ಜೀಲ್ಲಾ ಸುದ್ದಿಗಳು
ಬೀದರ್, ಕೋರೋನಾ ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರು ವಿವಿಧ ತಂಡಗಳನ್ನು ಮತ್ತು ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದ್ದಾರೆ.
ನಿರ್ಬಂಧ ತಂಡ: ಜಿಲ್ಲೆಯ ನಿರ್ಬಂಧ ಯೋಜನೆಯ ಸಿದ್ಧತೆ., ಪಾಸಿಟಿವ್ ಪ್ರಕರಣಗಳು ವರದಿಯಾದ ಸ್ಥಳದಲ್ಲಿ ಆರೋಗ್ಯ ಇಲಾಖೆಯ ಪ್ರಮಾಣಿ ಕಾರ್ಯ ನಿರ್ವಹಣ ಕಾರ್ಯ ವಿಧಾನದ ಅನ್ವಯ ಪ್ರದೇಶಗಳ ನಿಬಂಧವನ್ನು ಖಾತರಿಪಡಿಸುವುದು.
ಮೇಲ್ವಿಚಾರಣೆ: ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ್., ಸಹಾಯಕ ಆಯುಕ್ತರು ಬೀದರ/ಬಸವಕಲ್ಯಾಣ., ಡಿವೈಎಸ್‌ಪಿ ಬೀದರ ಹಾಗೂ ಭಾಲ್ಕಿ ಮತ್ತು ಹುಮನಾಬಾದ್.
ಮೃತದೇಹಗಳನ್ನು ಒಳಗೊಂತೆ ಜೈವಿಕ ತ್ಯಾಜ್ಯದ ನಿರ್ವಹಣೆ: ಭಾರತ ಸರ್ಕಾರದ ಶಿಷ್ಪಾಚಾರದ ಅನ್ವಯ ಜೈವಿಕ ತ್ಯಾಜ್ಯ ನಿರ್ವಹಣೆ ಮತ್ತು ಆ ಬಗ್ಗೆ ತರಬೇತಿ., ಪ್ರಮಾಣಿತ ಕಾರ್ಯ ನಿರ್ವಹಣಾ ಕಾರ್ಯ ವಿಭಾಗದ ಅನ್ವಯ ಯಾವುದೇ ಪಾಸಿಟಿವ್ ಪ್ರಕರಣವಿದ್ದರೆ ಮೃತದೇಹಗಳ ನಿರ್ವಹಣೆ ಮತ್ತು ವಿಲೇವಾರಿ ಜಿಲ್ಲಾಧಿಕಾರಿಗಳ ಮೂಲಕ ಗೊತ್ತುಪಡಿಸಿದ ಯಾವುದೇ ಇತರ ಚಟುವಟಿಕೆಗಳು.
ಮೇಲ್ವಿಚಾರಣೆ: ನಿರ್ದೇಶಕರು ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೀದರ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬೀದರ., ಜಿಲ್ಲಾ ಸರ್ವೆಲನ್ಸ್ ಆಫೀಸರ್ ಬೀದರ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ್., .ಡಾ.ಸುನೀಲ್ ತಪಸೆ ಫೋರೆನ್ಸಿಕ್ ಡಿಪಾರ್ಮೆಂಟ್ ಹೆಚ್‌ಓಡಿ., ಡಿವೈಎಸ್‌ಪಿ ಬೀದರ ಹಾಗೂ ಭಾಲ್ಕಿ ಮತ್ತು ಹುಮನಾಬಾದ್.
ಅಂಬುಲೆನ್ಸ್ ಮತ್ತು ಸಂಚಾರ ನಿರ್ವಾಹಣೆ: ಎಲ್ಲಾ ಅಂಬುಲೆನ್ಸಗಳು ಕಾರ್ಯ ನಿರ್ವಹಿಸುವ ಸ್ಥಿತಿಯಲ್ಲಿದೆ ಮತ್ತು ತಂಡಗಳು ಉತ್ತಮವಾಗಿ ತರಬೇತಿ ಪಡೆದಿದೆ ಎಂಬುದನ್ನು ಖಾತರಿಪಡಿಸಿ., ಎಲ್ಲಾ ಅಗತ್ಯ ಉಪಕರಣಗಳೊಂದಿಗೆ ಒಂದು ಬಂಬುಲೆನ್ಸ್ ವಾಹನವನ್ನು ಒದಗಿಸಿ ಮತ್ತು ತಾಲೂಕಾ ತರ್ತು ತಂಡದ ಬಳಕೆಗೆ ಒದಗಿಸಿದೆ., ಜಿಲ್ಲಾಧಿಕಾರಿಗಳ ಮೂಲಕ ಗೊತ್ತುಪಡಿಸಲಾದ ಯಾವುದೇ ಇತರೆ ಚಟುವಟಿಕೆಗಳು.
ಮೇಲ್ವಿಚಾರಕರು: ಜಿಲ್ಲಾ ಶಸ್ತç ಚಿಕಿತ್ಸಕರು, ಜಿಲ್ಲಾ ಆಸ್ಪತ್ರೆ ಬೀದರ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬೀದರ., ಶ್ರೀ ಅಸಲಮ್ 108 ಅಂಬ್ಯುಲೇನ್ಸ್ ಸಮಾಲೋಚಕರು
ಖಾಸಗಿ ಸಂಪನ್ಮೂಲಗಳ ಹೆಚ್ಚಳ ತಂಡ: ಸ್ವಯಂಸೇವಾ ಸಂಸ್ಥೆಗಳು ಮತ್ತು ಖಾಸಗಿ ವಲಯಕ್ಕೆ ಮಾಹಿತಿ ಪ್ರಸಾರ., ಎಲ್ಲಾ ಸಂಪನ್ಮೂಲಗಳ ವಿವರಗಳನ್ನು ಏಕ ರೂಪಗೊಳಿಸುವುದು ಮಾನವಶಕ್ತಿ ಉಪಕರಣ, ವಸ್ತುಗಳು ಇತ್ಯಾದಿ., ಸ್ವಯಂ ಸೇವಕರ ಪಟ್ಟಿಯ ಸೃಜನೆ ಮತ್ತು ತರಬೇತಿ., ಜಿಲ್ಲಾಧಿಕಾರಿಗಳ ಮೂಲಕ ಗೊತ್ತುಪಡಿಸಲಾದ
ಯಾವುದೇ ಇತರ ಚಟುವಟಿಕೆಗಳು. ಮೇಲ್ವಿಚಾರಕರು: ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಬೀದರ., ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ದಿ ಕೋಶ ಬೀದರ., ಯೋಜನಾ ನಿರ್ದೇಶಕರು, ಯೋಜನಾ ವಿಭಾಗ, ಜಿಲ್ಲಾ ಪಂಚಾಯತ ಬೀದರ., ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬೀದರ.
Be the first to comment