ಜೀಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಕೊರೊನಾ ವಿರುದ್ಧ ಜಿಲ್ಲಾ ಆರೋಗ್ಯಾ ಇಲಾಖೆಯು ಸಾಕಷ್ಟು ಕಟ್ಟೆಚ್ಚರ ವಹಿಸುತ್ತಿದ್ದಾರೆ. ಇದಕ್ಕಾಗಿ ಜಿಲ್ಲೆಯ ಎಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿ, ಅಂನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸಹಾಯಹಸ್ತದಿಂದ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಆಗಮಿಸಿದ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಹೊಂ ಕ್ವಾರೈಂಟರಿಯಲ್ಲಿ ಇಡುತ್ತಿದ್ದಾರೆ. ಆದರೆ ಈ ಎಲ್ಲಾ ಸಿಬ್ಬಂದಿಗಳಿಗೆ ಅವರ ರಕ್ಷಣೆಗಾಗಿ ಜಿಲ್ಲಾ ಆಡಳಿತದಿಂದ ಸಿಗಬೇಕಾದ ಮಾಸ್ಕ್, ಗ್ಲೌಸ್ ಮಾತ್ರ ಸರಿಯಾಗಿ ಸಿಗುತ್ತಿಲ್ಲ.
ಹೌದು, ಮುದ್ದೇಬಿಹಾಳ ಪಟ್ಟಣದಲ್ಲಿ ಈಗಾಗಲೇ 90 ಜನರನ್ನು ಹೊಂ ಕ್ವಾರೈಂಟರಿನಲ್ಲಿ ಇಟ್ಟಿರುವ ಆಶಾ ಕಾರ್ಯರ್ತೆಯರು ಹಾಗೂ ಆರೋಗ್ಯ ಸಹಾಯಕರು ತಮಗೆ ಇರಬೇಕಾದ ರಕ್ಷಣಾ ಕವಚಗಳು ಇಲ್ಲದೇ ಪರದಾಡುತ್ತಿದ್ದಾರೆ. ಇದರ ಬಗ್ಗೆ ಸ್ಥಳೀಯ ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್.ಬಿ.ತಿವಾರಿ ಅವರು ನಿರ್ಲಕ್ಷ ವಹಿಸಿದ್ದೆ ಎಲ್ಲದಕ್ಕೂ ಕಾರಣವಾಗಿದೆ.
ಆಶಾ ಕಾರ್ಯಕರ್ತೆಯರ ಹಾಗೂ ಆರೋಗ್ಯ ಸಹಾಯಕರ ಜೀವನದಲ್ಲಿ ಆಟವಾಡುತ್ತಿರುವ ಆರೋಗ್ಯ ಇಲಾಖೆ:
ಆಶಾ ಕಾರ್ಯಕರ್ತೆಯರಿಗೆ ಕೈ ಕವಚ ಹಾಗೂ ಮಾಸ್ಕ್ ನೀಡದಿರುವ ಬಗ್ಗೆ ತಾಲೂಕಾ ಆರೋಗ್ಯ ಅಕಾರಿಗಳಿಗೆ ವಿಚಾರಿಸಿದಾಗ ತಾಲೂಕಿಗೆ ಬಂದಂತಹ ಮಾಸ್ಕ್ ಹಾಗೂ ಕೈ ಕವಚಗಳನ್ನು ವಿತರಿಸಲಾಗಿದೆ ಎಂದು ಹೇಳಿದರೆ ಆಶಾ ಕಾರ್ಯಕರ್ತೆಯ ಮೇಲಾಕಾರಿ ಗೌಡರ ಅವರಿಗೆ ಕೇಳಿದಾಗ ನಮಗೆ ಮಾಸ್ಕ್ ಮತ್ತು ಕೈಕವಚಗಳ ಕೊರತೆ ಇದೆ. ಇದರಿಂದ ಆಶಾ ಕಾರ್ಯಕರ್ತೆಯರು ನಮಗೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಹೇಳುತ್ತಿರುವುದು ವಿಪರ್ಯಾಸವಾದರೆ ಇನ್ನೂ ತಾಲೂಕಾ ವೈದ್ಯಾಕಾರಿ ಡಾ.ಅನೀಲಕುಮಾರ ತೆಗುನಶಿ ಅವರು ತಾಲೂಕಾ ಆಸ್ಪತ್ರೆಗೆ ತಾಲೂಕಾ ಆರೋಗ್ಯ ಇಲಾಖೆಯಿಂದ ಯಾವುದೇ ಗ್ಲೌಸ್‌ಗಳು ಬಂದಿಲ್ಲಾ ಎಂದು ಹೇಳುತ್ತಿದ್ದಾರೆ. ಇದು ಅಧಿಕಾರಿಗಳು ಸಿಬ್ಬಂದಿಗಳ ಜೀವನದಲ್ಲಿ ಆಟವಾಡಿದಂತಾಗುತ್ತಿದೆ.
ಬಲಿಷ್ಠ ರಾಜಕಾರಣಿ ಬೆಂಬಲದಿಂದ ಮೈಸೂರಿನಿಂದ ಮುದ್ದೇಬಿಹಾಳಕ್ಕೆ ಆಗಮಿಸಿದ ಕುಟುಂಬಸ್ಥರು:
ಕಳೆದ ಎರಡು ಮೂರು ದಿನಗಳ ಹಿಂದೆಯೇ ಮುದ್ದೇಬಿಹಾಳ ಪಟ್ಟಣಕ್ಕೆ ಮೈಸೂರು ಜಿಲ್ಲೆಯಿಂದ ಕೆಲ ಕುಟುಂಬಸ್ಥರು ಆಗಮಿಸಿದ್ದು ಮೂಲಗಳಿಂದ ತಿಳಿದು ಬಂದಿದೆ. ಇದು ಆ ನಗರ ನಿವಾಸಿಗರಲ್ಲಿ ನಿದ್ದೆಗೆಡಿಸಿದೆ. ಮೈಸೂರಿನಿಂದ ಎಲ್ಲ ಚೆಕ್ ಪೋಸ್ಟ್ ಗಳನ್ನು ದಾಟಿಕೊಂಡು ಬರಲು ಇವರು ಓರ್ವ ಬಲಿಷ್ಠ ರಾಜಕಾರಣಿಯ ಬೆಂಬಲವಿದೆ ಎಂದು ತಿಳಿದು ಬಂದಿದ್ದು ಇದರ ಬಗ್ಗೆ ಸ್ಥಳೀಯ ಶಾಸಕ ನಡಹಳ್ಳಿ ಗಮನ ಹರಿಸಿ ಇವರನ್ನು ಹೆಚ್ಚಿನ ಕಾಲಜಿಯಿಂದ ಕಾಯ್ದುಕೊಳ್ಳಬೇಕಿದೆ. ಆದರೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರು ಇವರನ್ನು ಪತ್ತೆ ಮಾಡಿ ಹೊಂ ಕ್ವಾರೈಂಟರಿಯಲ್ಲಿ ಇಟ್ಟಿದ್ದು ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ತಿಳಿದು ಬಂದಿದೆ.
“ಕೊರೊನಾ ತಪಾಸಣೆಗಾಗಿ ಆಶಾ ಕಾರ್ಯಕರ್ತೆಯರಿಗೆ ೫೦ ಬಟ್ಟೆ ಮಾಸ್ಕ್, ೫೦ ತ್ರಿಪದಿಯ ಮಾಸ್ಕ್ ಹಾಗೂ ಕೇವಲ ೧೫ ಗ್ಲೌಸ್ ನೀಡಲಾಗಿದ್ದು ಇದರಲ್ಲಿಯೇ ನಾವು ತಪಾಸಣಾ ಕಾರ್ಯ ಮಾಡುತ್ತಿದ್ದೇವೆ.”
-ಎಂ.ಎಸ್.ಗೌಡರ, ಆರೋಗ್ಯ ಸಹಾಯಕರು, ಮುದ್ದೇಬಿಹಾಳ.
–
“ಮುದ್ದೇಬಿಹಾಳ ಪಟ್ಟಣದಲ್ಲಿ ಕೊರೊನಾ ನಿಮಿತ್ಯವಾಗಿ ಸಿಬ್ಬಂದಗಳಿಗೆ ಹಾಗೂ ಇತರೆ ಕಾರ್ಯಕರ್ತೆಯರಿಗೆ ಕೈ ಕವಚ ಹಾಗೂ ಮಾಸ್ಕ್‌ಗಳನ್ನು ತಾಲೂಕಾ ಆಸ್ಪತ್ರೆಯಿಂದಲೇ ವಿತರಿಸಲಾಗುವುದು. ಈಗಾಗಲೇ ಆಶಾ ಕಾರ್ಯಕರ್ತೆಯರಿಗೆ ಒದಗಿಸಬೇಕಾದ ಮಾಸ್ಕ್ ಮತ್ತು ಗ್ಲೌಸ್‌ಗಳನ್ನು ವಿತರಿಸಲಾಗಿದೆ.”
-ಡಾ.ಸತೀಶ ತಿವಾರಿ, ತಾಲೂಕಾ ಆರೋಗ್ಯಾಕಾರಿಗಳು, ಮುದ್ದೇಬಿಹಾಳ.
Be the first to comment