 ನಿಯಂತ್ರಣಾ ಅಧಿಕಾರಿಗಳು ಇದರ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ ಎಂದು ಹೇಳಿ ಅಲ್ಲಿಂದ ಪಲಾಯನ ಮಾಡಿದರು.
ಜನ ಜಾಗೃತಿ ಮೂಡಿಸಿದ ಯುವ ಮುಖಂಡ:
ಮರುತಿ ನಗರದಲ್ಲಿ ತಾತ್ಕಾಲಿಕವಾಗಿ ಕೊರೊನಾ ಕ್ವಾರೆಂಟೈನ್ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದ್ದು ಇದರ ವಿರುದ್ಧ ನಿವಾಸಿಗರು ಹೋರಾಟ ಮಾಡಬೇಕು ಎಂದು ಆಟೊದಲ್ಲಿ ಯುವ ಮುಖಂಡರೊಬ್ಬರು ಧ್ವನಿ ವರ್ಧಕ ಮೂಲಕ ಜನ ಜಾಗೃತಿ ಮಾಡಿದ್ದರ ಪರಿಣಾಮ ನಗರದಲ್ಲಿನ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ವಸತಿ ಗೃಹದ ಎದುರಿಗೆ ನೂರಾರು ಸಂಖ್ಯೆಯಲ್ಲಿ ಜನರು ಸೇರಿ ಅಲ್ಲಿ ಕ್ವಾರೆಂಟೈನ್ ಕೇಂದ್ರ ಪ್ರಾರಂಭಿಸಲು ವಿರೋಧಿಸಿದರು.
Be the first to comment