ರಾಜ್ಯದ ಸುದ್ದಿಗಳು
ನಿನ್ನೆ ಮಧ್ಯರಾತ್ರಿ ಎರಡು ಗಂಟೆಗೆ ವಾಸನಾ ಗ್ರಾಮಕ್ಕೆ ಕೇರಳದಿಂದ ಎಂಬ ವ್ಯಕ್ತಿ ಆಗಮಿಸಿದ್ದು ,ವ್ಯಕ್ತಿಯ ಆಗಮನದಿಂದ ಇಡೀ ವಾಸನ ಗ್ರಾಮವೇ ಭಯಭೀತಗೊಂಡಿದೆ. ತಕ್ಷಣ ಹರಿಹರದ ತಾಲೂಕು ದಂಡಾಧಿಕಾರಿ ಅವರಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ .ವಿಷಯವನ್ನು ಖಚಿತಪಡಿಸಿಕೊಂಡ ತಾಲ್ಲೂಕು ದಂಡಾಧಿಕಾರಿ ರಾಮಚಂದ್ರಪ್ಪನವರು ಆರೋಗ್ಯಾಧಿಕಾರಿಗಳ ಸಹಾಯದೊಂದಿಗೆ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.ಗ್ರಾಮಸ್ಥರು ಹೇಳುವ ಪ್ರಕಾರ ವ್ಯಕ್ತಿಯು ಈಗಾಗಲೇ ಕೆಮ್ಮುತ್ತಿದ್ದ ನೆಗಡಿಯಿಂದ ನರಳುತ್ತಿದ್ದ ,ತುಂಬಾ ನಿಶ್ಶಕ್ತಗೊಂಡಿದ್ದು ಭಯಭೀತರಾಗಿದ್ದಾರೆ ವ್ಯಕ್ತಿಯ ಜೊತೆಗೆ ಅವರ ತಾಯಿ ಇದ್ದು ತಾಯಿಯನ್ನು ಕರೆದುಕೊಂಡು ಹೋಗಿಲ್ಲ ಗ್ರಾಮದಲ್ಲೇ ಬಿಟ್ಟು ಹೋಗಿದ್ದಾರೆ ಎಂದು ಗ್ರಾಮದ ಜನರು ಆಕ್ರೋಶಗೊಂಡಿದ್ದಾರೆ .ವ್ಯಕ್ತಿಯನ್ನು ಪರೀಕ್ಷೆ ನಡೆಸಿದ ನಂತರ ಬರುವ ಈ ಫಲಿತಾಂಶದ ಆಧಾರದ ಮೇಲೆ ವಾಸನ ಗ್ರಾಮಕ್ಕೆ ನಿರ್ಬಂಧ ಹೇರುತ್ತಾರೆ ಕಾದು ನೋಡಬೇಕಾಗಿದೆ .
ವರದಿ.ಪ್ರಕಾಶ ಮಂದಾರ.
Be the first to comment