ಜೀಲ್ಲಾ ಸುದ್ದಿಗಳು
ಕರೋನಾ ವೈರಸ್ ಮಹಾಮಾರಿಯ ಹಾಟ್ ಪ್ಲೇಸ್ ಹಿರೇಬಾಗೇವಾಡಿಯಲ್ಲಿ ನಮ್ಮ ಅಂಬಿಗ ನ್ಯೂಸ್ ತಂಡ
ಹಿರೆ ಬಾಗೇವಾಡಿ:-ಕರೋನಾ ವೈರಸ್ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿ ಆರೋಗ್ಯ ಪ್ರಪಂಚದಲ್ಲಿ ಸಾವಿನ ಬೀಜವನ್ನೇ ಬಿತ್ತುತ್ತಿದೆ. ಇಂತಹ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಗ್ರಾಮವು ಈ ಕರೋನಾ ವೈರಸ್ ನ ಹಾಟ್ ಪ್ಲೇಸ್ ಆಗಿ ಸಾಕಷ್ಟು ಅವಾಂತರ ಸೃಷ್ಟಿ ಮಾಡಿ ಈ ಗ್ರಾಮದ ಜನತೆ ಕ್ಷಣ ಕ್ಷಣವೂ ಸಹ ಆತಂಕದಿಂದ ಜೀವನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗ್ರಾಮದಲ್ಲಿ ದಿನೇ ದಿನೇ ಕರೋನಾ ಮಹಾ ಮಾರಿಯ ಸೋಂಕು ಹರಡುತ್ತಿದ್ದು ಇಲ್ಲಿಯವರೆಗೂ ಈ ಗ್ರಾಮದ ಒಂದೇ
5 ಜನರಿಗೆ ಕರೋನಾ ಶಂಕೆ ಇರುವುದು ದೃಢ ಪಟ್ಟಿದ್ದು . ಇಡೀ ಗ್ರಾಮವೇ ಸಂಪೂರ್ಣವಾಗಿ ಸೀಲ್ ಆಗಿದೆ.
ಇನ್ನೂ ಈ ಗ್ರಾಮದಲ್ಲಿ ಸ್ಥಳೀಯ ಹಿರೇಬಾಗೇವಾಡಿ ಪೊಲೀಸ್ ಠಾಣೆಯ cpi ನಾಗರಾಜು ಅಂಬಿಗೇರ ಅವರಂತೂ ತಮ್ಮ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ಮಾಡಿ ಇಡೀ ಗ್ರಾಮದ ಗಲ್ಲಿ ಗಲ್ಲಿಗೂ ಸಂಚಾರ ಮಾಡಿ ಕರೋನಾ ವೈರಸ್ ತಡೆಗಟ್ಟುವುದಕ್ಕೆ ಸಾಕಷ್ಟು ಅರಿವು ಮೂಡಿಸಿ ಕಟ್ಟುನಿಟ್ಟಿನ ಕ್ರಮ ಕೈ ಗೊಂಡಿದ್ದಾರೆ. ಇನ್ನೂ ಹಿರೇಬಾಗೇವಾಡಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ಆರೋಗ್ಯ ವೈದ್ಯಾಧಿಕಾರಿಗಳು ಆದ ಡಾ. ನೀತಾ ಅವರಂತೂ ಆಸ್ಪತ್ರೆಯಲ್ಲಿ ಬೀಡುಬಿಟ್ಟು, ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ ನಡುವೆಯೂ ಇರುವ ಸಿಬ್ಬಂದಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ pdo, ಹಾಗೂ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆ, ಅಂಗನವಾಡಿ ಕರ್ತೆಯರ ಜೊತೆ ಸೇರಿ ವಿಶೇಷ ಕಾಳಜಿ ವಹಿಸಿ ಇಡೀ ಗ್ರಾಮವೇ ಸಾಕಷ್ಟು ಸ್ವಚ್ಛತೆಯ ಜೊತೆ ಜೊತೆಗೆ ಕರೋನಾ ವೈರಸ್ ತಡೆಗಟ್ಟುವುದಕ್ಕೆ ಸಾಕಷ್ಟು ಅರಿವನ್ನು ಮೂಡಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಈ ಗ್ರಾಮವು ಸದಾ ಗಿಜಿಗುಡುತ್ತಿತ್ತು. ಆದರೇ ಈ ಕರೋನಾ ವೈರಸ್ ಮಹಾಮಾರಿ ಈ ಗ್ರಾಮಕ್ಕೆ ಅಪ್ಪಳಿಸಿ ಇಡೀ ಜಿಲ್ಲೆಯ ಹಾಟ್ ಪ್ಲೇಸ್ ಆಗಿದ್ದೇ ತಡ ಕ್ಷಣ ಕ್ಷಣಕ್ಕೂ ಜನಜೀವನ ವ್ಯವಸ್ಥೆ ಆತಂಕದಿಂದ ಜೀವನ ಮಾಡುತ್ತಿದ್ದಾರೆ. ಆದ್ದರಿಂದ ನಮ್ಮ ಅಂಬಿಗ ನ್ಯೂಸ್ ತಂಡ ಭೇಟಿಕೊಟ್ಟು ಇಲ್ಲಿನ ಜನ ಜೀವನ ವ್ಯವಸ್ಥೆ ಹಾಗೂ ಇಲಾಖೆಗಳು ಕೈ ಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಸಮಗ್ರ ವರದಿ ತಯಾರು ಮಾಡಿತು.
Be the first to comment