ಗುಲ್ಬರ್ಗಾ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳ ನಡುವೆ ತಾರತಮ್ಯದ ಅಪಸ್ವರ ಕೇಳಿ ಬರುತ್ತಿದೆ. ಕಲಬುರಗಿಯಲ್ಲಿ ಪಿಹೆಚ್ಡಿ ಮಾರಾಟಕ್ಕಿದೆ ಎಂದು ಅಲ್ಲಿನ ಸಂಶೋಧನಾ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಉದ್ದೇಶ ಪೂರ್ವಕವಾಗಿ ತಮಗೆ ಪಿಹೆಚ್ಡಿ ನೀಡಲು ವಿಳಂಬ ಮಾಡಲಾಗುತ್ತದೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
2017ರಲ್ಲೆ ಮುಗಿಯಬೇಕಿದ್ದ ನನ್ನ ಪಿಹೆಚ್ಡಿ ಇಲ್ಲಿಯವರೆಗೂ ಮುಗಿದಿಲ್ಲ. ಆದರೆ ಬೇರೆ ವಿದ್ಯಾರ್ಥಿಗಳ ಪಿಹೆಚ್ಡಿ ಮುಗಿಸಿಕೊಟ್ಟಿದ್ದು ಉದ್ದೇಶ ಪೂಕವಾಗಿಯೇ ವಿಳಂಬ ಮಾಡಲಾಗುತ್ತಿದೆ, ಮತ್ತು ಸ್ವತಃ ಕುಲಪತಿಗಳೇ ನಮ್ಮ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಂಶೋಧನಾ ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದಾರೆ.
ಇಲ್ಲಿನ ಸಹ ಮಾರ್ಗದರ್ಶಕ ಡಾ ಮರಿಸ್ವಾಮಿ ಆರು ವರ್ಷ ಕಳೆದರು ನನಗೆ ಇನ್ನೂ ಚಾಪ್ಟರ್ ಪ್ಲಾನ್ ಹಾಕಿಕೊಡದೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಕೇಳಿದಕ್ಕೆ ಎರಡು ಲಕ್ಷ ಕೊಡು ಮಾಡುತ್ತೇವೆ ಎಂದು ಬಹಿರಂಗವಾಗಿ ಕೇಳುತ್ತಿದ್ದಾರೆ. ವಿವಿಯಲ್ಲಿ ಕೆಳವರ್ಗದ ವಿದ್ಯಾರ್ಥಿಗಳ ಮೇಲೆ ಮಾನಸಿಕ ದೌರ್ಜನ್ಯ ನಡೆಯುತ್ತಿದೆ. ಕೂಡಲೇ ಸಂಶೋಧನಾ ವಿದ್ಯಾರ್ಥಿಗಳ ಮೇಲೆ ಮಾನಸಿಕ ಹಲ್ಲೆ ನಡೆಸುತ್ತಿರುವುದನ್ನು ತಡೆಗಟ್ಟಬೇಕು, ಹಾಗ ಆರು ವರ್ಷಗಳಿಂದ ಹಣಕ್ಕಾಗಿ ಪೀಡಿಸುತ್ತಿರುವ ಪ್ರೊ ಹೆಚ್ ಕೆ ಮರಿಸ್ವಾಮಿಯವರ ನಿವೃತ್ತ ಪಿಂಚಣಿ ತಡೆಹಿಡಿದು, ಈ ಕುರಿತು ತನಿಖೆ ನಡೆಸಿ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ವಿವಿಧ ಸಂಘಟನೆಯ ನೇತೃತ್ವದಲ್ಲಿ ಹೋರಾಟ ನಡೆಸುವುದಾಗಿ ಸಂಶೋಧನಾ ವಿದ್ಯಾರ್ಥಿ ಸಾಯಬಣ್ಣಾ ಈರಣ್ಣಾ ಗುಡೂಬಾ ಎಚ್ಚರಿಸಿದರು.
Be the first to comment