ಕ್ರೈಮ್-ಪೋಕಸ್
ಅಂಬಿಗ ನ್ಯೂಸ್ ಡೆಸ್ಕ್
ಇದೇ ಮಾರ್ಚ್ 13 ರಂದು ಶುಕ್ರವಾರ ಸುರಪುರ ನಗರಸಭೆಯ ಹತ್ತಿರದ ಪೆಟ್ರೋಲ್ ಬಂಕ್ ಹಿಂದುಗಡೆ ಜಾಲಿಗಿಡಗಳ ಮಧ್ಯೆ ಸಾಯಂಕಾಲ 5 ಗಂಟೆಯ ಸುಮಾರಿಗೆ ಶಹಾಪೂರ ತಾಲೂಕಿನ ಕಿರಿಯ ಹೈಯ್ಯಾಳ ಗ್ರಾಮದವಳಾದ ಲಕ್ಷ್ಮೀ ದೇವಿಂದ್ರಪ್ಪ ಬನ್ನೀಕಟ್ಟಿಯನ್ನು ಕೊಲೆ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಎಸ್.ಎಮ್.ಪಾಟೀಲ್ ಅವರು ಹೇಳಿದರು.
ಶನಿವಾರ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶಹಾಪೂರ ತಾಲೂಕಿನ ಕೆ.ಹೈಯಾಳ ಗ್ರಾಮದ ದೇವಿಂದ್ರಪ್ಪ ಬನ್ನೀಕಟ್ಟಿಯ ಕೊಲೆಯಾದ ಪತ್ನಿ ಲಕ್ಷ್ಮೀಯ ಜೊತೆ ಅದೇ ಗ್ರಾಮದ ದೇವಪ್ಪ ಮೇಲಗಿರಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು.
ಅನೈತಿಕ ಸಂಬಂಧ ಹೊಂದಿದ ದೇವಪ್ಪ ಬೇರೆ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರಿಂದ ಮೃತ ಲಕ್ಷ್ಮೀ ಮದುವೆಯಾಗದಂತೆ ದೇವಪ್ಪನಿಗೆ ವಿರೋಧ ವ್ಯಕ್ತ ಪಡಿಸಿ ಹುಡುಗಿಯ ತಂದೆ-ತಾಯಿಗೆ ನೀನು ನನ್ನ ಜೊತೆಯಿರುವ ಸಂಬಂಧವನ್ನು ತಿಳಿಸಿ ಮದುವೆ ಮುರಿಸುತ್ತೇನೆ ಎಂದು ಹೇಳಿ ನನ್ನ ಜೊತೆಯಲ್ಲಿಯೇ ಇರುವಂತೆ ಬೆದರಿಕೆ ಹಾಕಿದ್ದಾಳೆ.ಹೇಗಾದರೂ ಮಾಡಿ ಈಕೆಯಿಂದ ದೂರವಾಗಬೇಕೆಂದು ನಿರ್ಧರಿಸಿ ಲಕ್ಷ್ಮೀ ತನ್ನ ತವರು ಮನೆಯಾದ ಮಾಳನೂರ ಗ್ರಾಮಕ್ಕೆ ಹೋಗಿ ಬರೋಣ ಎಂದು ಆತನಿಗೆ ಹೇಳಿದ್ದಾಳೆ.
ಇದು ಸರಿಯಾದ ಸಮಯ ಸಿಕ್ಕಿತು ಎಂದು ಕೊಂಡಿದ್ದ ದೇವಪ್ಪ ಆಕೆಯ ಜೊತೆ ಸುರಪುರಕ್ಕೆ ಬಂದು ಯಾರಿಗೂ ಸಂಶಯ ಬರಬಾರದೆಂದು ಆಕೆಗೆ ಬಸ್ ನಿಲ್ದಾಣದಿಂದ ಇಳಿದು ಬಾ ಎಂದು ಹೇಳಿ ತಾನು ಪೆಟ್ರೋಲ್ ಬಂಕ್ ಹತ್ತಿರ ಇಳಿದು ನಂತರ ಇಬ್ಬರೂ ಪೆಟ್ರೋಲ್ ಬಂಕ್ ಹಿಂದುಗಡೆಯ ಜಾಲಿಕಂಟಿಯಲ್ಲಿ ಹೋಗಿ ನಂತರ ಆಕೆಯನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದನ್ನು ವಿಚಾರಣೆಯ ವೇಳೆಯಲ್ಲಿ ಬಾಯಿಬಿಟ್ಟಿದ್ದಾನೆ .
ಮಹಿಳೆಯ ಕೊಲೆ ಮಾಡಿದ ಆರೋಪಿ ಪತ್ತೆಗಾಗಿ ಜಿಲ್ಲಾ ಎಸ್.ಪಿ. ಋಷಿಕೇಶ್ ಭಗವಾನ್ ಸೋನಾವಣೆ ಹಾಗೂ ಸುರಪುರ ಉಪ ವಿಭಾಗದ ಡಿವೈಎಸ್ಪಿ.ವೆಂಕಟೇಶ ಹುಗಿಬಂಡಿ ಅವರ ಮಾರ್ಗದರ್ಶನದಲ್ಲಿ ನನ್ನ ನೇತೃತ್ವದಲ್ಲಿ ಪಿಎಸ್ಆಯ್ ಗಳಾದ ಚೇತನ ಬಿದರಿ,ಶರಣಪ್ಪ ಹಾಗೂ ಮುಖ್ಯ ಪೇದೆಗಳಾದ ಗಣೇಶ,ಗಜೇಂದ್ರ,ಮಂಜುನಾಥ ,ಶಿವಪ್ಪ,ಮನೋಹರ ಮತ್ತು ಪೇದೆ ಸುಭಾಷ,ಎಪಿಸಿ ಮಹಾಂತೇಶ ರವರನ್ನೋಳಂಡ ವಿಶೇಷ ತಂಡ ರಚಿಸಲಾಗಿತ್ತು.ಈ ಪ್ರಕರಣವನ್ನು ಭೇದಿಸುವಲ್ಲಿ ಯಶ್ವಸಿಯಾದ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಸುರಪುರ ಉಪ ವಿಭಾಗದ ಡಿ.ಎಸ್.ಪಿ ಯವರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ ಎಂದು ಪಾಟೀಲರು ತಿಳಿಸಿದರು.
Be the first to comment