ಜೀಲ್ಲಾ ಸುದ್ದಿಗಳು
ದಾವಣಗೆರೆ:-ಸಮರ್ಥ ನಾಯಕನಿದ್ದರೆ ಸೋಲುವಂಥ ತಂಡವನ್ನು ಗೆಲುವಿನ ದಡ ಸೇರಿಸುತ್ತಾನೆ .ತನ್ನ ತಂಡ ಗೆಲ್ಲಬೇಕು ಎಂಬ ಅಚಲ ಮನೋಭಾವನೆ ಇದ್ದಾಗ ಅವರು ತಂಡದ ಎಲ್ಲಾ ಸದಸ್ಯ ವಿಶ್ವಾಸವನ್ನು ಗಳಿಸುವುದರ ಜೊತೆಗೆ ಎದುರಾಳಿಯನ್ನು ಸೋಲಿಸಲು ಅನೇಕ ತಂತ್ರಗಳನ್ನು ಪ್ರಯೋಗ ಮಾಡುತ್ತಾನೆ .ಸಮಯಕ್ಕೆ ಸಂದರ್ಭಕ್ಕೆ ತಕ್ಕಂತೆ ತಂತ್ರಗಳನ್ನು ಪ್ರಯೋಗ ಮಾಡಬೇಕಾದರೆ ಅವನು ಮೊದಲು ಚಾಣಿಕ್ಯ ನಾಗಿರಬೇಕು .ಆಗ ಎದುರಾಳಿ ಎಷ್ಟೇ ಬಲಿಷ್ಠನಾಗಿದ್ದರೂ ಅವನನ್ನು ಸುಲಭದಲ್ಲಿ ಸೋಲಿಸುತ್ತಾನೆ .
ಸದ್ಯದ ಪರಿಸ್ಥಿತಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಸಮರ್ಥ ನಾಯಕರಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯರು ಕರೋನಾ ವಿರುದ್ಧದ ಯುದ್ಧದಲ್ಲಿ ಸಮರ್ಥವಾದ ತಂತ್ರಗಳನ್ನು ಪ್ರಯೋಗಿಸುವುದರ ಮೂಲಕ ಕರೋನಾ ವೈರಸ್ ಜಿಲ್ಲಾದ್ಯಂತ ಹರಡದಂತೆ ಲಾಕ್ ಮಾಡಿದ್ದಾರೆ .
ಕರೋನಾ ವೈರಸ್ ದಾವಣಗೆರೆ ತಂಡದೊಂದಿಗೆ ಆರಂಭದಲ್ಲಿ ಮೇಲುಗೈಯನ್ನು ಸಾಧಿಸಿತ್ತು .ಮೂರು ಪಾಜಿಟಿವ್ ಪ್ರಕರಣ ದೊರೆತಾಗ ದಾವಣಗೆರೆ ಜಿಲ್ಲಾ ತಂಡವು ಸೋಲುವ ಭೀತಿಯನ್ನು ಜನಸಾಮಾನ್ಯರಲ್ಲಿ ಆವರಿಸಿಕೊಂಡಿತ್ತು .ಇನ್ನೇನು ದಾವಣಗೆರೆ ಜಿಲ್ಲಾ ತಂಡಕ್ಕೆ ರಾಜ್ಯದಲ್ಲಿ ಸೋಲುವ ಭೀತಿ ಆವರಿಸಿಕೊಳ್ಳುತ್ತದೆ ಎನ್ನುವಷ್ಟರಲ್ಲಿ .ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯರು ತಮ್ಮ ಬುದ್ಧಿವಂತಿಕೆಯಿಂದ ತಂಡವನ್ನು ಸಮರ್ಥ ತಂತ್ರಗಾರಿಕೆಯೊಂದಿಗೆ ಕರೋನಾ ವೈರಸ್ ‘ಕಿತ್ತಳೆ’ ಬಣ್ಣದ ಅಂಚಿಗೆ ಬಂದು ನಿಲುವಂತೆ ಮಾಡಿ ಜನಸಾಮಾನ್ಯರಲ್ಲಿ ಗೆಲುವಿನ ಭರವಸೆಯನ್ನು ಹುಟ್ಟಿಸಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈಗಾಗಲೇ ದಾವಣಗೆರೆ ಜನತೆಯ ಮಿನುಗುವ ನಕ್ಷತ್ರಗಳಾಗಿ ಅವರ ಕಣ್ಣಲ್ಲಿ ಮಿನುಗುತ್ತಿದ್ದಾರೆ .ಕರೋನಾ ವೈರಸ್ ನಿಯಂತ್ರಣದ ವಿಚಾರದಲ್ಲಿ ಜಿಲ್ಲೆಯ ಜನತೆಯಲ್ಲಿ ಹೊಸ ಭರವಸೆಯ ಬೆಳಕನ್ನು ಚಿಮ್ಮಿದ್ದಾರೆ .
ಮುಂದಿನ ಸೋಮವಾರದ ನಂತರ ಕೇಂದ್ರದಿಂದ ಬಿಡುಗಡೆಯಾಗುವ ಕರೊನ ನಿಯಂತ್ರಣ ಪಟ್ಟಿಯಲ್ಲಿ ‘ಹಸಿರು’ ಬಣ್ಣದ ದಡ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ .
ಸದ್ಯ ಜಿಲ್ಲಾಧಿಕಾರಿಗಳ ತಂಡದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ರಾಘವೇಂದ್ರ ಸ್ವಾಮಿ, ಜಿಲ್ಲಾ ಪಂಚಾಯತ್ ಅಧಿಕಾರಿ ಪದ್ಮಾ ಬಸಂತಪ್ಪ ,ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ ವಿಜಯಕುಮಾರ್, ಆರೋಗ್ಯ ಸರ್ವೇಕ್ಷಣಾಧಿಕಾರಿ ರಾಘವನ್ ,ನಗರ ಪಾಲಿಕೆಯ ಅಧಿಕಾರಿಗಳು ,ಜಿಲ್ಲಾಧಿಕಾರಿ ಕಚೇರಿಯ ಹಿರಿಯ, ಕಿರಿಯ ,ಅಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿ ಇಲಾಖೆಯ ಹಿರಿಯ, ಕಿರಿಯ, ಅಧಿಕಾರಿಗಳು .ಹಾಗೂ ಜಿಲ್ಲೆಗೆ ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದಂತಹ ಎಲ್ಲ ತಾಲ್ಲೂಕಿನ ತಾಲ್ಲೂಕು ದಂಡಾಧಿಕಾರಿಗಳು ,ನಗರಸಭೆ ,ಪುರಸಭೆಯ ಪೌರಯುಕ್ತರು ,
ತಾಲ್ಲೂಕು ಆರೋಗ್ಯಾಧಿಕಾರಿಗಳು, ತಾಲ್ಲೂಕು ಪಂಚಾಯತ್ ಅಧಿಕಾರಿಗಳು ,ಹಾಗೂ ತಾಲ್ಲೂಕ್ ಪೊಲೀಸ್ ಇಲಾಖೆಯ ಅಧಿಕಾರಿಗಳು ,ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಅವರು ಕಾಲಕಾಲಕ್ಕೆ ನೀಡುವ ಸಲಹೆ, ಸೂಚನೆಗಳನ್ನು ರಾತ್ರಿ, ಹಗಲು, ಎನ್ನದೆ ಚಾಚು ತಪ್ಪದೆ ಪಾಲಿಸೋದರ ಜೊತೆಗೆ ಒಂದು ಸಮರ್ಥ ತಂಡವಾಗಿ ಕರೋನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಹಾಗೂ ಜಿಲ್ಲೆಯ ಜನತೆಯಲ್ಲಿ ಗೆಲುವಿನ ಭರವಸೆ ಹುಟ್ಟಿಸಿದ್ದಾರೆ .
ಈಗಾಗಲೇ ದಾವಣಗೆರೆ ಜಿಲ್ಲಾಡಳಿತವು ಕರೋನಾ ವೈರಸ್ ವಿರುದ್ಧ ತೆಗೆದುಕೊಂಡ ಮುಂಜಾಗೃತ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರವು ಮೆಚ್ಚುಗೆ ವ್ಯಕ್ತಪಡಿಸಿದೆ.
ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರ ಮೆಚ್ಚುವಂಥ ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡ ಜಿಲ್ಲಾಡಳಿತವು ,ಮುಂದೆ ಪ್ರಧಾನಿಯವರು ಮೆಚ್ಚುವಂಥ ಸಾಧನೆ ಮಾಡುವುದರೊಂದಿಗೆ ‘ಹಸಿರು’ ಬಣ್ಣದ ಒಳಗೆ ಬಂದು ನಿಲ್ಲುವಂತಾಗಲಿ ಎಂಬುದು ನಮ್ಮ ವಾಹಿನಿಯ ಕಳಕಳಿಯಾಗಿದೆ.
Be the first to comment