ಶಿವಮೊಗ್ಗ ,ದಾವಣಗೆರೆ ಜಿಲ್ಲಾ ಅಧ್ಯಕ್ಷರಾಗಿ ಪ್ರಕಾಶ್ ಮಂದಾರ ನೇಮಕ .

ವರದಿ: ಅಮರೇಶ ಕಾಮನಕೇರಿ

 


ದಾವಣಗೆರೆ:-ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ (ರಿ)ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಅಧ್ಯಕ್ಷರಾಗಿ ಹಾಗೂ ಮಾಧ್ಯಮ ಶಾಲೆಗಾಗಿ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮ ವರದಿಗಾರ ಪ್ರಕಾಶ್ ಮಂದಾರ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ .

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ನಡೆದ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕಾರಿಣಿ ಕಾರ್ಯಕಾರಿಣಿ ಸಭೆಯಲ್ಲಿ ಪ್ರಕಾಶ್ ಮಂದಾರ ಇವರನ್ನು ಸಂಘಟನೆಯ ಎಲ್ಲ ಕಾರ್ಯಕರ್ತರು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ .

ಈಗಾಗಲೇ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಮಾಧ್ಯಮ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಕಾಶ್ ಮಂದಾರ ಇವರು ಹರಿಹರ ತಾಲ್ಲೂಕು ಒಂದರಲ್ಲೇ ಕೇವಲ ಒಂದು ವಾರದ ಅಂತರದಲ್ಲಿ ಇನ್ನೂರ ಒಂಬತ್ತು ಕಾರ್ಯಕರ್ತರನ್ನು ಸಂಘಟನೆಯ ಸೇರ್ಪಡೆಗೊಳಿಸಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ .ದಿನದಿಂದ ದಿನಕ್ಕೆ ಸಂಘಟನೆ ಸೇರುವ ಕಾರ್ಯಕರ್ತರ ಸಂಖ್ಯೆ ಹೆಚ್ಚುತ್ತಿದ್ದು ಈ ತಿಂಗಳ ಅಂತ್ಯದಲ್ಲಿ ಸರಿ ಸುಮಾರು ಒಂದು ಸಾವಿರ ಕಾರ್ಯಕರ್ತರನ್ನು ಸೇರ್ಪಡೆಗೊಳಿಸುವ ಗುರಿಯನ್ನು ಹೊಂದಿದ್ದಾರೆ.

ಜಾಹೀರಾತು

ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ತಾಲ್ಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅಂದಿಗೆ ಜೊತೆಗೂಡಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯನ್ನು ಬಲಪಡಿಸುತ್ತಿರುವ ಇವರ ಕಾರ್ಯವನ್ನು ಮೆಚ್ಚಿ ದಾವಣಗೆರೆ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಅಧ್ಯಕ್ಷರನ್ನಾಗಿ ಸಂಘಟನೆಯ ರಾಜ್ಯಾಧ್ಯಕ್ಷ ರಾದ ರಾಜೇಶ್ ರೆಡ್ಡಿ ಇವರು ನೇಮಕ ಮಾಡಿ ಆದೇಶ ಹೊರಿಸಿದ್ದಾರೆ.

ಜಾಹೀರಾತು

ಜಿಲ್ಲಾ ಹೆಚ್ಚುವರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಪ್ರಕಾಶ್ ಮಂದಾರ ಇವರು ಇದುವರೆಗೂ ನಾನು ಪತ್ರಿಕಾ ಒಬ್ಬ ಪತ್ರಕರ್ತನಾಗಿ ಜನಸಾಮಾನ್ಯರ ಧ್ವನಿಯಾಗಿ ಕಾರ್ಯ ನಿರ್ವಹಿಸಿದ್ದೆ .ಪತ್ರಿಕೆಯ ಜೊತೆಗೆ ಸಂಘಟನೆ ಇದ್ದರೆ ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಇನ್ನೂ ಸುಲಭವಾಗಿ ಮಾಡಿಕೊಳ್ಳುವುದರ ಜೊತೆಗೆ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಲು ಸಾಧ್ಯವಾಗುತ್ತದೆ .ರಾಜ್ಯಾಧ್ಯಕ್ಷರು ನನ್ನ ಮೇಲೆ ನಂಬಿಕೆ ಇಟ್ಟು ಹೊಸ ಜವಾಬ್ದಾರಿಯನ್ನು ನೀಡಿದ್ದಾರೆ ಅವರ ನಂಬಿಕೆ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಸಂಘಟನೆಯನ್ನು ಬಲಪಡಿಸುತ್ತೇನೆ.

ಜಾಹೀರಾತು

ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಎಂದರೆ ಒಂದು ಸಂಘಟನೆಯಲ್ಲ ಅದು ಒಂದು ಶಕ್ತಿ ಎಂಬ ಸಂದೇಶವನ್ನು ಭ್ರಷ್ಟ ಅಧಿಕಾರಿಗಳೇ ರವಾನಿಸುತ್ತೇನೆ .ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲಾ ವ್ಯಾಪ್ತಿಯ ಪ್ರತಿ ತಾಲ್ಲೂಕಿಗೂ ಸಂಘಟನೆಯನ್ನು ಬಲ ಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ .ನನಗೆ ನೀಡಿದ ಶಾ ಜವಾಬ್ದಾರಿಯಿಂದ ಇಡೀ ರಾಜ್ಯವೇ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಡೆ ತಿರುಗಿ ನೋಡುವಂತೆ ಮಾಡುತ್ತೇನೆ .ಇಂದಿನಿಂದ ಇನ್ನು ಒಂದು ತಿಂಗಳ ಒಳಗೆ ನಮ್ಮ ಸಂಘಟನೆಯ ಕಾರ್ಯಕರ್ತರ ಸಂಖ್ಯೆ ಸಾವಿರಕ್ಕೆ ಏರಿಸುವ ಗುರಿಯನ್ನು ಹೊಂದಿದ್ದೇನೆ .ಆ ನಿಟ್ಟಿನಲ್ಲಿ ತಾಲ್ಲೂಕು ಅಧ್ಯಕ್ಷರ ಜೊತೆಗೂಡಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ ನನ್ನ ಕಾರ್ಯವನ್ನು ಪ್ರಾರಂಭಿಸುತ್ತೇನೆ .ಏಪ್ರಿಲ್ ತಿಂಗಳ ನಂತರ ದಾವಣಗೆರೆ ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲೂ ಸಂಘಟನೆಯನ್ನು ಬಲಪಡಿಸುತ್ತೇನೆ .ಮುಂದಿನ ನವೆಂಬರ್ ಒಂದನೇ ತಾರೀಕಿನ ಒಳಗೆ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯಿಂದ ಸಂಘಟನೆಯ ಕಾರ್ಯಕರ್ತರ ಸಂಖ್ಯೆ ಐದು ಸಾವಿರ ಗಡಿ ದಾಟಬೇಕೆಂಬ ಗುರಿಯನ್ನು ಹೊಂದಿದ್ದೇನೆ ಎಂದು ಮಾಧ್ಯಮ ಪ್ರತಿನಿಧಿಯೊಂದಿಗೆ ತಮ್ಮ ಹೊಸ ಜವಾಬ್ದಾರಿಯ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಜಾಹೀರಾತು

ಇಂದಿನ ಕಾರ್ಯಕ್ರಮದ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ರಾಜೇಶ್ ರೆಡ್ಡಿ ,ಹರಿಹರ ತಾಲ್ಲೂಕು ಘಟಕದ ಅಧ್ಯಕ್ಷರಾದ ಅಣ್ಣಪ್ಪ ,ನಗರ ಘಟಕದ ಅಧ್ಯಕ್ಷರಾದ ರವಿರಾಜ್, ಉಪಾಧ್ಯಕ್ಷರಾದ ಕುಮಾರ್ ,ಯುವ ಘಟಕದ ಅಧ್ಯಕ್ಷರಾದ ರಮೇಶ್ ಬಣಕಾರ್ ,ಉಪಾಧ್ಯಕ್ಷರಾದ ಅವಿನಾಶ್ , ಗ್ರಾಮಾಂತರ ಘಟಕದ ಅಧ್ಯಕ್ಷರಾದ ರಾಜು ಬಿಎಂ ,ಪ್ರಧಾನ ಕಾರ್ಯದರ್ಶಿ ಮಾರುತಿ ಟಿ ಖಜಾಂಚಿ ಮಂಜು ವರ್ಧನ್ ,ಹಾಗೂ ಸಂಘಟನೆಯ ಎಲ್ಲ ಪದಾಧಿಕಾರಿಗಳು ಕಾರ್ಯಕರ್ತರು ಈ ಕಾರ್ಯಕ್ರಮದ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Be the first to comment

Leave a Reply

Your email address will not be published.


*