ಸುರಪುರ ನಗರದಲ್ಲಿ ಸಾರ್ವಜನಿಕರ ಆರೋಗ್ಯ ಮತ್ತು ಊಟಕ್ಕೆ ಬೇಕಾಗುವ ವಸ್ತುಗಳ ಖರೀದಿಗೆ ವ್ಯವಸ್ಥೆ

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು


ಅಂಬಿಗ ನ್ಯೂಸ್ ಡೆಸ್ಕ್

ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ಕೊರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಸುರಪುರದ ನಗರಸಭೆ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಸರತಿ ಸಾಲಿನಲ್ಲಿ ನಿಂತು ತಮಗೆ ಬೇಕಾಗುವ ದಿನೋಪಯೋಗಿ ವಸ್ತುಗಳನ್ನು ಪಡೆಯುವುದಕ್ಕೆ ಬಿಳಿ ಬಣ್ಣದ ಸುಣ್ಣದ ಮಾರ್ಕ್ ನಲ್ಲಿ ನಿಲ್ಲುವ ಮೂಲಕ ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು.

ಸಾರ್ವಜನಿಕರು ತಮ್ಮ ಆರೋಗ್ಯಕ್ಕಾಗಿ ಸ್ಥಳೀಯ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದಲ್ಲಿ ತಮ್ಮ ಆರೋಗ್ಯಕ್ಕೆ ಬೇಕಾಗುವ ಮಾತ್ರೆಗಳನ್ನು ಸರತಿ ಸಾಲಿನಲ್ಲಿ ನಿಂತು ಖರೀದಿಸಿದರು ಹಾಗೂ ಊಟಕ್ಕೆ ಬೇಕಾಗುವ ವಸ್ತುಗಳನ್ನು ತೆಗೆದುಕೊಳ್ಳಲು ಸರತಿ ಸಾಲಿನಲ್ಲಿ ನಿಂತು ಊಟದ ಸಾಮಗ್ರಿಗಳನ್ನು ಪಡೆದರು.

ಸುರಪುರ ನಗರದ ತುಂಬಾ ಕೊರೋನ ವೈರಸ್ ಹಿನ್ನೆಲೆಯಲ್ಲಿ ಸುರಪುರ ಸಾರ್ವಜನಿಕರು ಸರಕಾರದ ಆದೇಶಕ್ಕೆ ಯಾರು ಮನೆಯಿಂದ ಹೊರಗೆ ಬರದಿರುವ ಮೂಲಕ
ಲಾಕ್ ಡೌನ ಗೆ ಸ್ಪಂದಿಸಿದ್ದಾರೆ.

Be the first to comment

Leave a Reply

Your email address will not be published.


*