ತಾಂಡಾ ಗಳಲ್ಲಿ ಕೊರೋನಾ ತಾಂಡವ ಆಡದಂತೆ ಜಾಗೃತಿ: ಮುಳ್ಳುಬೇಲಿ,ಕಿಲಾಣಿ ಬಳಸಿ -ಜನತಾ ಕಫ್ಯೂ೯ಗೆ ಬೆಂಬಲ

ವರದಿ:- ವಿ.ಜಿ ವೃಷಭೇಂದ್ರ ಬಳ್ಳಾರಿ

ಜೀಲ್ಲಾ ಸುದ್ದಿಗಳು


ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ದೂಪದಳ್ಳಿ ತಾಂಡಾ ಸೇರಿದಂತೆ ಕೆಲ ಗ್ರಾಮಗಳಲ್ಲಿ ಕೊರೋನಾ ತಡೆ ಮುಂಜಾಗೃತ ಕ್ರಮಗಳನ್ನು ತಾಂಡಾದ ಯುವಕರು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಜಾರಿತರೋ ಮೂಲಕ ಅಭೂತಪೂವ೯ ಬೆಂಬಲ ಸೂಚಿಸಿದ್ದಾರೆ.ತಾಂಡಾವನ್ನು ಹೊರಗಿನವರು ಪ್ರವೇಶಿಸದಂತೆ ಮತ್ತು ತಾಂಡಾದಿಂದ ಹೊರಹೋಗದಂತೆ ತಾಂಡಾದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಮುಳ್ಳು ಬೇಲಿಗಳನ್ನು ಹಾಕಿ ಬಂದ್ ಮಾಡಿದ್ದಾರೆ.ಹಾಗೊಮ್ಮೆ ಹೊರಗಡೆ ಹೋಗುವವರು ಅಥವಾ ಬರುವವರು ಗ್ರಾಮದ ಪ್ರಮುಖರಿಗೆ ಮುಂಚಿತವಾಗಿಯೇ ತಿಳಿಸಬೇಕು.ತಮ್ಮ ಸಂಬಂಧಿಕರಿಗೆ ಅಥವಾ ಮನೆಯವರಿಗೆ ಈ ಕುರಿತು ಮಾಹಿತಿ ನೀಡಬೇಕು ಮತ್ತು ಸಕಾ೯ರದ ನಿಯಮಗಳನುಸಾರ ಸೂಕ್ತ ತಪಾಸಣೆಗೆ ಒಳಗಾಗಬೇಕಾಗಿದೆ.ಆಕಸ್ಮಾತ್ ಇದಾವುದರ ಪರಿವಿಲ್ಲದವರು ಪ್ರವೇಶಿಸಲು ಪ್ರಯತ್ನಿಸಿದರೆ ಅಥವಾ ಹೊರಹೋಗಿ ಬರಳಿ ಬಂದರೆ ಸ್ವಯಂ ಯುವಕರೆಲ್ಲರೂ ಒಟ್ಟುಗೂಡಿ ಆಶಾಕಾಯ೯ಕತೆ೯ಯರು.ಆರೋಗ್ಯ ಇಲಾಖೆ.ಅಂಗನವಾಡಿ ಕಾಯ೯ಕತೆ೯.ಗ್ರಾಪಂ ಸಿಬ್ಬಂಧಿ.ಕಂದಾಯ ಇಲಾಖೆ.ಪೊಲೀಸ್ ಇವರ ಗಮನಕ್ಕೆ ಮಾಹಿತಿನೀಡೋ ಮೂಲಕ ಕೊರೋನಾ ವಿರುದ್ಧ ಸೆಡ್ಡುಹೊಡೆದಿದ್ದಾರೆ. ಕಿಲಾಡಿಗಳಿಗೆ ಕೀಲಾ‍ಣಿ- ಜನತಾ ಕಫ್ಯೂ೯ವನ್ನು ಇಲ್ಲಿ ಸ್ವಯಂ ಗ್ರಾಮಸ್ಥರೇ ಮುತುವಜಿ೯ಯಿಂದ ನಿವ೯ಹಿಸುತ್ತಿದ್ದಾರೆ.ಕೆಲ ಕಿಲಾಡಿಗಳು ಅದನ್ನು ಉಲ್ಲಂಘಿಸುವ ಉದ್ಧಟತನ ತೋರಿದ್ದಾರೆ.ಕಿಲಾಡಿಯುವಕರು ಹರಟೆ ಹೊಡೆಯಲು ಗ್ರಾಮದಲ್ಲಿ  ಗುಂಪು ಸೇರಬಹುದಾದ ಸಾವ೯ಜನಿಕ ಸ್ಥಳಗಳಿಗೆ ಕಿಲಾಣಿಯನ್ನು ಅಥವಾ ವೇಸ್ಟ್ ಆಯಿಲನ್ನು ಹಚ್ಚುವ ಮೂಲಕ ಗುಂಪು ಗುಂಪುಗೂಡದಂತೆ ನಿಗಾವಹಿಸಿದ್ದಾರೆ.ನಂತರ ಅವರಿಗೆ ತಿಳಿಹೇಳಿ ಜಾಗೃತಿ ಮೂಡಿಸುವ ಪ್ರಾಮಾಣಿಕ ಪ್ರಯತ್ನ ನಿವ೯ಹಿಸುತ್ತಿದ್ದಾರೆ. ಪೂಜಾರಿ ಆನಂದನಾಯ್ಕ. ಕೃಷ್ಣನಾಯ್ಕ.ಭೀಮಾನಾಯ್ಕ.ರಮೇಶನಾಯ್ಕ.ಕೊಟ್ರೇಶನಾಯ್ಕ.ಶಂಕರನಾಯ್ಕ.ಚಮಲಿಬಾಯಿ.ಲಕ್ಷ್ಮೀಬಾಯಿ.ಕವಿತಾಬಾಯಿ.ನಾಗೀಬಾಯಿ.ಪಕ್ಕೀರನಾಯ್ಕ.ವೆಂಕಟೇಶನಾಯ್ಕ.ಮುಂತಾದವರ ತಂಡ ಕೊರೋನಾ ತಡೆ ಮುಂಜಾಗೃತಾ ಕಾಯ೯ಗಳಲ್ಲಿ ಸ್ವಯಂ ಪ್ರೇರಣೆಯಿಂದ ಕಾಯ೯ ನಿವ೯ಹಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.ದೇವಸ್ಥಾನದ ಆವರಣ ಹಾಗೂ ಹರಟೆ ಜಗುಲಿಗಳ ಬಳಿ.ನೀರಿನ ಟ್ಯಾಂಕ್ ಗಳ ಬಳಿ ತೆರಳಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದಾರೆ.ಅವರೊಂದಿಗೆ ಸಕಾ೯ರ ನೇಮಿಸಿರುವ ವಿವಿದ ಇಲಾಖೆಗಳ ಸಿಬ್ಬಂದಿ ಹಾಗೂ ಗ್ರಾಮದ ಹಿರಿಯರು ಸಾಥ್ ನೀಡಿದ್ದಾರೆ.

Be the first to comment

Leave a Reply

Your email address will not be published.


*