ಹರಿಹರ ನಗರ ಅಭಿವೃದ್ಧಿಗೆ ‘ಲಕ್ಷ್ಮಿ’ಕಟಾಕ್ಷ ಹೋಮ ಅಶ್ಯವೆಂತೆ: ಜ್ಯೋತಿಷಿ

ವರದಿ: ಪ್ರಕಾಶ ಮಂದಾರ

ಜೀಲ್ಲಾ ಸುದ್ದಿಗಳು


ಜಾಹೀರಾತು

 

ಹರಿಹರಿ:ತುಂಗೆ ಭದ್ರೆಯರ ಹರಿಯುತ್ತಿರುವ ನದಿಯ ದಡದ ಮೇಲೆ ಹರಿಹರೇಶ್ವರ ಎಂಬ ಹೊಯ್ಸಳ ಕಾಲದ ಐತಿಹಾಸಿಕ ದೇವಾಲಯವನ್ನು ಹೊಂದಿರುವ ಹರಿಹರ ತಾಲ್ಲೂಕು ಒಂದು ಕಾಲದಲ್ಲಿ ಇಡೀ ರಾಜ್ಯದ ಗಮನವನ್ನು ಸೆಳೆದಂತಹ ಪ್ರಸಿದ್ಧ ನಗರವಾಗಿತ್ತು . 

ಜಾಹೀರಾತು

ಹರಿಹರ ತಾಲ್ಲೂಕಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮೂಲಭೂತ ಸೌಲಭ್ಯ ಇರುವ ಕಾರಣ ಅನೇಕ ಪ್ರಸಿದ್ಧ ಕಾರ್ಖಾನೆಗಳು ಈ ತಾಲೂಕಿನಲ್ಲಿ ಸ್ಥಾಪನೆಗೊಂಡವು ಈ ತಾಲ್ಲೂಕಿಗೆ ಲಕ್ಷ್ಮೀ ಕಟಾಕ್ಷ ಇದ್ದ ಕಾರಣ ತಾಲ್ಲೂಕಿನ ಜನರು ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದರು .ಹರಿಹರನಗರರಾತ್ರಿಯಲ್ಲಿ

ಆದರೆ ಈಗ ಬಂದಿರುವ ನಗರಸಭೆಯ ಆಯುಕ್ತೆ ಲಕ್ಷ್ಮೀ ಇವರ ಕೃಪಾಕಟಾಕ್ಷವಿಲ್ಲದೇ ನಗರದ ಅಭಿವೃದ್ಧಿ ಕುಂಠಿತವಾಗುತ್ತಿದೆ ಇವರ ಕೃಪಾಕಟಾಕ್ಷ ಪಡೆಯಲು ಮುಂದಿನ ಅಮಾವಾಸ್ಯೆಯ ಮುಗಿದ ನಂತರ ಹೋಮ ಮಾಡುವ ಅವಶ್ಯಕತೆ ಇದೆ ಎಂದು ಜ್ಯೋತಿಷಿಯೊಬ್ಬರು ತಿಳಿಸಿದ್ದಾರೆ .

ಜಾಹೀರಾತು

ಲಕ್ಷ್ಮಿಕಟಾಕ್ಷ ಹೋಮ ನಡೆಸಿದ ನಂತರ ಹರಪನಹಳ್ಳಿ ಸರ್ಕಲ್ಲಿನಿಂದ ಶಿವಮೊಗ್ಗ ಸರ್ಕಲ್ಲಿನ ವರೆಗೆ ಬೀದಿ ದೀಪ ಅಳವಡಿಸಲು ಸಾಧ್ಯವಿದೆ .ಕಳೆದ ಒಂದು ವರ್ಷದಿಂದ ಹರಪನಹಳ್ಳಿ ಸರ್ಕಲ್ನಿಂದ ಶಿವಮೊಗ್ಗ ಸರ್ಕಲ್ಲಿನ ವರೆಗೆ ಬೀದಿ ದೀಪವಿಲ್ಲದೆ ರಾತ್ರಿಯ ಹೊತ್ತು ಜನಸಾಮಾನ್ಯರು ಪರದಾಡಬೇಕಾಗಿದೆ ಇದರಿಂದ ನಗರದ ಸೌಂದರ್ಯವೂ ಹಾಳಾಗುತ್ತಿದೆ .ಇನ್ನು ನಗರಸಭೆಯ ಮುಂಭಾಗದಲ್ಲಿ ಇರುವ ಚರಂಡಿಯ ಗಟಾರದಲ್ಲಿ ಕೊಳಕು ತುಂಬಿ ತುಳುಕುತ್ತಿದ್ದರೂ ಈ ಅಧಿಕಾರಿಗಳು ಕಣ್ಣಿಗೆ ಕಾಣುತ್ತಿಲ್ಲ, ಮೂಗಿಗೆ ವಾಸನೆಯೂ ಬಡೆಯುತಿಲೢ ಎಸಿ ಕಾರಿನ ಕಪ್ಪು ಕ್ಲಾಸಿನ ಒಳಗೆ ಪ್ರಯಾಣಿಸುವ ಇವರಿಗೆ ರಾತ್ರಿಯ ಹೊತ್ತು ಬೀದಿ ದೀಪವಾಗಲಿ ಹಗಲಿನ ಹೊತ್ತು ಚರಂಡಿಯ ಗಟಾರದ ಒಳಗಿನ ಕೊಳಕಾಗಿ ಹೇಗೆ ಕಾಣಿಸುತ್ತದೆ ನೀವೇ ಹೇಳಿ

ಕಳೆದ ಮೂರು ವರ್ಷದಿಂದ ನಗರದ ಚರಂಡಿಯ ಸ್ವಚ್ಛತೆಯನ್ನು ಮಾಡಿಲ್ಲವೆಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು .ಇನ್ನು ನಗರದ ಬೀದಿ ದೀಪವನ್ನು ಕಳೆದ ಒಂದು ವರ್ಷದಿಂದ ಅಳವಡಿಸಿದೆ ಆಯುಕ್ತರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರ ವಲಯದಿಂದ ಕೇಳಿಬಂದ ದೂರಾಗಿದೆ .ತಾಲ್ಲೂಕಿನಲ್ಲಿ ಆಳುವಂಥ ಜನಪ್ರತಿನಿಧಿಗಳು ನಮ್ಮ ನಗರ ಅಭಿವೃದ್ಧಿಯಲ್ಲಿ ಲಕ್ಷ್ಮಿ ಕಟಾಕ್ಷ ವಿಲ್ಲವೆಂದು ಪ್ರಶ್ನೆ ಮಾಡಲು ಹೋದರೆ ಆಯುಕ್ತರು ರೆಡಿಯಾದ ಉತ್ತರವನ್ನು ಇಟ್ಟುಕೊಂಡಿರುತ್ತಾರೆ ಎಂಬ ಮಾತು ತಾಲ್ಲೂಕಿನ ಜನಪ್ರತಿನಿಧಿ ಒಬ್ಬರಿಂದ ಕೇಳಿ ಬಂದಿದೆ .

                        ಜಾಹೀರಾತು

ನಗರಸಭೆ ಆಯುಕ್ತರ ಲಕ್ಷ್ಮೀ ಕಟಾಕ್ಷ ವಿಲ್ಲದೆ ನಗರದ ವಾರ್ಡ್ಗಳ ರಸ್ತೆಗಳು ಹಾಳಾಗಿ ಹೋಗಿವೆ .ಪ್ರತಿ ವಾರ್ಡಿನಲ್ಲೂ ಗುಂಡಿಬಿದ್ದ ರಸ್ತೆಗಳು, ಬೀದಿ ದೀಪ ಇಲ್ಲದ ಕಂಬಗಳು ,ನೀರು ಬಾರದ ನಳಗಳು ,ನಗರಸಭೆಯ ಆಯುಕ್ತರ ಲಕ್ಷ್ಮಿಕಟಾಕ್ಷವಿಲ್ಲದೆ ಇದ್ದ ಕಾರಣ ಪ್ರತಿ ವಾರ್ಡಿನ ಜನತೆಯ ಬಾಯಿಯಿಂದ ರಾತ್ರಿಯಾದರೆ ದೀಪದ ಕಂಬಗಳು, ಬೆಳಗ್ಗೆಯಾದರೆ ನಲ್ಲಿಯ ನಳಗಳು,ಮುಗಿಸಿ ಯಾವಾಗ ನಮ್ಮ ಮೇಲೆ ಲಕ್ಷ್ಮೀ ಕಟಾಕ್ಷ ಪ್ರಯೋಗದ ಹೋಮ ನಡೆಯುತ್ತದೆ ಎಂದು ಕಾಯುತ್ತಿದ್ದಾರೆ .

ಜಾಹೀರಾತು

ಇನ್ನು ಮುಂದಾದರೂ ಹರಿಹರ ನಗರಸಭೆಯ ಆಯುಕ್ತರು ನಗರ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ಲಕ್ಷ್ಮಿ ಕೃಪಾಕಟಾಕ್ಷವನ್ನು ತೋರುತ್ತಾರೆಯೇ ? ಅಥವಾ ಆಳುವಂತಹ ಜನಪ್ರತಿನಿಧಿಗಳು ಅಮಾವಾಸ್ಯೆಯ ನಂತರ ಹೋಮವನ್ನು ನಡೆಸಿ ಹರಿಹರ ನಗರ ಸಭೆಗೆ ಆಗಮಿಸಿದ ದಿನದಿಂದ ನಗರಕ್ಕೆ ಹಿಡಿದ ಗ್ರಹಣವನ್ನು ಬಿಡಿಸುತ್ತಾರೆ ಕಾದು ನೋಡಬೇಕಾಗಿದೆ .

ಏನೇ ಹೇಳಿ ಮುಂದಿನ ಅಮಾವಾಸ್ಯೆಯು ಹಲವು ನಕ್ಷತ್ರ ರಾಶಿಯವರಿಗೆ ಕೇಡನ್ನು ಉಂಟು ಮಾಡುತ್ತದೆ ಎಂದು ಟಿವಿಯಲ್ಲಿ ಬರುವ ಜ್ಯೋತಿಷ್ಯರು ಹೇಳುತ್ತಿದ್ದಾರೆ.

Be the first to comment

Leave a Reply

Your email address will not be published.


*