ಜೀಲ್ಲಾ ಸುದ್ದಿಗಳ
ಅಂಬಿಗ ನ್ಯೂಸ್ ಸುರಪುರ
ರಾಕ್ಷಸನಂತೆ ಮುಟ್ಟಿದವರನ್ನೆಲ್ಲ ಆವರಿಸಿಕೊಳ್ಳುತ್ತ ಇಡೀ ವಿಶ್ವವ್ಯಾಪಿ ತನ್ನ ವ್ಯಾಪ್ತಿಯನ್ನು ಹರಡತ್ತಿರುವ ಕೊರೊನಾ ವೈರಸ್.
ರಾಜ್ಯಾದ್ಯಂತ ಅನೇಕ ಸೋಂಕಿತರ ಪ್ರಕರಣಗಳು ದಾಖಲಾಗಿದ್ದು ಕೊರೊನಾಗೆ ರಾಜ್ಯವೇ ಸ್ತಬ್ದವಾಗಿದೆ.
ಕೊರೊನಾ ಭೀಕರತಗೆ ರಾಜ್ಯದ ಎಲ್ಲಾ ಉದ್ಯಮಗಳು , ಕಾರ್ಖಾನೆಗಳು ಬಂದಾಗಿ ದೇಶವೇ ಲಾಕ್ ಡೌನ್ ಆಗಿ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳು ಮಾತ್ರ ವ್ಯಾಪಾರಕ್ಕಿಳಿದಿವೆ,
ಹೌದು ರಾಜ್ಯದಲ್ಲಿ ಲಾಕ್ ಡೌನ್ ನಿಂದ ಮನುಷ್ಯ ಬದುಕಲು ಅವಶ್ಯವಿರುವ ವಸ್ತುಗಳಾದ ದಿನಸಿ, ಆಹಾರ ಪದಾರ್ಥಗಳು,ಹಣ್ಣು , ಹಾಲು , ಔಷಧ ಮಳಿಗೆಗಳು ಮಾತ್ರ ಚಾಲ್ತಿಯಲ್ಲವೆ.
ರಾಜ್ಯದಲ್ಲಿ ಬಹು ನಿರೀಕ್ಷೆ ಇಟ್ಟು ಅನ್ನದಾತ ಬೆಳಿದಿರುವ ಬೇಳೆಗಳು ವ್ಯಾಪಾರಸ್ತರಿಲ್ಲದೆ, ವ್ಯಾಪಾರವಾಗದೆ ಬೆಳೆದ ಬೆಳೆಗಳನ್ನು ನೋಡುತ್ತಾ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ತಿತಿ ರೈತನಿಗೆ ಬಂಧೊದಗಿದೆ,
ಹೌದು ದೇಶದಲ್ಲಿ ಯಾವುದೆ ಸಂದಿಗ್ಧ ಪರಸ್ತಿತಿ ಬಂದಾಗ ಮೊದಲಿಗೆ ಬಲಿಯಾಗುವುದೇ ದೇಶದ ಬೆನ್ನೆಲುಬು ರೈತರು
ಅನೇಕ ನಿರೀಕ್ಷೆ ಇಟ್ಟುಕೊಂಡು ರೈತರು ತೋಟಗಾರಿಕೆ ಬೆಳೆಯಾದ ಪಪ್ಪಾಯ ಬೆಳದಿರುವ, ರೈತರ ಬೆಳೆ ಕೈ ಸೇರಿತು ಏನ್ನುವ ಹೊತ್ತಿಗೆ ಕೊರೊನಾ ಶಾಕ್ ಕೊಟ್ಟಿದೆ.
ದುಡಿತಕ್ಕೆ ಮೋಸವಿಲ್ಲವೆನ್ನುವ ಹಾಗೆ ರೈತ ಬೇವರಿಳಿಸಿ ದುಡಿದಾಗ ಭೂಮಿ ದುಡಿತಕ್ಕೆ ತಕ್ಕ ಫಸಲನ್ನು ಕೊಟ್ಟಿದೆ ಆದರೆ ಉತ್ತಮವಾಗಿ ಬೇಳೆದ ಬೆಳೆಗಳು ಮಾರಟವಾಗದೆ ರೈತರು ಸಂಕಷ್ಟಕ್ಕಿಡಾಗಿದ್ದಾರೆ.
ತಾಲ್ಲೂಕಿನ ದೇವತ್ಕಲ್, ಚಂದಾಲಾಪುರ, ಹಾಲಭಾವಿ ಸಿದ್ದಾಪುರ(ಬಿ), ಹೆಬ್ಬಾಳ ಇನ್ನಿತರ ಗ್ರಾಮಗಳಲ್ಲಿ ರೈತರು ನಿರೀಕ್ಷೆ ಇಟ್ಟು ಪಪ್ಪಾಯ ಬೆಳೆದಿದ್ದಾರೆ
ನಿರೀಕ್ಷೆಗೆ ತಕ್ಕಂತೆಯೇ ಫಸಲು ಉತ್ತಮವಾಗಿ ಬಂದಿದೆ ಆದರೆ ವ್ಯಾಪಾರವಾಗದೆ ಪಪ್ಪಾಯಿ ಹಣ್ಣು ಗಿಡದಲ್ಲಿಯೇ ಉಳಿದು ಹಣ್ಣಾಗಿ ನಿಂತು ಉದರಿ ಬೀಳುತ್ತಿವೆ.
೧)ಬದುಕು ಬದಲಾಯಿಸಿತೇ ಎಂಬ ನಿರೀಕ್ಷೆ ಇತ್ತು..?
ದೇವತ್ಕಲ್ಲ ಗ್ರಾಮದ ರೈತ ಹಣಮಂತ್ರಾಯ ಘಂಟಿ ತನ್ನ ಸ್ವಂತ ಜಮೀನಿನಲ್ಲಿ ೧ಏಕರೆ ೧೨ ಗುಂಟೆ ಪಪ್ಪಾಯ ಬೆಳೆ ಬೆಳದಿದ್ದಾರೆ ಹಣ್ಣು ಬಂದು ಎರಡು ಭಾರಿ ಕಟಾವು ಮಾಡಲಾಗಿದ್ದು ಸುಮಾರು ೬೦ಸಾವಿರದಷ್ಟು ಹಣ ಕೈ ಸೇರಿದೆ ಆದರೆ ೨ಲಕ್ಷದ ಐವತ್ತು ಸಾವಿರದಷ್ಟು ಖರ್ಚಾಗಿದೆ ಇನ್ನು ಜಮೀನಿನಲ್ಲಿ ೩ಲಕ್ಷದಷ್ಟು ಹಣ್ಣುಗಳಿದ್ದು ವ್ಯಾಪಾರಸ್ಥರಿಲ್ಲದೇ ವ್ಯಾಪಾರವಾಗದೆ ಹಣ್ಣಾದ ಹಣ್ಣುಗಳನ್ನು ಹರಿದು ದನಗಳಿಗೆ ಹಾಕುವ ಪರೀಸ್ಥಿತಿ ಬಂದೊದಗಿದೆ ಎನ್ನುತ್ತಾರೆ ರೈತರು.
೨)ಸ್ವಂತ ಊರಿನಲ್ಲಿ ದುಡಿದು ಬದುಕು ಕಟ್ಟುವ ನಿರೀಕ್ಷೆಯಲ್ಲಿದ್ದ ಯುವ ರೈತ
ತಾಲ್ಲೂಕಿನ ಸಿದ್ದಾಪುರ(ಬಿ) ಗ್ರಾಮದ ರೈತ ಪ್ರಭುಗೌಡ ಬದುಕು ಕಟ್ಟಿಕೊಳ್ಳಲು ದೂರದ ನಗರ ಬೆಂಗಳೂರಿಗೆ ಹೊಗಿ ಚಾಲಕನಾಗಿ ದುಡಿದು, ಅದ್ಹೇಗೋ ಕಷ್ಟ ನಷ್ಟ ಅನುಭವಿಸಿ ಅಷ್ಟೊ ಇಷ್ಟೊ ಹಣ ಶೇಖರಣೆ ಮಾಡಿ ಸ್ವಂತ ಊರಿನಲ್ಲಿ ಬದುಕು ಕಟ್ಟಿಕೊಂಡು ಜೀವನ ಸಾಗಿಸುವ ಮಹಾದಾಸೆ ಹೊಂದಿ ಕೃಷಿಯಲ್ಲಿ ಖುಷಿಕಾಣಲು ೩ ಏಕರೆ ಜಮೀನಿನಲ್ಲಿ ಸುಮಾರು ೬ಲಕ್ಷ ರೂ ಗಳ ಖರ್ಚುಮಾಡಿ ಪಪ್ಪಾಯ ಬೇಳದಿದ್ದಾರೆ ನಿರೀಕ್ಷೆಗೂ ಮೀರಿ ಫಸಲು ಬಂದಿದೆ ಕೇವಲ ಒಂದು ಭಾರಿ ಮಾತ್ರ ಕಟಾವು ಮಾಡಲಾಗಿದೆ ಸದ್ಯ ಹಣ್ಣು ಕಟಾವಿಗೆ ಬಂದಿದೆ ಆದರೆ ಯಾರೂ ಕೂಡಾ ವ್ಯಾಪಾರಸ್ಥರು ಖರೀದಿಗೆ ಮುಂದೆ ಬರುತ್ತಿಲ್ಲ ಹಣ್ಣಾಗಿ ಪಪ್ಪಾಯಿ ಉದುರಿ ಬಿಳುತ್ತಿವೆ ಹೀಗಾಗಿ ವಿಷ ಸೇವಿಸುವುದೊಂದೇ ಬಾಕಿ ಎಂದು ರೈತರು ಕಣ್ಣಂಚಲ್ಲಿ ನೀರು ಜಿನಗುತ್ತಿವೆ.
ಅದೇನೇ ಇರಲಿ ಸರ್ಕಾರ ರೈತರಿಗೆ ಪರಿಹಾರ ನೀಡುವ ಬದಲು ರೈತರು ಬೆಳೆದಿರುವ ಬೇಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿ ಬೆಳೆಗಳನ್ನು ಮಾರಟ ಮಾಡಲು ಅನುಕೂಲ ಮಾಡಿಕೊಡಬೇಕು ಎನ್ನುವುದೇ ನಮ್ಮ ಆಶಯ.
Be the first to comment