ಕಿಲ್ಲರ್ ಕೊರೊನಾ ನಿರ್ಮೂಲನೆಗೆ ನದಿ ನೀರಿನ ಮೋರೆ ಹೊದ ಗ್ರಾಮಸ್ಥರು:- ಸಾಮಾಜಿಕ ಅಂತರ ಕೃಷ್ಣ ಮಯ

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್ ಸುರಪುರ

ದೇಶದಲ್ಲಿ ಕೊರೊನಾ ವೈರಸ್‌ ವೇಗವಾಗಿ ಹರಡುತ್ತಿದ್ದು ಇಗಾಗಲೇ ದೇಶಾದ್ಯಂತ ಅನೇಕ ಪ್ರಕರಣಗಳು ದಾಖಲಾಗಿವೆ ,
ಕೊರೊನಾ ತಡೆಗಟ್ಟಲು ಯಾವುದೆ ನಿಖರವಾದ ಔಷಧಿಯನ್ನು ಜಗತ್ತಿನ ಯಾವುದೇ ರಾಷ್ಟ್ರವೂ ಕಂಡುಕೊಂಡಿಲ್ಲ ಇನ್ನೂ ಸಂಶೋಧನಾ ಹಂತದಲ್ಲಿದೆ .ಕೊರೊನಾ ಹರಡವಿಕೆ ತಡೆಯಲು ಸಾಮಾಜಿಕ ಅಂತರ ದಿವ್ಯ ಔಷಧಿಯಾಗಿದೆ ಆದ್ದರಿಂದ ದೇಶದಲ್ಲಿ ಎರಡನೇ ಹಂತದ ಲಾಕ್ ಡೌನ್ ಪ್ರಾರಂಭವಾಗಿದೆ.

ಮೇ 3ರ ವರೆಗೂ ಲಾಕ್ ಡೌನ್ ವಿಸ್ತರಿಸಿ ಪ್ರಧಾನಿ ಮೋದಿ ಜನತೆಗೆ ಸಹಕರಿಸಲು ಮನವಿ ಮಾಡಿದ್ದಾರೆ.

ತಾಲ್ಲೂಕಿನ ಬೇವಿನಾಳ ಎಸ್ ಎಚ್ ಗ್ರಾಮದ ಯುವಕರು ಕೊರೊನಾ ನಿರ್ಮೂಲನೆಗಾಗಿ ನದಿ ನೀರಿನ ಮೋರೆ ಹೊಗಿದ್ದಾರೆ ,

ಹೌದು ಗ್ರಾಮದ ನೂರಾರು ಜನ ಬಿಂದಿಗೆ ಹಿಡಿದು ನದಿ ನೀರನ್ನು ತಂದು ಗ್ರಾಮದ ದೇವರುಗಳಿಗೆ ವಿಶೇಷವಾಗಿ ಅಭಿಷೇಕ ಮಾಡುವ ಮೂಲಕ ಕೊರೊನಾ ನಿರ್ಮೂಲನೆಗೆ ಶಕ್ತಿ ನೀಡಬೇಕೆಂದು ದೇವರ ಮುಂದೆ ಮೊರೆ ಇಟ್ಟಿದ್ದಾರೆ.

ದೇವರ ಹತ್ತಿರ ವೈದ್ಯರಿಗೆ , ವಿಜ್ಞಾನಿಗಳಿಗೆ ಔಷಧ ಕಂಡುಕೊಳ್ಳುವ ಶಕ್ತಿ ನೀಡಬೇಕೆಂದು ಪ್ರಾರ್ಥಸಿದ್ದಾರೆ.

ಇಷ್ಟೊಂದು ಜನ ನೀರಿಗಿಳಿಯಲು ಅನುಮತಿ ಕೊಟ್ಟುವರು ಯಾರು..?

ಹೌದು ದೇಶವೇ ಲಾಕ್ ಡೌನ್ ಆಗಿದೆ ಜನತೆ ಮನೆಯಿಂದ ಅನಾವಶ್ಯಕವಾಗಿ ಹೊರ ಬಾರದಂತೆ ಸರಕಾರ ಎಷ್ಟೆ ಕ್ರಮ ಕೈಗೊಂಡರು ಜನತೆ ಮಾತ್ರ ಪಾಲನೆ ಮಾಡಿದಂತೆ ಕಾಣ್ತಿಲ್ಲ ,
ಬೇವಿನಾಳ ಎಸ್ ಎಚ್ ಗ್ರಾಮದ 30 ಕ್ಕೂ ಅಧೀಕ ಜನರು ಒಂದೇ ಬಾರಿಗೆ ಒಗ್ಗೂಡಿ ನೀರಿಗೆ ಹೊಗಲು ನದಿ ನೀರು ತರಲು ಅನುಮತಿ ಕೊಟ್ಟವರು ಯಾರು, ಅಷ್ಟೊಂದು ಜನ ಒಗ್ಗೂಡಿ ತಿರುಗಾಡುವದೇಷ್ಟು ಸರಿ
ಸಂಬಂಧಿಸಿ ಅಧಿಕಾರಿಗಳ ಗಮನಕ್ಕೆ ಇರಲಿಲ್ಲವೇ, ಅಥವಾ ಕಂಡು ಕಾಣದಂತೆ ಕುತಿದ್ದಾರೋ ತಿಳಿಯುತ್ತಿಲ್ಲ , ಭಕ್ತಿಯ ಹೆಸರಲ್ಲಿ ಸರಕಾರದ ಆದೇಶ ಉಲ್ಲಂಘಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಗ್ರಾಮಸ್ಥರಿಗೆ ಕೊರೊನಾ ವೈರಸನ್ ಜಾಗೃತಿಯ ಅಗತ್ಯವಿದೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.

Be the first to comment

Leave a Reply

Your email address will not be published.


*