ಜೀಲ್ಲಾ ಸುದ್ದಿಗಳು
ಬೀದರ:- ಕರೋನಾ ಸೋಂಕಿಗೆ ಸಂಬಂಧಿಸಿದಂತೆ ಪ್ರಾಥಮಿಕ ಸಂಪರ್ಕದಲ್ಲಿರುವ ಎಲ್ಲರ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏ.13ರಂದು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಹಾಸ್ಟೇಲಗಳಲ್ಲಿ ಮೂಲಭೂತ ಸೌಕರ್ಯವಿರುವಂತೆ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಡಿಸಿ ಅವರು ನಿರ್ದೇಶನ ನೀಡಿದರು.
ಅಗ್ನಿಶಾಮಕ ದಳದಿಂದ ಕೂಡಲೇ ಎಲ್ಲ ಕಚೇರಿಗಳು, ವಾರ್ಡುಗಳು ಮತ್ತು ಕಂಟೈನಮೆಂಟ್ ಪ್ರದೇಶಗಳಲ್ಲಿ ತಪ್ಪದೇ ತುರ್ತಾಗಿ ಸ್ಯಾನಿಟೈಜರ್ ಮಾಡಲು ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಸೂಚಿಸಿದರು.
ಕೆಲವರು ಬ್ಯಾಂಕಿಗೆ ಹೋಗುವುದಾಗಿ ಹೇಳಿ ಹೊರಗಡೆ ಸುತ್ತುವುದು ಕಂಡು ಬರುತ್ತಿದೆ. ಬರೀ ಮಹಿಳೆಯರಿಗೆ ಮಾತ್ರ ಬಂದಿರುವ ಪ್ರಧಾನಮಂತ್ರಿ ಜನ್‌ಧನ್ ಯೋಜನೆಯ 500 ಹಣವನ್ನು ಸಾಧ್ಯವಾದರೆ ಕಂಟೈನಮೆಂಟ್ ಏರಿಯಾದಲ್ಲಿ ಯಾರೂ ಕೂಡ ಮನೆಯಿಂದ ಹೊರಬರದಂತೆ ಅವರ ಮನೆಮನೆಗೆ ಹೋಗಿ ತಲುಪಿಸುವ ವ್ಯವಸ್ಥೆಗೆ ಕ್ರಮ ವಹಿಸಬೇಕು. ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಪಡೆಯಲು ಬ್ಯಾಂಕಿಗೆ ಬರುವ ರೈತರಿಗೆ ಅಂತರ ಕಾಯ್ದುಕೊಳ್ಳಲು ತಿಳಿಸಬೇಕು ಎಂದು ಜಿಲ್ಲಾಧಿಕಾರಿಗಳು, ಲೀಡ್ ಬ್ಯಾಂಕ್ ಮ್ಯಾನೇಜರ್ ಅವರಿಗೆ ಸೂಚಿಸಿದರು. ಇದಕ್ಕೆ ಅಗತ್ಯವಿದ್ದರೆ ಪೊಲೀಸ್ ಮತ್ತು ಹೋಮ್ ಗಾರ್ಡಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್‌ಪಿ ಡಿ.ಎಲ್.ನಾಗೇಶ, ಜಿಪಂ ಸಿಇಓ ಗ್ಯಾನೇಂದ್ರಕುಮಾರ ಗಂಗವಾರ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಡಿಎಚ್‌ಓ ಡಾ.ವಿ.ಜಿ.ರೆಡ್ಡಿ ಹಾಗೂ ಇತರರು ಇದ್ದರು.
Be the first to comment