ಜೀಲ್ಲಾ ಸುದ್ದಿಗಳು
ಬಳ್ಳಾರಿ:ಮಹಾಮಾರಿ ಕೊರೋನಾ ವಿರುದ್ಧ ಜಾಗೃತಿ ದೀಪ ಹಚ್ಚುವಂತೆ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರು ಜನತೆಗೆ ಕರೆನೀಡಿದ್ದರು.ಈ ಹಿನ್ನಲೆಯಲ್ಲಿ ಬಳ್ಳಾರಿಯ ಜಿಲ್ಲೆಯಾಧ್ಯಂತ ಜನತೆ ತಮ್ಮ ಮನೆಗಳಲ್ಲಿ ದೀಪಹಚ್ಚಿ ಬೆಳಗಿದ್ದಾರೆ.ದೇಶ ಸಾರಿರುವ ಕೊರೋನಾ ವಿರುದ್ಧದ ಯುದ್ಧದಲ್ಲಿ ತಾವೂ ಭಾಗಿಯಾಗಿದ್ದೇವೆಂದು ಬಳ್ಳಾರಿ ಜಿಲ್ಲೆಯ ಜನತೆ ಸಾರಿ ಸಾರಿ ಹೇಳಿದ್ದಾರೆ.
*ದೀಪಹಚ್ಚಿದ ಪ್ರಮುಖರು-* ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಎನ್.ವೈ.ಗೋಪಾಲಕೃಷ್ಣ ರವರು ಬೆಂಗಳೂರಿನ ನಿವಾಸದಲ್ಲಿ ದೀಪ ಬೆಳಗಿದರು. ಅವರೊಂದಿಗೆ ಸಹೋದರ ಮಾಜಿ ಸಂಸತ್ ಸದಸ್ಯರು ಹಾಗೂ ನಿವೃತ್ತ ನ್ಯಾಯಧೀಶರಾದ ಎನ್.ವೈ.ಹನಂತಪ್ಪನವರು ತಮ್ಮ ಕುಟುಂಬದ ಸದಸ್ಯರೊಡಗೂಡಿ ಕೊರೋನಾ ವಿರುದ್ಧದ ಜಾಗೃತಿ ದೀಪ ಬೆಳಗಿದರು.
*ದೀಪಬೆಳಗಿದ ಸಂಸದರು-* ಬಳ್ಳಾರಿ ಸಂಸದರಾದ ವೈ.ದೇವೇಂದ್ರಪ್ಪರು ತಮ್ಮ ನಿವಾಸದಲ್ಲಿ ಕೊರೋನಾ ವಿರುದ್ಧದ ಜಾಗೃತಿ ದೀಪ ಬೆಳಗಿದರು.ಅವರೊಂದಿಗೆ ಅವರ ಕುಟುಂಬದ ಸದಸ್ಯರೆಲ್ಲರೂ ಸಾಥ್ ನೀಡಿದರು.ಒಟ್ಟಾರೆಯಾಗಿ ಬಳ್ಳಾರಿ ಜಿಲ್ಲೆಯ ಸಮಸ್ಥ ಜನತೆ ಹಾಗೂ ಎಲ್ಲಾ ಜನಪ್ರತಿನಿಧಿಗಳು ಪ್ರಧಾನಿಗಳ ಕರೆಗೆ ಓಗೊಟ್ಟು ಒಕ್ಕೋರಲಿನಿಂದ ವಿಜಯದ ಹಾಗೂ ಜ್ಞಾನದ ಸಂಕೇತವಾದ ದೀಪ ಬೆಳಗಿಸಿದ್ದಾರೆ.ಕೊರೋನಾ ತೊಲಗಿಸುವ ಸಕಲರೀತಿಯಲ್ಲಿ ಜಾಗೃತಿ ಕ್ರಮಗಳ ಪಾಲನೆಗೆ ಸಂಕಲ್ಪ ಮಾಡಿದರಲ್ಲದೆ.ವಿಶ್ವದಿಂದ ಕೊರೋನಾ ತೊಲಗಿ ವಿಶ್ವಕ್ಕೆ ಒಳಿತಾಗಲೆಂದು ದೀಪಬೆಳಗಿ ಜಿಲ್ಲೆಯಾದ್ಯಂತ ಪ್ರಾರ್ಥನೆ ಮಾಡಿದರು
Be the first to comment