ಕೊರೋನಾ ಲಾಕ್ ಡೌನ್ ಮಧ್ಯೆಯೂ ಕಾರ್ಯಾಚರಣೆ ನಡೆಸಿ 18 ಕೆ.ಜಿ.ಗಾಂಜಾ ಜಪ್ತಿ ಮಾಡಿದ ಸುರಪುರ ಪೊಲೀಸರು

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್ ಟಿವಿ ಸುರಪುರ

ಸುರಪುರ: ತಾಲೂಕಿನ ಮಾಚಗುಂಡಾಳ ಗ್ರಾಮದ ಬಾಲದಂಡಪ್ಪ ಡಿ.ಬಾಕಲಿ ಎಂಬುವವರ ಜಮೀನಿನಲ್ಲಿ ಅಕ್ರಮವಾಗಿ ಬೆಳೆಯಲಾಗಿದ್ದ 18 ಕೆ.ಜಿ. 500 ಗ್ರಾಂ,ಗಾಂಜಾ ಗಿಡವನ್ನು ಜಪ್ತಿ ಮಾಡಲಾಗಿದೆ.

ಯಾದಗಿರಿ ಎಸ್ಪಿ ಋಷಿಕೇಶ ಭಗವಾನ್ ಸೋನಾವಣೆ ಮತ್ತು ಸುರಪುರ ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿಯವರ ಮಾರ್ಗದರ್ಶನದಲ್ಲಿ ಸುರಪುರ ಠಾಣೆಯ ಇನ್ಸ್ಪೆಕ್ಟರ್ ಎಸ್.ಎಮ್.ಪಾಟೀಲರ ನೇತೃತ್ವದಲ್ಲಿ ಮುಖ್ಯ ಪೇದೆಗಳಾದ ಮನೋಹರ, ಚಂದ್ರಶೇಖರ, ಮಂಜುನಾಥ ಮತ್ತು ಪೇದೆಗಳಾದ ಬಸವರಾಜ, ಸುಭಾಸ, ಪರಮೇಶಿ, ಮಹಾಂತೇಶ ಇವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಹೊಲದಲ್ಲಿ ಬೆಳೆದಿದ್ದ ಗಾಂಜಾ ಜಪ್ತಿ ಮಾಡಲಾಗಿದ್ದು, ವ್ಯಕ್ತಿಯನ್ನು ಬಂಧಿಸುವಲ್ಲಿ ಸುರಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಪ್ತಿ ಮಾಡಲಾದ ಗಾಂಜಾದ ಮೌಲ್ಯ ಸುಮಾರು 55,500 ರೂಪಾಯಿಗಳು ಎಂದು ಅಂದಾಜಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Be the first to comment

Leave a Reply

Your email address will not be published.


*