ಅಕ್ರಮ ಸರಾಯಿ ತಯಾರಿಕೆ ತಡೆಯುವಲ್ಲಿ ಯಶಸ್ವಿಯಾದ ನಾರಾಯಣಪುರ ಪಿಎಸ್ಐ

ವರದಿ:- ಆನಂದ ಹೊಸಗೌಡರ ಹುಣಸಗಿ

ಕ್ರೈಮ್-ಪೋಕಸ್

ಯಾದಗಿರಿ ಜಿಲ್ಲೆಯ ಹುಣಸಗಿ ಸಮೀಪದ ನಾರಾಯಣಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತಿದ್ದ ಅಕ್ರಮ ಕಳ್ಳಬಟ್ಟಿ ಸರಾಯಿ ತಯಾರಿಕೆಯ ಬೆನ್ನತ್ತಿದ ಪಿಎಸ್ಐ ಶ್ರೀ ಅರ್ಜುನಪ್ಪ ಅರಿಕೆರಾ ರವರು ಸರಣಿ ದಾಳಿ ಕೈಗೊಳ್ಳುವುದರ ಮುಕಾಂತರ ಅಕ್ರಮ ಸರಾಯಿ ತಯಾರಿಕೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ವಿವಿಧ ಗ್ರಾಮಗಳಿಗೆ ಧಿಡೀರಣೆ ಭೇಟಿ ನೀಡಿ ಅಕ್ರಮ ಸರಾಯಿ ತಯಾರಿಸಲು ಇಟ್ಟಿದ್ದ ಸುಮಾರು 200 ಲೀಟರ್ ನಷ್ಟು ಕಚ್ಚಾವಸ್ತುಗಳನ್ನು ಪತ್ತೆ ಹಚ್ಚಿ ನಾಶಪಡಿಸಿದ್ದರು.

ಅದೇ ರೀತಿ ಶುಕ್ರವಾರದಂದು ಇನ್ನುಳಿದ ಗ್ರಾಮಗಳಾದ ಬಸಿರುಗಿಡದ ತಾಂಡ, ಬ್ಯಾಲದಗಿಡದ ತಾಂಡ, ಬೆಳ್ಳಿಗುಡ್ಡ ತಾಂಡ ಸೇರಿದಂತೆ ಇತರೆ ತಾಂಡಗಳಿಗೆ ಭೇಟಿ ನೀಡಿ ಸುಮಾರು 150ಲೀಟರ್ ಗೂ ಅಧಿಕ ಪ್ರಮಾಣದ ಸರಾಯಿ ತಯಾರಿಸಲು ಇಟ್ಟಿದ್ದ ಕಚ್ಚಾವಸ್ತುಗಳನ್ನು ಪತ್ತೆ ಮಾಡಿ ನಾಶಪಡಿಸಿದರು. ಗ್ರಾಮದ ಜನರಿಗೆ ಸರಾಯಿ ತಯಾರಿಸದಂತೆ ಎಚ್ಚರಿಕೆ ನೀಡಿದರು ಹಾಗೂ ಕರೋನ ವೈರಸ್ ನ ಮಹಾ ಮಾರಿ ರೋಗದ ಭಯಾನಕತೆಯ ಕುರಿತು ಜನರಿಗೆ ತಿಳುವಳಿಕೆ ಮೂಡಿಸಿ ಆರೋಗ್ಯದ ಜಾಗೃತಿಯ ಬಗ್ಗೆ ಕಿವಿ ಮಾತು ಹೇಳಿದರು ಜೊತೆಯಲ್ಲಿ ಇತರೆ ಸಿಬ್ಬಂದಿಗಳಾದ ದೇವಿಂದ್ರಪ್ಪ, ಬೈಲಪ್ಪ, ಹಾಗೂ ಹೆಡ್ ಕಾನ್ಸ್ಟೇಬಲ್ ಮೌನೇಶ ಇತರರಿದ್ದರು.

Be the first to comment

Leave a Reply

Your email address will not be published.


*