ಜೀಲ್ಲಾ ಸುದ್ದಿಗಳು
ಜಾಹೀರಾತು
ಬೆಳಗಾವಿ:ಹೌದು ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಕಲಬಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಪತ್ರಕರ್ತ ಬಸವರಾಜು ಭೇಟಿಕೊಟ್ಟು ಗ್ರಾಮೀಣ ಪ್ರದೇಶದ ಕಾರ್ಮಿಕರೊಂದಿಗೆ ಸಂವಾದ ನಡೆಸಿ ಮಾತನಾಡಿ ಪ್ರಸ್ತುತ ಗ್ರಾಮೀಣ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತೆಗೆದುಕೊಂಡು ಬಂದಿರುವ ಉದ್ಯೋಗ ಖಾತ್ರಿ ಯೋಜನೆ
ಹಾಗೂ ಗೌರವಧನವು ಗ್ರಾಮೀಣ ಪ್ರದೇಶದ ಜನತೆಯ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ, ಇದರ ಜೊತೆಗೆ ಬಹುತೇಕ ಗ್ರಾಮ ಪಂಚಾಯಿತಿ ಗಳಲ್ಲಿ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲಾ, ಹಾಗೂ ವಿಶೇಷವಾಗಿ ಉತ್ತರಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಕೈ ಗಳಿಗೆ ಕೆಲಸವೇ ಇಲ್ಲವಾಗಿದೆ. ಮತ್ತು ಈ ವಿಭಾಗದಲ್ಲಿ ಕೈಗಾರಿಕೆ ಕಾರ್ಖಾನೆಗಳು ಇಲ್ಲಾ, ಆದ್ದರಿಂದ ವರ್ಷದ ಮುಕ್ಕಾಲು ಭಾಗ ಕೆಲಸವೇ ಇಲ್ಲದಿರುವುದರಿಂದ ಈ ಭಾಗದ ಗ್ರಾಮೀಣ ಜನತೆಗೆ ಜೀವನ ನಿರ್ವಹಣೆ ತುಂಬಾನೇ ಕಷ್ಟವಾಗಿದೆ. ಆದ್ದರಿಂದ ಈ ನರೇಗಾ ಯೋಜನೆಯ ಅವಧಿ ಹಾಗೂ ಗೌರವಧನವನ್ನು ಹೆಚ್ಚಳ ಮಾಡಿದರೇ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ಜನ ಜೀವನ ವ್ಯವಸ್ಥೆ ಸುದಾರಿಸಬಹುದು ಎಂದು ಅಭಿಪ್ರಾಯ ಪಟ್ಟರು.
Be the first to comment