ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಲಕ್ಷ ರೂ.ಗಳ ಚೆಕ್ ದೇಣಿಗೆ

ವರದಿ:- ರಾಜೇಂದ್ರ ರಾಜವಾಳ ಕಲಬುರಗಿ

ಜೀಲ್ಲಾ ಸುದ್ದಿಗಳು

ಕಲಬುರಗಿ : ಕೊರೋನಾ ವೈರಸ್ (ಕೋವಿಡ್-19) ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಲಬುರಗಿ ನಗರದ ಗೋದುತಾಯಿ ಕಾಲೋನಿಯ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯವರು ಗುರುವಾರ ಜಿಲ್ಲಾಧಿಕಾರಿ ಶರತ್ ಬಿ. ಅವರಿಗೆ 1 ಲಕ್ಷ ರೂ.ಗಳ ಚೆಕ್‍ನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಬಸವರಾಜ ಭೀಮಳ್ಳಿ, ಉಪಾಧ್ಯಕ್ಷ ಹಾಗೂ ಅಫಜಲಪುರ ಶಾಸಕರಾದ ಎಂ. ವೈ. ಪಾಟೀಲ್, ಕಾರ್ಯದರ್ಶಿ ಶಿವಪುತ್ರಪ್ಪಾ ಡೆಂಕಿ ಹಾಗೂ ಪ್ರಾಂಶುಪಾಲ ನಾಗೇಂದ್ರ ಬಡಿಗೇರ ಅವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*